More

    ಇತಿಹಾಸ ಪ್ರಸಿದ್ಧ ವಿರುಪಾ ಗ್ರಾಮಕ್ಕೆ ಬೇಕು ಮೂಲಸೌಲಭ್ಯ

    ಮುಳಬಾಗಿಲು: ವಿಜಯನಗರ ಸಾಮ್ರಾಜ್ಯದ ಪ್ರಮುಖ ೇತ್ರಗಳಲ್ಲಿ ಒಂದಾಗಿದ್ದ ತಾಲೂಕಿನ ವಿರುಪಾ ಗ್ರಾಮ ಅಭಿವೃದ್ಧಿಯಲ್ಲಿ ತೀರಾ ಹಿಂದುಳಿದಿದ್ದು ಕುಗ್ರಾಮಕ್ಕಿಂತಲೂ ಕಡೆಯಾಗಿದೆ.

    ಮುಳಬಾಗಿಲು ನಗರದಿಂದ 3 ಕಿಮೀ ಬೆಂಗಳೂರು&ಚೆನ್ನೆ ಹೆದ್ದಾರಿಯಿಂದ 1 ಕಿಮೀ ದೂರದಲ್ಲಿರುವ ಗ್ರಾಮ ಅಭಿವೃದ್ಧಿ ಹಿನ್ನಡೆಯಿಂದಾಗಿ ಪ್ರವಾಸಿಗರಿಂದ ದೂರ ಉಳಿದಿದೆ. ಆವನಿ ಗ್ರಾಪಂಗೆ ಸೇರುವ ಗ್ರಾಮದಲ್ಲಿ 1600ಕ್ಕೂ ಹೆಚ್ಚು ಮತದಾರರಿದ್ದು, ಮೂವರು ಗ್ರಾಪಂ ಸದಸ್ಯರಿದ್ದಾರೆ. 3 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇರುವ ಗ್ರಾಮಕ್ಕೆ ಮೂಲಸೌಲಭ್ಯ ಕಲ್ಪಿಸಬೇಕಿದೆ. ವಿರುಪಾೇಶ್ವರ ದೇವಾಲಯ ರಾಜ್ಯದಲ್ಲೇ ಪ್ರಸಿದ್ಧಿ ಪಡೆದಿದೆ. ರಜಾ ದಿನಗಳಲ್ಲಿ ಹೆಚ್ಚಿನ ಪ್ರವಾಸಿಗರು ಆಗಮಿಸುತ್ತಾರಾದರೂ ದೇವಾಲಯ ಅಭಿವೃದ್ಧಿ ಹೊಂದಿಲ್ಲ. ಗ್ರಾಮದಲ್ಲಿ ಸ್ವಚ್ಛತೆ ಮರೀಚಿಕೆಯಾಗಿದ್ದು, ಚರಂಡಿಗಳಲ್ಲಿ ತ್ಯಾಜ್ಯ ತುಂಬಿ ಗಬ್ಬುನಾರುತ್ತಿದೆ.

    ರಾಷ್ಟ್ರೀಯ ಹೆದ್ದಾರಿಯಿಂದ ಆವನಿ ಗ್ರಾಮಕ್ಕೆ ಹೋಗುವ ರಸ್ತೆ ಒಂದಷ್ಟು ಉತ್ತಮವಾಗಿದ್ದು, ಉಳಿದೆಲ್ಲ ಸೌಲಭ್ಯ ಮರೀಚಿಕೆಯಾಗಿವೆ. ಹೆದ್ದಾರಿ ಹತ್ತಿರದಲ್ಲೇ ಇರುವ ಗ್ರಾಮ ಪ್ರವಾಸಿ ೇತ್ರವಾಗಬೇಕಾಗಿದ್ದು, ಈ ಬಗ್ಗೆ ಪ್ರವಾಸೋದ್ಯಮ ಇಲಾಖೆ, ಜಿಲ್ಲಾ ಮತ್ತು ತಾಲೂಕು ಆಡಳಿತ ತಕ್ಷಣ ಕ್ರಮ ಕೈಗೊಂಡು ಪ್ರವಾಸಿಗರನ್ನು ಆಕರ್ಷಿಸಬೇಕು.

    ಗ್ರಾಮದಲ್ಲಿ ಪ್ರತಿನಿತ್ಯ ಸ್ವಚ್ಛತೆ ಜತೆಗೆ ವೈಜ್ಞಾನಿಕವಾಗಿ ಚರಂಡಿ ವ್ಯವಸ್ಥೆ, ರಸ್ತೆ ವ್ಯವಸ್ಥೆ ಮಾಡಬೇಕಿದೆ. ಗ್ರಾಮಸ್ಥರು ರಸ್ತೆ ಅಕ್ಕ&ಪಕ್ಕ ತಿಪ್ಪೆ ಹಾಕಿಕೊಳ್ಳುವುದರಿಂದ ಗ್ರಾಮಕ್ಕೆ ತಿಪ್ಪೆಗಳೇ ಸ್ವಾಗತ ಕೋರುತ್ತಿವೆ. ಸರ್ಕಾರ ತಿಪ್ಪೆ ಹಾಕಲು ಪ್ರತ್ಯೇಕ ಸ್ಥಳ ನಿಗದಿಪಡಿಸಬೇಕು. ಗ್ರಾಮದಲ್ಲಿ 20ಕ್ಕೂ ಹೆಚ್ಚು ಮನೆಗಳು ಶಿಥಿಲಾವಸ್ಥೆ ತಲುಪಿದ್ದು, ವಸತಿ ಇಲ್ಲದವರಿಗೆ ಆಶ್ರಯ ಯೋಜನೆಯಡಿ ಸೌಲಭ್ಯ ಕಲ್ಪಿಸಬೇಕು ಎಂಬುದು ನಿವಾಸಿಗಳ ಒತ್ತಾಯ.

    ಅಭಿವೃದ್ಧಿಗೆ ಪಂಚಾಯತ್​ರಾಜ್​ ಇಲಾಖೆ ಪ್ರಧಾನ ಕಾರ್ಯದರ್ಶಿ ಉಮಾ ಮಹದೇವನ್​ ವಿಶೇಷ ಆಸಕ್ತಿ ವಹಿಸಿದ್ದು, ತಾಪಂ ವಿಶೇಷ ಅನುದಾನ, ಆವನಿ ಗ್ರಾಪಂ ನರೇಗಾ ಯೋಜನೆಯಡಿ ಅಭಿವೃದ್ಧಿ ಕೈಗೆತ್ತಿಕೊಳ್ಳಲಾಗುವುದು. ತಕ್ಷಣಕ್ಕೆ ಚರಂಡಿ ಸ್ವಚ್ಛತೆಗೆ ಆದ್ಯತೆ ನೀಡಿ ಕಾರ್ಯರೂಪಕ್ಕೆ ತರಲಾಗುವುದು.
    ಡಾ.ಕೆ.ಸರ್ವೇಶ್​, ತಾಪಂ ಇಒ, ಮುಳಬಾಗಿಲು

    ಅಭಿವೃದ್ಧಿ ಕಾರ್ಯಗಳನ್ನು ನರೇಗಾ ಯೋಜನೆಯಲ್ಲೇ ಮಾಡಬೇಕಾಗಿದೆ. ಇದರ ಜವಾಬ್ದಾರಿ ತೆಗೆದುಕೊಳ್ಳಲು ಯಾರೂ ಮುಂದೆ ಬರುವುದಿಲ್ಲ. ಆದ್ದರಿಂದ ಅಭಿವೃದ್ಧಿ ಕುಂಠಿತವಾಗುತ್ತಿದೆ. ಸರ್ಕಾರ ಪ್ರವಾಸೋದ್ಯಮ ಇಲಾಖೆ ಮತ್ತಿತರ ಇಲಾಖೆಗಳ ಮೂಲಕ ಗ್ರಾಮ ಅಭಿವೃದ್ಧಿಪಡಿಸಬೇಕು.
    ವಿ.ಮಾರಪ್ಪ, ಮಾಜಿ ಸದಸ್ಯ, ವಿರುಪಾ ಗ್ರಾಪಂ

    ಗ್ರಾಮದ ಚರಂಡಿಗಳ ಸ್ವಚ್ಛತೆಯನ್ನು 2 ತಿಂಗಳ ಹಿಂದೆ ಮಾಡಿಸಲಾಗಿತ್ತು. ಮತ್ತೊಮ್ಮೆ ಸ್ವಚ್ಛತೆ ಮಾಡಿ ಅಭಿವೃದ್ಧಿ ಕಾರ್ಯ ಮಾಡಲಾಗುವುದು.
    ಜೆ.ವರದರಾಜ್​, ಪಿಡಿಒ, ಆವನಿ ಗ್ರಾಪಂ

    ವಿರುಪಾ ಗ್ರಾಮ ದೊಡ್ಡದಾಗಿದ್ದು, ಕಳೆದ ಬಾರಿ ಚರಂಡಿ ಸ್ವಚ್ಛತೆಗೆ ಗ್ರಾಪಂನಿಂದ 50 ಸಾವಿರ ರೂ. ನಿಗದಿ ಮಾಡಲಾಗಿದ್ದು, 80 ಸಾವಿರಕ್ಕೂ ಹೆಚ್ಚು ಖರ್ಚು ಬಂದಿದೆ. ಇದುವರೆಗೂ ಬಿಲ್​ ಆಗದೇ ಇರುವುದರಿಂದ ಸ್ವಚ್ಛತೆ ಕಾರ್ಯ ತಡವಾಗುತ್ತಿವೆ.
    ಶಾಂತಮ್ಮ ಚಂದ್ರಪ್ಪ, ಗ್ರಾಪಂ ಸದಸ್ಯೆ, ವಿರುಪಾ

    ಗ್ರಾಮದಲ್ಲಿ 300ಕ್ಕೂ ಹೆಚ್ಚು ಮನೆಗಳಿದ್ದು, ಅಭಿವೃದ್ಧಿಗೆ ಹೆಚ್ಚಿನ ಅನುದಾನ ದೊರೆಯುತ್ತಿಲ್ಲ. ನರೇಗಾದಲ್ಲಿ ಕಾಮಗಾರಿ ಮಾಡಲು ಯಾರೂ ಮುಂದೆ ಬರದಿರುವುದು ಸಮಸ್ಯೆಯಾಗುತ್ತಿದೆ. ವಿಶೇಷ ಅನುದಾನಗಳ ಮೂಲಕ ಗ್ರಾಮದಲ್ಲಿ ಅಭಿವೃದ್ಧಿ ಮಾಡಿಸಬೇಕು.
    ಕೆ.ಚೌಡಪ್ಪ, ಗ್ರಾಪಂ ಸದಸ್ಯ ವಿರುಪಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts