More

    ಉಚಿತ ಪ್ರಯಾಣಕ್ಕೆ ಬಸ್ ವ್ಯವಸ್ಥೆ

    ಕಲಬುರಗಿ: ಹೊರ ರಾಜ್ಯಗಳಲ್ಲಿರುವ ಜಿಲ್ಲೆಯ 10 ಸಾವಿರ ಜನರನ್ನು ಶನಿವಾರದಿಂದ ಕರೆತರಲು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮೂಲಕ ಬಸ್ಗಳ ವ್ಯವಸ್ಥೆ ಮಾಡಲಾಗಿದೆ ಎಂದು ಸಂಸದ ಡಾ.ಉಮೇಶ ಜಾಧವ್ ತಿಳಿಸಿದ್ದಾರೆ.
    ಐವಾನ್-ಇ-ಶಾಹಿ ಅತಿಥಿಗೃಹದಲ್ಲಿ ಶುಕ್ರವಾರ ವಿವಿಧ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಮಹಾರಾಷ್ಟ್ರ, ಗೋವಾ, ತೆಲಂಗಾಣ, ಆಂಧ್ರಪ್ರದೇಶ ಹಾಗೂ ಗುಜರಾತ್ಗಳಲ್ಲಿ ನಮ್ಮ ಜನ ಇದ್ದಾರೆ. ಅವರನ್ನು ಉಚಿತವಾಗಿ ಕರೆತರಲು ಆಗುವ ವೆಚ್ಚವನ್ನು ಸಾರಿಗೆ ಸಂಸ್ಥೆಗೆ ಭರಿಸಲು ಪರ್ಯಾಯ ಕ್ರಮ ಕೈಗೊಳ್ಳಲಾಗುವುದು ಎಂದರು.
    ಈಗಾಗಲೇ ಹೊರರಾಜ್ಯದ ಕೆಲವರು ಗಡಿ ಭಾಗಗಳಲ್ಲಿ ಕುಳಿತಿದ್ದಾರೆ. ಇವರನ್ನು ಮೊದಲು ಕರೆತರಬೇಕು. ನಂತರ ಹೊರರಾಜ್ಯಗಳಿಗೆ ಬಸ್ಗಳನ್ನು ಕಳಿಸಬೇಕೆಂದು ಸೂಚಿಸಿದರು.
    ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕಿ ಜಹೀರಾ ನಸೀಮ್ ಮಾತನಾಡಿ, ಒಪ್ಪಂದದ ಮೇರೆಗೆ ಎಷ್ಟು ಅಗತ್ಯವಿದೆಯೋ ಅಷ್ಟು ಬಸ್ ವ್ಯವಸ್ಥೆ ಮಾಡಲಾಗುವುದು. ಆದರೆ ಹೊರರಾಜ್ಯಕ್ಕೆ ಪ್ರತಿ ಕಿಲೋಮೀಟರ್ಗೆ 41 ರೂ. ಮುಂಗಡ ಪಾವತಿಸಬೇಕಾಗಿದೆ ಎಂದರು.
    ಚೆಕ್​ ಪೋಸ್ಟ್​ಗಳಲ್ಲಿ ಸ್ಕ್ರೀನಿಂಗ್: ಹೊರರಾಜ್ಯದಿಂದ ಬರುವ ಜಿಲ್ಲೆ ಜನರಿಗೆ ಆಯಾ ತಾಲೂಕಿನ ಚೆಕ್​ ಪೋಸ್ಟ್ಳಗಳಲ್ಲಿ ಕಡ್ಡಾಯವಾಗಿ ತಪಾಸಿಸಲು ವೈದ್ಯಕೀಯ ಸಿಬ್ಬಂದಿ ಮತ್ತು ಜನರ ಕೌನ್ಸೆಲಿಂಗ್ಗೆ ಮನಃಶಾಸ್ತ್ರಜ್ಞರನ್ನು ನೇಮಿಸಬೇಕು ಎಂದು ಸಂಸದ ಡಾ.ಜಾಧವ್ ಸೂಚಿಸಿದರು.
    ಚೆಕ್​ ಪೋಸ್ಟ್ಳಗಳಲ್ಲ್ಲೇ ಸೀಲ್ ಹಾಕಬೇಕು. ರೋಗದ ಲಕ್ಷಣ ಕಂಡವರನ್ನು ಕ್ವಾರಂಟೈನ್ ಕೇಂದ್ರಗಳಲ್ಲಿ ಪ್ರತ್ಯೇಕವಾಗಿ ಇರಿಸಬೇಕು. ಸಂಸದರ ಕಚೇರಿಯಲ್ಲಿ ಸೇವಾ ಸಿಂಧು ಮೂಲಕ ಹೊರರಾಜ್ಯದಿಂದ ಬರಲಿರುವ ಜಿಲ್ಲೆಯ 8000 ಜನರ ಹೆಸರು ನೋಂದಾಯಿಸಲಾಗಿದೆ ಎಂದರು.
    ಎಲ್ಲ ಚೆಕ್ಪೋಸ್ಟ್ಗಳಲ್ಲಿ ಬ್ಯಾರಿಕೇಡ್ ಹಾಕಲಾಗುವುದು. ಅಗತ್ಯ ಪೊಲೀಸ್ ಸಿಬ್ಬಂದಿ ನಿಯೋಜಿಸಿ ಸಾಲಿನಲ್ಲಿ ಜನತೆ ಬಂದು ಸ್ಕ್ರೀನಿಂಗ್ಗೆ ಅವಕಾಶ ಕಲ್ಪಿಸಲಾಗುವುದು ಎಂದು ಎಸ್ಪಿ ಯಡಾ ಮಾರ್ಟಿ ನ್ ಮಾರ್ಬನ್ಯಾಂಗ್ ತಿಳಿಸಿದರು.
    ಶಾಸಕರಾದ ಬಿ.ಜಿ. ಪಾಟೀಲ್, ದತ್ತಾತ್ರೇಯ ಪಾಟೀಲ್ ರೇವೂರ, ಎಂ.ವೈ. ಪಾಟೀಲ್, ಕನೀಜ್ ಫಾತಿಮಾ, ಡಾ.ಅವಿನಾಶ ಜಾಧವ್, ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ್, ಜಿಪಂ ಸದಸ್ಯರಾದ ಹಷರ್ಾನಂದ ಗುತ್ತೇದಾರ್, ಶಿವರಾಜ ಪಾಟೀಲ್ ರದ್ದೇವಾಡಗಿ, ಸಿಇಒ ಡಾ.ಪಿ.ರಾಜಾ, ಡಿಸಿಪಿ ಡಿ.ಕಿಶೋರಬಾಬು, ಈಶಾನ್ಯ ಸಾರಿಗೆ ಸಂಸ್ಥೆ ಅಧಿಕಾರಿಗಳಾದ ಡಿ.ಕೊಟ್ರಪ್ಪ, ನಾಗರಾಜ ಶಿರಳ್ಳಿ, ತಿಮ್ಮಾರೆಡ್ಡಿ ಹೀರಾ, ಮೊಯಿಜುದ್ದೀನ್ ಖಾದ್ರಿ, ಡಿಎಚ್ಒ ಡಾ.ಎಂ.ಎ. ಜಬ್ಬಾರ್ ಇದ್ದರು.

    ನಗರದಲ್ಲೂ ಕ್ವಾರಂಟೈನ್
    ಹೊರ ರಾಜ್ಯಗಳಿಂದ ಬರುವ ಜನರನ್ನು ಕೇವಲ ತಾಲೂಕುಗಳಲ್ಲದೆ ಮಹಾನಗರದ ಹಾಸ್ಟೆಲ್ ಇತರ ಕಡೆ ಕಡ್ಡಾಯವಾಗಿ ಕ್ವಾರಂಟೈನ್ ಮಾಡಬೇಕೆಂದು ಸಂಸದರು ಸೂಚಿಸಿದ್ದು, ಕೂಡಲೇ ಮೂಲಸೌಕರ್ಯ ಹೊಂದಿದ ಕ್ವಾರಂಟೈನ್ ಕೇಂದ್ರಗಳನ್ನು ಗುರುತಿಸಲಾಗುವುದು ಎಂದು ಪಾಲಿಕೆ ಆಯುಕ್ತ ರಾಹುಲ್ ಪಾಂಡ್ವೆ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts