More

    ಈಶಾನ್ಯ ಸಾರಿಗೆಗೆ ರು.256 ಕೋಟಿ ನಷ್ಟ

    ಜಯತೀರ್ಥ ಪಾಟೀಲ ಕಲಬುರಗಿ: ಕರೊನಾ ಕಂಟಕದಿಂದಾಗಿ ಈಶಾನ್ಯ ಕನರ್ಾಟಕ ರಸ್ತೆ ಸಾರಿಗೆ ಸಂಸ್ಥೆ ವ್ಯಾಪಕ ಹಾನಿ ಎದುರಿಸುತ್ತಿದೆ. ಮೊದಲೇ ನಷ್ಟದಿಂದ ತತ್ತರಿಸಿರುವ ಸಂಸ್ಥೆ ಇದೀಗ ಚೀನಿ ವೈರಸ್ ಬರಸಿಡಿಲಿಗೆ ತಡೆದುಕೊಳ್ಳದಂಥ ಸ್ಥಿತಿಗೆ ತಲುಪಿದೆ.
    ನಿತ್ಯ ಬರೋಬ್ಬರಿ 5.50 ಕೋಟಿ ರೂ. ಹಾನಿ ಎದುರಿಸುತ್ತಿರುವ ಸಂಸ್ಥೆ ಲಾಕ್ಡೌನ್ ಹಿನ್ನೆಲೆಯಲ್ಲಿ ಈವರೆಗೆ ಬರೋಬ್ಬರಿ 256 ಕೋಟಿ ರೂ. ನಷ್ಟ ಅನುಭವಿಸಬೇಕಾಗಿದ್ದು, ಇದರಿಂದ ಮೇಲೆದ್ದು ಬರದೆ ಒದ್ದಾಡುತ್ತಿದೆ.
    ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ ಮತ್ತು ವಿಜಯಪುರ ಸೇರಿ ಏಳು ಜಿಲ್ಲೆ ವ್ಯಾಪ್ತಿ ಹೊಂದಿರುವ ಸಂಸ್ಥೆಯಲ್ಲಿ 9 ವಿಭಾಗ, 53 ಡಿಪೋಗಳಿದ್ದು, ನಿತ್ಯ 4250 ಮಾರ್ಗಗಳಲ್ಲಿ ಸಂಸ್ಥೆ ಬಸ್ಗಳು ಕಾಯರ್ಾಚರಣೆ ನಡೆಸುತ್ತಿವೆ.
    ನೌಕರರ ಸಂಬಳ, ಇಂಧನ, ತೆರಿಗೆ, ಬಡ್ಡಿ, ವಿದ್ಯುತ್ ಬಿಲ್, ಬಸ್ಗಳ ದುರಸ್ತಿ ಹೀಗೆ ವಾಷರ್ಿಕ 160 ಕೋಟಿ ರೂ. ನಿರ್ವಹಣೆ ವೆಚ್ಚದೊಂದಿಗೆ ಸಂಸ್ಥೆ ಮುನ್ನಡೆದಿದೆ. ಅಂದಾಜಿನ ಪ್ರಕಾರ ಪ್ರತಿ ಕಿಲೋಮೀಟರ್ಗೆ 30 ರೂ. ಗಳಿಕೆ ಮಾಡಿದರೆ, 37 ರೂ. ಖಚರ್ಾಗುತ್ತಿದೆ. ಹೀಗಾಗಿ ಏಳು ರೂ. ಹೆಚ್ಚುವರಿ ಹೊರೆ ಕಾಡುತ್ತಿದೆ.

    ನಷ್ಟದಲ್ಲೇ ಮುಂದುವರಿದ ಸಂಸ್ಥೆ: ಹಾಗೊಂದು ವೇಳೆ ಬಸ್ಗಳು ಕರೆಕ್ಟ್ ಆಗಿ ಓಡಾಡಿದರೆ 130 ಕೋಟಿ ರೂ. ಆದಾಯ ಬರುತ್ತಿತ್ತು. ಕರೊನಾ ಮಹಾಮಾರಿ ಹಿನ್ನೆಲೆಯಲ್ಲಿ ಇಡೀ ದೇಶ ಲಾಕ್ಡೌನ್ಗೆ ಒಳಗಾಗಿದೆ. ವಿಶೇಷವಾಗಿ ಕಲಬುರಗಿ ಜಿಲ್ಲೆಯಲ್ಲಿ ಕರೊನಾಕ್ಕೆ ಮೊದಲ ಬಲಿ ಆಗುತ್ತಲೇ ನಿಷೇಧಾಜ್ಞೆ ಜಾರಿಗೊಳಿಸಿ ಎಲ್ಲವನ್ನು ಬಂದ್ ಮಾಡಲಾಯಿತು. ಜಿಲ್ಲೆ, ರಾಜ್ಯ ಮತ್ತು ಅಂತಾರಾಜ್ಯ ಬಸ್ ಸಂಚಾರಕ್ಕೆ ಬ್ರೇಕ್ ಹಾಕಲಾಯಿತು. ಎಸಿ, ವೇಗದೂತ ಸೇರಿ ದೂರದ ಮಾರ್ಗಗಳಿಗೆ ಚಲಿಸುವ ಬಸ್ಗಳಿಂದ ಮಾತ್ರ ಹೆಚ್ಚಿನ ಆದಾಯ ನಿರೀಕ್ಷಿಸಬಹುದಾಗಿದೆ. ಆದರೆ ಗ್ರಾಮೀಣ ಪ್ರದೇಶದಲ್ಲಿ ಸಂಚರಿಸುವ ಬಸ್ಗಳಿಂದ ಯಾವುದೇ ಲಾಭ ಇಲ್ಲ. ಇದೊಂದು ಸಾರ್ವಜನಿಕ ಸೇವೆ ಒದಗಿಸುವ ಸಂಸ್ಥೆಯಾದರೂ ಕನಿಷ್ಠ ನಿರ್ವಹಣಾ ವೆಚ್ಚ ನೀಗಿಸುವ ಆದಾಯ ನಿರೀಕ್ಷಿಸಲಾಗುತ್ತಿದೆ. ಆದರೆ ಅನೇಕ ವರ್ಷಗಳಿಂದ ನಷ್ಟದಲ್ಲೇ ಮುಂದುವರಿದಿದೆ.

    ತೆರಿಗೆ ವಿನಾಯಿತಿ ಬೇಡಿಕೆ: ಸಂಸ್ಥೆಯು ಪ್ರತಿವರ್ಷ ಸುಮಾರು 80 ಕೋಟಿ ರೂ. ವಿವಿಧ ಮೂಲದ ಟ್ಯಾಕ್ಸ್ ಭರಿಸುತ್ತಿದೆ. ಇದಕ್ಕೆ ಸಕರ್ಾರ ವಿನಾಯಿತಿ ನೀಡಬೇಕೆಂಬ ಬೇಡಿಕೆ ಬಹುವರ್ಷಗಳಿಂದ ಇದೆ. ಸಂಸ್ಥೆ ಮುಖ್ಯಸ್ಥರು ರಾಜ್ಯ ಸಕರ್ಾರಕ್ಕೆ ಪತ್ರ ಬರೆದು ವಿನಾಯಿತಿ ನೀಡುವ ಮೂಲಕ ನಷ್ಟದಲ್ಲಿರುವ ಸಂಸ್ಥೆ ಪುನಶ್ಚೇತನಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
    ವಿದ್ಯಾಥರ್ಿಗಳು, ನೌಕರರು ಹೀಗೆ ನಾನಾ ಹಂತಗಳಲ್ಲಿ ಪಾಸ್ ಸೌಲಭ್ಯ ನೀಡಲಾಗುತ್ತಿದೆ. ಆದರೆ ಈ ಪಾಸ್ ಮೊತ್ತ ಪೂರ್ಣ ಮರುಪಾವತಿ ಆಗದಿರುವುದು ಸಹ ಹೊರೆಯಾಗಿ ಪರಿಣಮಿಸಿದೆ. ಕರೊನಾ ಸಂಕಷ್ಟ ಸಂದರ್ಭದಲ್ಲಾದರೂ ರಾಜ್ಯ ಸರ್ಕಾರ ತೆರಿಗೆ ವಿನಾಯಿತಿ ನೀಡಿ ಬಸ್ ಪಾಸ್ ಮೊತ್ತ ಮರುಪಾವತಿಗೆ ಕ್ರಮ ಕೈಗೊಳ್ಳುವ ಅಗತ್ಯವಿದೆ.

    ಕರೊನಾ ಲಾಕ್ಡೌನ್ನಿಂದ ಸಂಸ್ಥೆಯು ಕೋಟ್ಯಂತರ ರೂಪಾಯಿ ನಷ್ಟ ಅನುಭವಿಸಿದೆ. ಈ ಮಧ್ಯೆ ಸರ್ಕಾರ ಟ್ಯಾಕ್ಸ್ ವಿನಾಯಿತಿ ನೀಡಿದ್ದಲ್ಲಿ ಸಂಸ್ಥೆ ಪುನಶ್ಚೇತನಗೊಳ್ಳಲು ಸಾಧ್ಯವಿದೆ. ಈ ಕುರಿತು ಸಕರ್ಾರಕ್ಕೆ ಪತ್ರ ಬರೆದು ಮನವರಿಕೆ ಮಾಡಿಕೊಡಲಾಗಿದೆ.
    | ಜಹೀರಾ ನಸೀಮ್
    ವ್ಯವಸ್ಥಾಪಕ ನಿರ್ದೇಶಕಿ, ಎನ್ಈಕೆಆರ್​ಟಿಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts