More

    ಈಶ ಸೇವೆಗೆ ತಯಾರಾದ ಭಕ್ತರು

    ಕಾರವಾರ: ಪುರಾಣ ಪ್ರಸಿದ್ಧ ಶೇಜವಾಡ ಶೆಜ್ಜೇಶ್ವರ ದೇವಸ್ಥಾನದಲ್ಲಿ ಫೆ.21 ರಿಂದ 25 ರವರೆಗೆ ಮಹಾ ಶಿವರಾತ್ರಿ ಹಾಗೂ ಜಾತ್ರಾ ಮಹೋತ್ಸವ ಜರುಗಲಿದೆ. ಶುಕ್ರವಾರ ಮಹಾ ಶಿವರಾತ್ರಿ ಅಂಗವಾಗಿ ಬೆಳಗ್ಗೆ 4 ಗಂಟೆಯಿಂದ ಸಾಯಂಕಾಲ 6 ಗಂಟೆಯವರೆಗೆ ದೇವರಿಗೆ ಪಂಚಾಮೃತ ಅಭಿಷೇಕ ನಡೆಯಲಿದೆ. ಗರ್ಭಗುಡಿಯ ಹೊರಗಿನಿಂದಲೇ ಸಾರ್ವಜನಿಕ ದರ್ಶನಕ್ಕೆ ಅವಕಾಶ ನೀಡಲಾಗಿದೆ. 7 ಗಂಟೆಗೆ ಶತರುದ್ರಾಭಿಷೇಕ ಹಾಗೂ ಮಹಾ ಪೂಜೆ ಜರುಗಲಿದೆ. ರಾತ್ರಿ ಶೆಜ್ಜೇಶ್ವರ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.

    ಫೆ.22 ರಂದು ಮಧ್ಯಾಹ್ನ ವಿಶೇಷ ಪೂಜೆ, ರಾತ್ರಿ 8 ಗಂಟೆಗೆ ಪಲ್ಲಕ್ಕಿ ಮೆರವಣಿಗೆ ನಡೆಯಲಿದೆ. ಫೆ.23 ರಂದು ಬೆಳಗ್ಗೆ 7 ಗಂಟೆಗೆ ಸಮುದ್ರ ಸ್ನಾನ, ದೇವಸ್ಥಾನದಲ್ಲಿ ಮಹಾ ಪೂಜೆ ಹಾಗೂ ಪ್ರಸಾದ ವಿತರಣೆ, ರಾತ್ರಿ ದೇವರ ಪಲ್ಲಕ್ಕಿ ಮೆರವಣಿಗೆ, ರಂಗ ಪೂಜೆ, ಅಷ್ಟಾವಧಾನ ಸೇವೆ ಜರುಗಲಿದೆ. ಫೆ.24 ರಂದು ಮಧ್ಯಾಹ್ನ 2 ಗಂಟೆಗೆ ಹೋಮ, 4 ಗಂಟೆಗೆ ದೇವರ ರಥಾರೋಹಣ ಜರುಗಲಿದೆ. ದೇವರಿಗೆ ಹಣ್ಣು ಕಾಯಿ ಸಲ್ಲಿಕೆ, ರಾತ್ರಿ 10 ಗಂಟೆಯವರೆಗೆ ಪಂಚಾಮೃತದೊಂದಿಗೆ ದೇವರಿಗೆ ಹಿಲಾಲಿ ಮೆರವಣಿಗೆ, ಲಿಲಾವು ನಂತರ ‘ದುರ್ಗಾಸುರ ವಧ’ ಎಂಬ ಮರಾಠಿ ಖೇಳ್ ಪ್ರದರ್ಶನಗೊಳ್ಳಲಿದೆ. ಫೆ.25 ರ ಬೆಳಗ್ಗೆ 4 ಗಂಟೆಗೆ ರಥೋತ್ಸವ, ಸಾಯಂಕಾಲ 4 ಗಂಟೆಗೆ ದೇವರ ಅವಬೃತ ಸ್ನಾನ ಜರುಗಲಿದೆ. ರಾತ್ರಿ 9 ರಿಂದ ‘ಲಾಯ್ಲೆ ಪಿಶೆ, ಫಾಲ್ಲೆ ವಿಶೆ’ ಎಂಬ ಕೊಂಕಣಿ ನಾಟಕ ಪ್ರದರ್ಶನಗೊಳ್ಳಲಿದೆ.

    ವಿದೇಶಿ ಭಕ್ತರ ಭೇಟಿ: ರಷ್ಯಾ ಮೂಲದ 10 ಕ್ಕೂ ಹೆಚ್ಚು ಭಕ್ತರು ಗುರುವಾರ ಶೆಜ್ಜೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಮಹಾ ಶಿವನ ಭಜನೆ ಹೇಳಿ ನಮಿಸಿದರು. ಶಿವರಾತ್ರಿ ಹಾಗೂ ಮುಂಚಿನ ದಿನ ಉತ್ತರ ಕನ್ನಡದಲ್ಲಿರುವ ಪಂಚ ಶಿವ ಕ್ಷೇತ್ರಗಳನ್ನು ದರ್ಶನ ಮಾಡುತ್ತಿದ್ದೇವೆ. ಕಳೆದ ವರ್ಷವೂ ಎಲ್ಲ ಕಡೆ ಭೇಟಿ ನೀಡಿದ್ದೆವು ಎಂದು ವಿದೇಶಿ ಪ್ರಜೆಗಳು ತಿಳಿಸಿದ್ದಾಗಿ ದೇವಸ್ಥಾನದ ಆಡಳಿತ ಮಂಡಳಿಯ ಸಮೀರ ನಾಯ್ಕ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts