More

    ಉಚಿತವಾಗಿ ವಿದ್ಯುತ್, ಗೊಬ್ಬರ ವಿತರಣೆಯಾಗಲಿ

    ಹರಪನಹಳ್ಳಿ: ಆಳುವ ಸರ್ಕಾರಗಳು ಕೃಷಿ ಪದ್ಧತಿ ಹೇಗಿರಬೇಕೆಂದು ರೈತರಿಗೆ ಸಮಪರ್ಕವಾದ ಮಾಹಿತಿ ನೀಡುತ್ತಿಲ್ಲ. ರೈತರಿಗೆ ಸರಿಯಾದ ಮಾಹಿತಿ ನೀಡುವಲ್ಲಿ ವಿಫಲವಾಗಿವೆ ಎಂದು ಮೈಸೂರು ಕೃಷಿತಜ್ಞ ಅವಿನಾಶ ಹೇಳಿದರು.
    ಪಟ್ಟಣದ ಡಾ.ಬಿ.ಆರ್ ಅಂಬೇಡ್ಕರ್ ಸಮುದಾಯ ಭವನದಲ್ಲಿ ಮಂಗಳವಾರ ಅಖಿಲ ಭಾರತ ಕಿಸಾನ್ ಸಭಾ ರಾಜ್ಯ ಮಟ್ಟದ ಅಧ್ಯಯನ ಶಿಬಿರ ಉದ್ಘಾಟಿಸಿ ಮಾತನಾಡಿದರು.

    ಸರ್ಕಾರದ ಪ್ರಕಾರ ನೂರಾರು ಕೋಟಿ ಅತಿವೃಷ್ಟಿ, ಅನಾವೃಷ್ಠಿಯಾಗಿ ರೈತರು ಬೆಳೆಯ ನಷ್ಟವನ್ನು ಅನುಭವಿಸುವಂತಾಗಿದೆ. ಸರ್ಕಾರ ಕೂಡಲೆ ರೈತರ ಬಗ್ಗೆ ಜ್ಞಾನ, ವಿಜ್ಞಾನ ತಿಳಿಸುವ ಕಾರ್ಯ ಮಾಡಬೇಕೆಂದರು.
    ಅಧ್ಯಕ್ಷತೆ ವಹಿಸಿದ್ದ ಡಾ.ಸಿದ್ದನಗೌಡ ಪಾಟೀಲ, ದೇಶದಲ್ಲಿ ರೈತರ ಬದುಕು ಅಪಾಯದಲ್ಲಿ. ಕೃಷಿ ಭೂಮಿಯನ್ನು ಕಾರ್ಪೋರೆಟ್ ಕಂಪನಿಗಳಿಗೆ ಹಸ್ತಾಂತರಿಸುವ ಹುನ್ನಾರ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಂದ ನಡೆಯುತ್ತಿದೆ ಎಂದು ಆರೋಪಿಸಿದರು.

    ದೇಶದಲ್ಲಿ ಸಣ್ಣ ಮತ್ತು ಅತೀ ಸಣ್ಣ ರೈತರು ಶೇ.80ರಷ್ಟು ಭೂಮಿಯನ್ನು ನೆಚ್ಚಿಕೊಂಡು ಜೀವನ ನಡೆಸುತ್ತಿದ್ದಾರೆ. ಆದರೆ ಭೂಮಿ ಉಳಿವಿಗಾಗಿ, ಹೋರಾಟ ಮಾಡುವ ಪರಿಸ್ಥಿತಿ ಎದುರಾಗಿದೆ. ಸರ್ಕಾರ ಕೂಡಲೇ ರೈತರಿಗೆ ಉಚಿತವಾಗಿ ವಿದ್ಯುತ್, ಗೊಬ್ಬರ, ಬಿತ್ತನೆ ಬೀಜವನ್ನು ನೀಡಬೇಕು ಎಂದು ಹೇಳಿದರು.

    ಹರಪನಹಳ್ಳಿಯ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಅಖಿಲ ಭಾರತ ಕಿಸಾನ್ ಸಭಾದ ಅಧ್ಯಯನ ಶಿಬಿರವನ್ನು ಮೈಸೂರು ಕೃಷಿತಜ್ಞ ಅವಿನಾಶ ಉದ್ಘಾಟಿಸಿದರು. ಡಾ.ಸಿದ್ದನಗೌಡ ಪಾಟೀಲ್, ಗುಡಿಹಳ್ಳಿ ಹಾಲೇಶ, ಪಿ.ವಿ.ಲೋಕೇಶ, ಶಾಂತರಾಜಜೈನ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts