More

    ಉತ್ತಮ ಆರೋಗ್ಯಕ್ಕೆ ಪೌಷ್ಟಿಕ ಆಹಾರ ಸೇವಿಸಿ

    ಹೂವಿನಹಿಪ್ಪರಗಿ: ಅಪೌಷ್ಟಿಕತೆ ನಿವಾರಣೆಗೆ ಪೌಷ್ಟಿಕಾಂಶವುಳ್ಳ ಆಹಾರ ಅತ್ಯವಶ್ಯಕವಾಗಿದ್ದು, ಪ್ರತಿಯೂಬ್ಬರು ಪೌಷ್ಟಿಕ ಆಹಾರ ಸೇವನೆ ಮಾಡುವ ಮೂಲಕ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೂಂಡು ರೋಗಮುಕ್ತ ಸಮಾಜ ನಿರ್ಮಿಸಬೇಕೆಂದು ಹೂವಿನಹಿಪ್ಪರಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಮುದಾಯ ಆರೋಗ್ಯ ಅಧಿಕಾರಿ ಹೀನಾಕೌಸರ ಪಟೇಲ್ ಹೇಳಿದರು.

    ಸಮೀಪದ ಅಗಸಬಾಳ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಬಸವನಬಾಗೇವಾಡಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಪೋಷಣ ಮಾಸಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

    ಪೌಷ್ಟಿಕ ಆಹಾರ ಪ್ರತಿಯೊಬ್ಬ ವ್ಯಕ್ತಿಯ ಸರ್ವತೋಮುಖ ಬೆಳವಣಿಗೆಗೆ ಅಗತ್ಯವಾಗಿದ್ದು, ದಿನನಿತ್ಯ ಸೇವಿಸುವ ಆಹಾರದಲ್ಲಿ ಸೊಪ್ಪು, ತರಕಾರಿ, ಮೊಳಕೆಕಾಳು, ಬೇಳೆಕಾಳು, ಹಣ್ಣು ಹಂಪಲುಗಳನ್ನು ಸೇವಿಸುವುದರಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಸಹಕಾರಿಯಾಗಲಿದೆ. ಪ್ರತಿಯೊಬ್ಬರಿಗೂ ಸದೃಢ ದೇಹ, ಸದೃಢ ಮನಸು ಇರಬೇಕಾದರೆ ಪೌಷ್ಟಿಕ ಆಹಾರ ಮುಖ್ಯ. ಗರ್ಭಣಿಯರು ರಕ್ತದ ಕೊರತೆ ಎದುರಿಸುವುದು ಸಹಜ. ಹೆಚ್ಚು ಪೌಷ್ಟಿಕ ಆಹಾರ, ಮೊಳಕೆ ಕಟ್ಟದ ಕಾಳು, ಹಾಲು ಹಸಿರು ಸೊಪ್ಪು ತರಕಾರಿ ಸೇರಿದಂತೆ ಕ್ಯಾಲ್ಸಿಯಂ ಮಾತ್ರೆ ಸೇವನೆ ಮಾಡಿದರೆ ರಕ್ತ ಹೀನತೆಯನ್ನು ಸುಲಭವಾಗಿ ಹೋಗಲಾಡಿಸಬಹುದು. ಖನಿಜಾಂಶಗಳನ್ನು ದೇಹಕ್ಕೆ ಸೇರಿಸಲು ಮೊಟ್ಟೆ, ಮಾಂಸ ಸೇವಿಸುವವರು ಚೆನ್ನಾಗಿ ಬೇಯಿಸಿ ಉಪಯೋಗಿಸಬೇಕು. ಪೌಷ್ಟಿಕಾಂಶವು ನಮ್ಮ ದೈನಂದಿನ ಜೀವನದ ಕ್ರಮವಾಗಿದೆ. ಹಿಂದಿನ ಕಾಲದಲ್ಲಿ ಉಪಯೋಗಿಸುತ್ತಿದ್ದ ಸಿರಿಧಾನ್ಯಗಳ ಆಹಾರ ಪದಾರ್ಥಗಳ ಸೇವನೆಯಿಂದ ಹಿಂದಿನ ಕಾಲದ ಹಿರಿಯರ ಆರೋಗ್ಯ ಗಟ್ಟಿಮುಟ್ಟಾಗಿತ್ತು. ಆದ್ದರಿಂದ ಪ್ರತಿಯೂಬ್ಬರು ಸಿರಿಧಾನ್ಯಗಳನ್ನು ಹೆಚ್ಚೆಚ್ಚು ಬಳಸುವುದರಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದರು.

    ಕಿರಿಯ ಆರೋಗ್ಯ ಸಹಾಯಕಿ ರುಕ್ಮೀಣಿ ಹೆಳವರ ಮಾತನಾಡಿದರು. ಗ್ರಾಪಂ ಸದಸ್ಯೆ ರೇಣುಕಾಬಾಯಿ ಕಾಳಗಿ, ಅಂಗನವಾಡಿ ಕಾರ್ಯಕರ್ತೆ ಪಿ.ಆರ್. ಜಮಾದಾರ, ಆಸ್ಮಾ ಮುಜಾವರ ಗ್ರಾಮದ ಮಹಿಳೆಯರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts