More

    ಉತ್ತಮ ಪಲಿತಾಂಶಕ್ಕೆ ಗುರಿಯ ಸಂಯೋಜನೆ ಅಗತ್ಯ

    ಬಾಗಲಕೋಟ: ಗುರಿಯನ್ನು ಸಂಯೋಜನೆಗೊಳಿಸಿಕೊ0ಡಾಗ ಉತ್ತಮ ಪಲಿತಾಂಶ ಸಾದ್ಯವಾಗುತ್ತದೆ ವಿದ್ಯಾರ್ಥಿಗಳಲ್ಲಿ ಶ್ರಮ,ಶೃದ್ಧೆ, ಗುರಿ ಮುಖ್ಯವಾಗುತ್ತವೆ ಎಂದು ಅಕ್ಕಮಹಾದೇವಿಯ ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ಕ್ರೀಡಾ ವಿಜ್ಞಾನ ಸಹ ಪ್ರಾಧ್ಯಾಪಕ ಡಾ.ಶ್ರೀನಿವಾಸ ಯಾದವ ಹೇಳಿದರು.

    ಬಿ.ವ್ಹಿ.ವ್ಹಿ.ಸಂಘದ ಅಕ್ಕಮಹಾದೇವಿ ಮಹಿಳಾ ಕಲಾ,ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯ ಬಾಗಲಕೊಟೆ,ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ,ವಿಜಯಪುರ ಇವರ ಸಹಯೋಗದಲ್ಲಿ ಸೋಮವಾರ ಬಿ.ವ್ಹಿ.ವ್ಹಿ.ಸಂಘ ಆಟದ ಮೈದಾನದಲ್ಲಿ ಜರುಗಿದ ಅಂತರ-ಮಹಾವಿದ್ಯಾಲಯಗಳ ಖೋ-ಖೋ ಹಾಗೂ ಹಾಕಿ ಪಂದ್ಯಾಟಗಳು ಮತ್ತು ಕ.ರಾ.ಅ.ಮ.ವಿಶ್ವವಿದ್ಯಾನಿಲಯ ತಂಡದ ಆಯ್ಕೆ ೨೦೨೩-೨೪.ರ ಉಧ್ಘಾಟನಾ ಸಮಾರಂಭದಲ್ಲಿ ಪಂದ್ಯಾಟಗಳಿಗೆ ಚಾಲನೆ ನೀಡಿ ಮಾತನಾಡಿದರು.

    ಮಹಿಳಾ ವಿಶ್ವವಿದ್ಯಾಲಯ ಅಭಿವೃದ್ದಿ ಪಥದತ್ತ ಸಾಗುತ್ತಿರುವು ಸಂದರ್ಭದಲ್ಲಿ ಎಲ್ಲ ಮಹಾವಿದ್ಯಾಲಯಗಳ ವಿದ್ಯಾರ್ಥಿಗಳ ಸಹಕಾರ ಅಗತ್ಯವಾಗಿದ್ದು, ಬಿ.ವ್ಹಿ.ವ್ಹಿ.ಎಸ್ ಅಕ್ಕಮಹಾದೇವಿ ಮಹಿಳಾ ಮಹಾವಿದ್ಯಾಲಯ ಕ್ರೀಡಾ ಸಂಘಟೆಯನ್ನು ಮಾಡಿದ್ದು ಶ್ಲಾಘನೀಯ,ಪ್ರಥಮ ಬಾರಿಗೆ ನಾಲ್ಕು ಹಾಕಿ ತಂಡಗಳು ಬಾಗವಹಿಸಿದ್ದು ಹೆಮ್ಮೆಯ ವಿಷಯವಾಗಿದೆ, ಆಧುನಿಕ ತಂತ್ರಜ್ಞಾನದ ಯುಗದಲ್ಲಿ ಮಹಿಳೆಯರು ಹೆಚ್ಚಾಗಿ ಕ್ರೀಡೆಗಳಲ್ಲಿ ಭಾಗವಹಿಸುತ್ತಿರುವುದ ಉತ್ತಮ ಬೇಳವಣಿಗೆಯಾಗಿದೆ ಎಂದರು.

    ಮುಖ್ಯ ಅತಿಥಿಗಳಾಗಿ ಬಸವೇಶ್ವರ ವಿಜ್ಞಾನ ಮಹಾವಿದ್ಯಾಲಯ ಪ್ರಾಚಾರ್ಯ ಹಾಗೂ ಕಾಲೇಜುಗಳ ಆಡಳಿತ ಮಂಡಳಿ ಪದನಿಮಿತ್ಯ ಕಾರ್ಯದರ್ಶಿ ಡಾ.ಎಸ್.ಎಮ್.ಗಾಂವಕರ ಮಾತನಾಡಿ ಉತ್ತಮ ಆರೋಗ್ಯಕ್ಕಾ ಕ್ರೀಡೆ ಅಗತ್ಯವಾಗಿದೆ ಎಂದರು.

    ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅಕ್ಕಮಹಾದೇವಿ ಮಹಿಳಾ ಕಾಲೇಜಿನ ಪ್ರಾಚಾರ್ಯ ಎಸ್.ಜೆ.ಒಡೆಯರ ಈ ಬಾರಿ ತಂಡದ ಆಯ್ಕೆ ಜೋತೆಗೆ ಇಲ್ಲೆ ಪಂದ್ಯಾವಳಿ ನಡೆಯುತ್ತಿರುವುದು ನಮ್ಮ ಮಹಾವಿದ್ಯಾಲಯಕ್ಕೆ ಹೆಮ್ಮೆಯೆ ವಿಷಯವಾಗಿದೆ, ಹಾಕಿ ಪಂದ್ಯಾವಳಿಗೆ ನಾಲ್ಕೂ ತಂಡ ಹಾಗೂ ಖೋ ಖೋ ಪಂದ್ಯಾವಳಿಗೆ ೭ ವಿವಿಧ ಮಹಿಳಾ ಕಾಲೇಜಿನ ತಂಡಗಳು ಭಾಗವಹಿಸಿರುವುದು ಸಂತೋಷದ ವಿಷಯ, ಸಮುದಾಯದ ಆರೋಗ್ಯಕ್ಕಾಗಿ ಮಹಿಳೆ ಆರೋಗ್ಯವಾಗಿರುವುದು ಅತಿ ಮುಖ್ಯ ಆದ್ದರಿಂದ ವಿದ್ಯಾರ್ಥೀನಿಯರು ಕ್ರೀಡೆಗಳಲ್ಲಿ ಕ್ರೀಡಾ ಮನೋಭಾವದಿಂದ ಭಾಗವಹಿಸಿ ಮಹಾವಿದ್ಯಾಲಯಕ್ಕೆ ಹಾಗೂ ತಂದೆ ತಾಯಿಗೆ ಕೀರ್ತಿ ತರಲಿ ಎಂದರು.

    ಕಾರ್ಯಕ್ರಮದಲ್ಲಿ ಹಾಕಿ ಆಯ್ಕೆ ಸಮೀತಿ ಸದಸ್ಯ ಡಾ.ಕೀರಣ ಕೆ, ಇನ್ನು ಖೊ ಖೋ ಆಯ್ಕೆ ಸಮಿತಿ ಸದಸ್ಯ ವಿಶ್ವನಾಥ ನಡಕಟ್ಟಿ, ಮಹಾಂತೇಶ ಲಾಯದಗುಂದಿ,ಶಿವಾನಂದ ಎಲ್.ಈ. ಐಕ್ಯೂಎಸಿ ಸಂಯೋಜಕಿ ಪಿ.ಕೆ ಚೌಗರಾ, ದೈಹಿಕ ನಿರ್ದೇಶಕಿ ಡಾ.ಎಂ.ವಿ.ಬಾಜಪ್ಪನ್ನವರ ಸೇರಿದಂತೆ ವಿಜಯಪುರ,ರಾಯಚೂರ, ಹುಬ್ಬಳ್ಳಿ,ಬಳ್ಳಾರಿ, ಬಾಗಲಕೋಟೆ ಮಹಿಳಾ ಮಹಾವಿದ್ಯಾಲಯದ ವಿದ್ಯಾರ್ಥೀನಿಯರು ಪಂದ್ಯಾವಳಿಗಳಲ್ಲಿ ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts