More

    ಈಶಾನ್ಯ ಸಾರಿಗೆಗೆ ತೆಲ್ಕೂರ ಸಾರಥ್ಯ


    ಕಲಬುರಗಿ: ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ನೂತನ ಅಧ್ಯಕ್ಷರಾಗಿ ಸೇಡಂ ಶಾಸಕ ರಾಜಕುಮಾರ ಪಾಟೀಲ್ ತೆಲ್ಕೂರ ಸಾರಿಗೆ ಸದನದಲ್ಲಿ ಸೋಮವಾರ ಸಾರಿಗೆ ಸಚಿವರಾದ ಡಿಸಿಎಂ ಲಕ್ಷ್ಮಣ ಸವದಿ ಇತರ ಗಣ್ಯರ ಸಮ್ಮುಖದಲ್ಲಿ ಅಧಿಕಾರ ಸ್ವೀಕರಿಸಿದರು.
    ಸಂಸ್ಥೆ ಕಚೇರಿಯಲ್ಲಿ ಪೂಜೆ ನೆರವೇರಿಸಿದ ನಂತರ ಹಾಜರಾತಿ ಮತ್ತು ಕಡತದ ಪುಸ್ತಕಕ್ಕೆ ಸಹಿ ಹಾಕುವ ಮೂಲಕ ತೆಲ್ಕೂರ ಪದಗ್ರಹಣ ಮಾಡಿದರು. ಎಂಎಲ್ಸಿ ಬಿ.ಜಿ.ಪಾಟೀಲ್, ಕೆಕೆಆರ್ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ್ ರೇವೂರ, ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಎಂ.ಕೂರ್ಮರಾವ್ ಇತರರು ಶುಭ ಕೋರಿದರು.
    ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ತೆಲ್ಕೂರ, ಸಂಸ್ಥೆ ವ್ಯಾಪ್ತಿಯ ಏಳು ಜಿಲ್ಲೆಗಳಲ್ಲಿ ಅಧಿಕಾರಿಗಳ ಸಭೆ ನಡೆಸಿ ಸಮಗ್ರ ಮಾಹಿತಿ ಕಲೆ ಹಾಕಿಕೊಂಡು ಪ್ರಗತಿಗೆ ಹೊಸ ಯೋಜನೆ ರೂಪಿಸಲು ಪ್ರಯತ್ನಿಸುವೆ. ಕರೊನಾ ಹಿನ್ನೆಲೆಯಲ್ಲಿ ಸುರಕ್ಷತಾ ಕ್ರಮಗಳಿಗೆ ಆದ್ಯತೆ ನೀಡಲಾಗುತ್ತಿದೆ. ಬಸ್ಗಳನ್ನು ಸ್ಯಾನಿಟೈಸ್ ಮಾಡಲಾಗುತ್ತಿದೆ. ಹೀಗಾಗಿ ಜನರು ಸರ್ಕಾರಿ ಬಸ್ಗಳಲ್ಲಿ ಪ್ರಯಾಣಿಸಬೇಕು ಎಂದು ಮನವಿ ಮಾಡಿದರು.
    ಡಿಸಿಎಂ ಲಕ್ಷ್ಮಣ ಸವದಿ ಮಾತನಾಡಿ, ಎನ್ಈಕೆಆರ್ಟಿಸಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ತೆಲ್ಕೂರ ಸಂಸ್ಥೆ ನಷ್ಟವನ್ನು ತಗ್ಗಿಸುವತ್ತ ನಿಗಾ ವಹಿಸುವರು. ಮುಖ್ಯಮಂತ್ರಿಗಳು ತೆಲ್ಕೂರ ಮೇಲಿರುವ ಪ್ರೀತಿಯಿಂದ ಸಂಪುಟ ದರ್ಜೆ ಸ್ಥಾನಮಾನದ ಹುದ್ದೆಯನ್ನು ನೀಡಿದ್ದು, ಸಮರ್ಥವಾಗಿ ನಿಭಾಯಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
    ಕೆಕೆಆರ್​ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ್ ರೇವೂರ, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷ ನರಸಿಂಹ ನಾಯಕ ಸುರಪುರ, ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ಅಧ್ಯಕ್ಷೆ ಶಶಿಕಲಾ ವಿ.ಟೆಂಗಳಿ, ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ ಅಧ್ಯಕ್ಷ ಬಾಬುರಾವ ಚಿಂಚನಸೂರ, ಜಿಪಂ ಅಧ್ಯಕ್ಷೆ ಸುವರ್ಣ ಮಲಾಜಿ, ಶಾಸಕರಾದ ಬಿ.ಜಿ.ಪಾಟೀಲ್, ಮಾಜಿ ಶಾಸಕರಾದ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ, ಅಮರನಾಥ ಪಾಟೀಲ್, ಶಶೀಲ್ ನಮೋಶಿ, ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸ್ನಾ, ಈಶಾನ್ಯ ಸಾರಿಗೆ ಎಂಡಿ ಎಂ.ಕೂರ್ಮರಾವ್, ಜಿಪಂ ಸಿಇಒ ಡಾ.ರಾಜಾ ಪಿ., ಪಾಲಿಕೆ ಆಯುಕ್ತ ಸ್ನೇಹಲ್ ಸುಧಾಕರ್, ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ್ ರದ್ದೇವಾಡಗಿ, ನಗರ ಜಿಲ್ಲಾಧ್ಯಕ್ಷ ಸಿದ್ದಾಜಿ ಪಾಟೀಲ್, ಮಹಿಳಾ ಘಟಕ ಜಿಲ್ಲಾಧ್ಯಕ್ಷೆ ಭಾಗಿರಥಿ ಗುನಾಪುರ, ಜಿಪಂ ಸದಸ್ಯ ರೇವಣಸಿದ್ದಪ್ಪ ಸಂಕಾಲಿ, ಪ್ರಮುಖರಾದ ರಾಜಶೇಖರ ಯಂಕಂಚಿ, ಚಂದ್ರಶೇಖರ ತಳ್ಳಳ್ಳಿ, ಚಂದು ಪಾಟೀಲ್, ವೀರು ಪಾಟೀಲ್ ರಾಯ್ಕೋಡ, ನಾಗೇಂದ್ರಪ್ಪ ಸಾಹುಕಾರ ಸಿಲಾರಕೋಟ, ಡಾ.ಮಧುಸೂದನ ರೆಡ್ಡಿ ಸಿಲಾರಕೋಟ, ಸಿದ್ದಣ್ಣ ಸಿಕೇದ್, ಸಂಜಯ ಮಿಸ್ಕಿನ್, ಗುರು ಪಾಟೀಲ್, ಚಂದ್ರಶೇಖರ ಪರಸರೆಡ್ಡಿ, ವೆಂಕಟೇಶ ಪಾಟೀಲ್, ತಿರುಪತಿ ಶಹಾಬಾದಕರ್, ವಿಜಯಕುಮಾರ ಆಡಕಿ, ಲಕ್ಷ್ಮೀಕಾಂತ ಹೊನಕೇರಿ, ವಿಜಯಕುಮಾರ ಖೇವಜಿ, ಧರ್ಮಣ್ಣ ಇಟಗಾ, ನಾಮದೇವ ರಾಠೋಡ್, ತಾನಾಜಿ ದೊಡ್ಡಮನಿ, ಶರಣಪ್ಪ ತಳವಾರ, ಅರುಣ ಕುಲಕಣರ್ಿ ಇತರರು ತೆಲ್ಕೂರ ಅವರಿಗೆ ಪುಷ್ಪಗುಚ್ಚ ನೀಡಿ ಅಭಿನಂದಿಸಿದರು.

    ಸೇಡಂ ಕ್ಷೇತ್ರದಿಂದ ಅಭಿಮಾನಿಗಳ ದಂಡು
    ತಮ್ಮ ಕ್ಷೇತ್ರದ ಶಾಸಕರು ಈಶಾನ್ಯ ಸಾರಿಗೆ ಸಂಸ್ಥೆ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳುವ ಸಮಾರಂಭದಲ್ಲಿ ಭಾಗಿಯಾಗಲು ಸೇಡಂ ತಾಲೂಕಿನ ಸಾವಿರಾರು ಅಭಿಮಾನಿಗಳು, ಹಿತೈಷಿಗಳು ಕಲಬುರಗಿಗೆ ದೌಡಾಯಿಸಿದ್ದರು. ಕರೊನಾ ಹಿನ್ನೆಲೆಯಲ್ಲಿ ಸರಳವಾಗಿ ತೆಲ್ಕೂರ ಕೊಠಡಿಯಲ್ಲೇ ಅಧಿಕಾರ ವಹಿಸಿಕೊಂಡರು. ಹೀಗಾಗಿ ಸಾರ್ವಜನಿಕ ಸಮಾರಂಭ ನಡೆಯಲಿಲ್ಲ. ಚೇಂಬರ್ನಿಂದ ಸಭಾಂಗಣಕ್ಕೆ ಆಗಮಿಸಿ ಹಾರ ತುರಾಯಿ ಸ್ವೀಕರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts