More

    ಇತಿಹಾಸ ಸಾರುವ ಕುರುಹುಗಳ ರಕ್ಷಣೆಗೆ ಮುಂದಾಗಿ

    ಯಾದಗಿರಿ: ಐತಿಹಾಸಿಕ, ಪಾರಂಪರಿಕ ಮತ್ತು ಸಾಂಸ್ಕೃತಿಕ ಕುರುಹುಗಳು ರಾಜ್ಯಾದ್ಯಂತ ಇದ್ದು, ಅವುಗಳ ರಕ್ಷಣೆಗೆ ಸಕರ್ಾರದ ಜತೆ ಸಮುದಾಯಗದ ಸಹಭಾಗಿತ್ವವೂ ಕೈ ಜೋಡಿಸುವಂತೆ ಪ್ರವಾಸೋದ್ಯಮ ಸಚಿವ ಎಚ್ಕೆ ಪಾಟೀಲ್ ಕರೆ ನೀಡಿದರು.

    ಬುಧವಾರ ಶಹಾಪುರ ತಾಲೂಕಿನ ಶಿರವಾಳ ಗ್ರಾಮದಲ್ಲಿನ ಐತಿಹಾಸಿಕ ದೇವಾಲಯಗಳ ಸಮಚ್ಛಯ ವೀಕ್ಷಿಸಿದ ನಂತರ ಆಯೋಜಿಸಿದ್ದ ನಮ್ಮ ಸ್ಮಾರಕ ದರ್ಶನ ಹಾಗೂ ಸಂರಕ್ಷಣೆಗಾಗಿ ಪ್ರವಾಸ ಕಾರ್ಯಕ್ರಮಕ್ಕೆ ಚಾಲನೆ ಅವರು ಮಾತನಾಡಿ, ರಾಜ್ಯಾದ್ಯಂತ ಇಂಥ ಸುಮಾರು ಒಂದು ಸಾವಿರ ಸ್ಮಾರಕಗಳನ್ನು ಗುರುತಿಸಲಾಗಿದ್ದು, ಮುಂದಿನ ಪೀಳಿಗೆ ಹಾಗೂ ಜನಾಂಗಕ್ಕೆ ಪರಿಚಯಿಸುವ ದಿಸೆಯಲ್ಲಿ ದತ್ತು ನೀಡಿ ಪುನಃಶ್ಚೇತನ ಮತ್ತು ಸಂರಕ್ಷಣೆಗೆ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

    ಅದರ ಅಂಗವಾಗಿ ವಿವಿಧ ಸಂಘ ಸಂಸ್ಥೆಗಳು, ಉಳ್ಳವರು, ದಾನಿಗಳು ಸೇರಿ ಹೃದಯ ವೈಶಾಲ್ಯತೆ ಇರುವವರು ಸ್ಮಾರಕಗಳ ಸಂರಕ್ಷಣೆ ಮತ್ತು ಅಭಿವೃದ್ಧಿಗೆ ಮುಂದೆ ಬಂದಿದ್ದಾರೆ. ನಿಮ್ಮೂರಿನಲ್ಲಿ ಇತಿಹಾಸ ಸಾರುವಂಥ ಮಹತ್ವದ ಸ್ಥಳಗಳನ್ನು ಗ್ರಾಮಸ್ಥರು ಸಕರ್ಾರದ ಜತೆ ಸೇರಿ ಉಳಿಸಿಕೊಳ್ಳಲು ಪ್ರಯತ್ನಿಸಬೇಕು. ನಮ್ಮ ಪೂರ್ವಜರು ನಮಗೆ ಬಳುವಳಿಯಾಗಿ ನೀಡಿದ ಮಹತ್ವದ ಕುರುಗಳು ಭವಿಷ್ಯತ್ತಿನಲ್ಲಿ ಯುವ ಪೀಳಿಗೆಗೆ ಉಳಿಸಬೇಕಿದೆ ಎಂದು ಸಲಹೆ ನೀಡಿದರು.

    ಸ್ಮಾರಕಗಳ ವ್ಯಾಪ್ತಿಯಲ್ಲಿ ರಸ್ತೆಗಳ ದುರಸ್ತಿ ಸೇರಿ ಇನ್ನಿತರ ಸೌಲಭ್ಯಗಳನ್ನು ಕಲ್ಪಿಸಿ ಪ್ರವಾಸಿಗರನ್ನು ಆಕಷರ್ಿಸುವುದು ಮುಖ್ಯವಾಗಿದೆ. ಶಿರವಾಳದಲ್ಲಿ ಸುಮಾರು 360 ಸ್ಮಾರಕಗಳು, ಸಾವಿರಾರು ಲಿಂಗಗಳು, ಗುಡಿ ಗುಂಡಾರಗಳು ಇರುವ ಬಗ್ಗೆ ತಿಳಿದು ಬಂದಿದೆ. ‘ದಕ್ಷಿಣದ ಕಾಶಿ’ ಎಂದೇ ಪ್ರಖ್ಯಾತ ಹೊಂದಿರುವ ಇಲ್ಲಿನ ಗುಡಿ ದೇವಸ್ಥಾನಗಳು ಮತ್ತು ಇತರೆ ಐತಿಹಾಸಿಕ ಕುರುಹುಗಳನ್ನು ಸಂರಕ್ಷಿಸುವ ಜತೆಗೆ ಪುನಶ್ಚೇತನ ಮಾಡುವ ಅಗತ್ಯವಿದೆ. ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಜಿಲ್ಲಾಡಳಿತದಿಂದಲೂ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts