More

    ಉತ್ತಮ ಆರೋಗ್ಯಕ್ಕೆ ಯೋಗ ಮಾಡಿ

    ಬೀದರ್: ಉತ್ತಮ ಆರೋಗ್ಯಕ್ಕೆ ಪ್ರತಿಯೊಬ್ಬರೂ ನಿತ್ಯ ಯೋಗ ಮಾಡಬೇಕು ಎಂದು ಜಾಸ್ಮಿನ್ ಶಿಕ್ಷಣ ಮತ್ತು ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಅಜಿಜ್ ಖಾನ್ ಹೇಳಿದರು.
    ನಗರದ ಜಾಸ್ಮಿನ್ ಶಿಕ್ಷಣ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಯೋಗ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
    ಭಾರತೀಯ ಪರಂಪರೆಯಲ್ಲಿ ಯೋಗಕ್ಕೆ ಬಹಳ ಮಹತ್ವ ಇದೆ. ಯೋಗ ಸದೃಢ ದೈಹಿಕ, ಮಾನಸಿಕ ಆರೋಗ್ಯ ಕಾಯ್ದುಕೊಳ್ಳಲು ಹಾಗೂ ಕ್ರೀಯಾಶೀಲರಾಗಿಲು ನೆರವಾಗುತ್ತದೆ ಎಂದು ತಿಳಿಸಿದರು.
    ಗುರುನಾನಕ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ರಾಜಶೇಖರ ಅಲಮಾಜೆ ಮಾತನಾಡಿ, ಯೋಗ ದೈನಂದಿನ ಚಟುವಟಿಕೆಯ ಭಾಗವಾಗಬೇಕು ಎಂದು ಸಲಹೆ ಮಾಡಿದರು.
    ಪ್ರಾಚಾರ್ಯ ಸುನೀಲ್ ಮಾಳಗೆ ಅಧ್ಯಕ್ಷತೆ ವಹಿಸಿದ್ದರು. ಗೌತಮ ಕಸ್ತೂರೆ, ಸಬಸ್ಟಿನ್ ಜಾಯ್, ಶರಣುಕುಮಾರ, ರಿಜ್ವಾನಾ ಬೇಗಂ, ವಿಲ್ಸನ್ ಇದ್ದರು. ಯೋಗ ಶಿಕ್ಷಕ ಶಿವಕುಮಾರ ರೆಡ್ಡಿ ಅವರು ಬಿ.ಎಡ್. ದ್ವಿತೀಯ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಯೋಗದ ವಿವಿಧ ಪ್ರಕಾರಗಳನ್ನು ಹೇಳಿಕೊಟ್ಟರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts