More

    ಉತ್ತಮ ನಾಯಕರ ಆಯ್ಕೆಗಾಗಿ ಮತದಾನದ ಹಕ್ಕು ಚಲಾಯಿಸಿ

    ತಾಳಿಕೋಟೆ: ಒಳ್ಳೆಯ ನಾಯಕನನ್ನು ಆಯ್ಕೆಮಾಡಲು ಮತದಾನದ ಹಕ್ಕು ಚಲಾಯಿಸುವ ಕಾರ್ಯವನ್ನು ಎಲ್ಲರೂ ಮಾಡಬೇಕು. ಸಂವಿಧಾನ ರಚನೆಯಾದ ಕಾಲದಿಂದಲೂ ನಮ್ಮ ಹಕ್ಕು ಎಲ್ಲರಿಗೂ ದೊರೆತಿದೆ ಎಂದು ತಹಸೀಲ್ದಾರ್ ಕೀರ್ತಿ ಚಾಲಕ ಹೇಳಿದರು.

    ಸ್ಥಳೀಯ ಖಾಸ್ಗತೇಶ್ವರ ಕಲಾ ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯದ ಸಭಾಭವನದಲ್ಲಿ ಚುನಾವಣೆ ಸಾಕ್ಷರತಾ ಕೂಟ, ರಾಜ್ಯಶಾಸ ವಿಭಾಗ, ತಹಸೀಲ್ದಾರ್ ಕಚೇರಿ ಸಹಯೋಗದಲ್ಲಿ ಗುರುವಾರ ಏರ್ಪಡಿಸಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

    ಮುದ್ದೇಬಿಹಾಳ ವಿಭಾಗದಲ್ಲಿ 62 ಮತಗಟ್ಟೆಗಳು, ದೇವರಹಿಪ್ಪರಗಿ ವಿಭಾಗದಲ್ಲಿ 69 ಮತಗಟ್ಟೆಗಳು ಇದ್ದು, ತಾಳಿಕೋಟೆ ತಾಲೂಕಿನ ಒಟ್ಟು ಮತದಾರರ 88081 ಮತದಾರರು ಇದ್ದಾರೆ. 17 ವರ್ಷ ತುಂಬಿದ ಯುವಜನತೆ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಿಸಿ 18 ವರ್ಷ ತುಂಬಿದ ನಂತರ ಮತ ಚಲಾಯಿಸಬಹುದು ಎಂದರು.

    ತಾಪಂ ಇಒ ಬಸವಂತ್ರಾಯಗೌಡ ಬಿರಾದಾರ ಮಾತನಾಡಿ, ಸಂವಿಧಾನ ರಚನೆಯಾದ ನಂತರ ಎಲ್ಲ ಹಕ್ಕುಗಳು ನಮಗೆ ದೊರೆತಿವೆ. ಮತದಾನದ ಹಕ್ಕು ಸ್ವಾತಂತ್ರೃ ಪೂರ್ವದಲ್ಲಿ ಇದ್ದಿಲ್ಲ. ಸ್ವಾತಂತ್ರೃದ ನಂತರವೇ ಪ್ರಜಾಪ್ರಭುತ್ವವೆಂಬುದು ಹೊರಬಂದಿದೆ. ಯಾವ ಭಯಭೀತಿ ಇಲ್ಲದೆ ಹಕ್ಕನ್ನು ಚಲಾಯಿಸಬೇಕು ಎಂದರು.

    ಚುನಾವಣೆ ಸಾಕ್ಷರತಾ ಕೂಟದ ಮುಖ್ಯಸ್ಥ ಡಾ.ಅಜಯ ಅಬ್ಬಾರ ಪ್ರಮಾಣ ವಚನ ಬೋಧಿಸಿ ಮಾತನಾಡಿ, ಚುನಾವಣಾ ಸಾಕ್ಷರತಾ ಕೂಟ ಅನೇಕ ಸ್ಪರ್ಧೆಗಳನ್ನು ಏರ್ಪಡಿಸಿ ವಿದ್ಯಾರ್ಥಿಗಳಲ್ಲಿ ಪ್ರತಿವರ್ಷವೂ ಮತದಾನದ ಕುರಿತು ಅರಿವು ಮೂಡಿಸುತ್ತಿದೆ ಎಂದರು.

    ಕಾಲೇಜು ಅಧ್ಯಕ್ಷ ವಿ.ಸಿ.ಹಿರೇಮಠ (ಹಂಪಿಮುತ್ಯಾ) ಮಾತನಾಡಿ, ಉತ್ತಮ ನಾಯಕರನ್ನು ಆಯ್ಕೆ ಮಾಡಲು ಭಾರತೀಯ ಚುನಾವಣಾ ಆಯೋಗ ಮತದಾನವೆಂಬ ಆಯುಧ ಕೊಟ್ಟಿದೆ. ಅದನ್ನು ಸದ್ಭಳಕೆ ಮಾಡಿಕೊಳ್ಳಬೇಕು ಎಂದರು.

    ಎಸ್.ಕೆ.ಮಹಾವಿದ್ಯಾಲಯದ ಪ್ರಾಚಾರ್ಯ ಆರ್.ವಿ.ಜಾಲವಾದಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ಅವರು ರಚಿಸಿದ ಸಂವಿಧಾನ ಅತ್ಯಮೂಲ್ಯವಾಗಿದೆ. ಪ್ರತಿವರ್ಷ ಚುನಾವಣಾ ಆಯೋಗದ ಮಾಹಿತಿಯಂತೆ ಅನೇಕ ವಿಷಯಗಳ ಕುರಿತು ವಿದ್ಯಾರ್ಥಿಗಳಿಗಾಗಿ ಸ್ಪರ್ಧೆ ಏರ್ಪಡಿಸಲಾಗುತ್ತದೆ. ನಮ್ಮ ಕಾಲೇಜಿನ ವಿದ್ಯಾರ್ಥಿಗಳು ರಾಜ್ಯಮಟ್ಟದವರೆಗೆ ಪ್ರಬಂಧ ಮಂಡಿಸಿ ಭಹುಮಾನ ಪಡೆದಿದ್ದು ಸ್ಮರಣೀಯ ಎಂದರು.

    ಪುರಸಭೆ ಮುಖ್ಯಾಧಿಕಾರಿ ಮೋಹನ ಜಾಧವ, ತಹಸೀಲ್ದಾರ್ ಕಚೇರಿ ಶಿರಸ್ತೆದಾರ ಜೆ.ಆರ್.ಜೈನಾಪುರ, ಎಸ್‌ಡಿಸಿ ಎಂ.ಎಂ.ಅತ್ತಾರ, ಎಂ.ಎ.ಏಕೀನ್, ಬಿಎಲ್‌ಒ ಸೂಪರ್‌ವೈಜರ್ ಆರ್.ಎ.ವಿಜಾಪುರ, ನೀಲಮ್ಮ ಪಾಟೀಲ, ಶ್ರೀಪಾದ ಜೋಶಿ ಇತರರಿದ್ದರು.

    ಶಿವಲೀಲಾ ಮೇಟಿ ಅನಿಸಿಕೆ ವ್ಯಕ್ತಪಡಿಸಿದರು. ಭಾಗ್ಯಾ ಇಳಕಲ್ಲ ಸ್ವಾಗತ ಗೀತೆ ಹಾಡಿದರು. ಡಾ.ಹೇಮಾ ಜೈನಾಪುರ ಸ್ವಾಗತಿಸಿದರು. ಲಲಿತಾ ಗೌಡರ ನಿರೂಪಿಸಿದರು. ಡಾ.ದೀಪಾ ಮಳಗೆ ಪ್ರಶಸ್ತಿ ವಿತರಣೆ ಕಾರ್ಯಕ್ರಮ ನಡೆಸಿಕೊಟ್ಟರು. ಎಸ್.ಜಿ.ಕೊಡೇಕಲ್ಲಮಠ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts