More

    ಇತಿಹಾಸ ದಾಖಲೆಗಳ ಸಂರಕ್ಷಣೆ ಅಗತ್ಯ

    ಹಿರೀಸಾವೆ: ಇತಿಹಾಸವನ್ನು ವೈಜ್ಞಾನಿಕ ಮತ್ತು ಸೈದ್ಧಾಂತಿಕವಾಗಿ ಸಂಶೋಧನೆ ಮಾಡುವಲ್ಲಿ ಲಿಖಿತ ರೂಪದಲ್ಲಿ ಇರುವ ದಾಖಲೆಗಳು ಪ್ರಮುಖ ಪಾತ್ರ ವಹಿಸಲಿವೆ ಎಂದು ಮೈಸೂರಿನ ಪತ್ರಾಗಾರ ವಿಭಾಗದ ಹಿರಿಯ ಸಹಾಯಕ ನಿರ್ದೇಶಕ ಎಚ್.ಎಲ್.ಮಂಜುನಾಥ್ ಹೇಳಿದರು.

    ಹಿರೀಸಾವೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಐಕ್ಯೂಎಸಿ ಮತ್ತು ಇತಿಹಾಸ ವಿಭಾಗ ಹಾಗೂ ಕರ್ನಾಟಕ ರಾಜ್ಯ ಪತ್ರಾಗಾರ ಇಲಾಖೆಯ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ಪತ್ರಾಗಾರ ಕೂಟ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

    ದಾಖಲೆಗಳನ್ನು ಸಂರಕ್ಷಣೆ ಮಾಡುವುದರಿಂದ ಮುಂದಿನ ಪೀಳಿಗೆಯವರ ಇತಿಹಾಸ ಅಧ್ಯಯನಕ್ಕೆ ಪೂರ್ಣ ಮಾಹಿತಿ ಸಿಗುತ್ತದೆ. ನೂರಾರು ವರ್ಷದ ಅತ್ಯಮೂಲ್ಯ ದಾಖಲೆಗಳನ್ನು ರಾಜ್ಯ ಪತ್ರಾಗಾರ ಇಲಾಖೆ ಸಂರಕ್ಷಣೆ ಮಾಡಿದೆ ಎಂದರು.

    ರಾಜಮನೆತನ ಕಾಲದಿಂದ ಇಂದಿನವರೆಗೆ ಆಯಾಯ ಪ್ರದೇಶದಲ್ಲಿ ಜಾತಿವಾರು ಜನಸಂಖ್ಯೆ ಎಷ್ಟು ಇತ್ತು ಮತ್ತು ಅವರ ಅರ್ಥಿಕ ಹಾಗೂ ಸಾಮಾಜಿಕ ಪರಿಸ್ಥಿತಿ ಏನೂ ಎಂಬ ದಾಖಲೆಗಳು ಪತ್ರಾಗಾರದಲ್ಲಿ ಇವೆ ಎಂದು ತಿಳಿಸಿದರು.

    ಸರ್ಕಾರವು ಮೀಸಲಾತಿ ನೀಡುವಾಗ ಈ ದಾಖಲೆಗಳನ್ನು ಪರಿಶೀಲನೆ ಮಾಡುತ್ತದೆ. 1799ರಿಂದ 1981 ರವರೆಗಿನ ಜನಗಣತಿಯ ದಾಖಲೆಗಳು ಲಭ್ಯ ಇವೆ. ಸಂಶೋಧನಾ ವಿದ್ಯಾರ್ಥಿಗಳು ಎಲ್ಲ ರೀತಿಯ ದಾಖಲೆಗಳ ಕುರಿತು ಪತ್ರಾಗಾರ ವಿಭಾಗದಲ್ಲಿ ಅಧ್ಯಯನ ಮಾಡಬಹುದು ಎಂದು ಮಾಹಿತಿ ನೀಡಿದರು.
    ನಿವೃತ್ತ ಪ್ರಾಂಶುಪಾಲ ಪ್ರೊ.ಎಚ್.ಪಿ.ಶಂಕರ್ ಮಾತನಾಡಿ, ಶ್ರವಣಬೆಳಗೊಳದಲ್ಲಿ ಪ್ರಾಕೃತ ಭಾಷೆ ಅಧ್ಯಯನ ಕೇಂದ್ರ ಇದೆ. ಸ್ಥಳೀಯ ಇತಿಹಾಸ ತಿಳಿಯುವ ಅಸಕ್ತಿ ಇರುವ ವಿದ್ಯಾರ್ಥಿಗಳು ಇಲ್ಲಿಗೆ ಭೇಟಿ ನೀಡಿದರೆ, ಉತ್ತಮ ಮಾಹಿತಿ ಸಿಗುತ್ತದೆ ಎಂದರು.

    ಕಾಲೇಜಿನ ಪ್ರಾಂಶುಪಾಲ ಪ್ರೊ.ಬಸವರಾಜು ಅಧ್ಯಕ್ಷತೆ ವಹಿಸಿದ್ದರು. ಇತಿಹಾಸ ವಿಭಾಗದ ಮುಖ್ಯಸ್ಥ ಸುನೀಲ್‌ಕುಮಾರ್ ಪ್ರಸ್ತಾವಿಕ ನುಡಿಗಳನ್ನಾಡಿದರು. ಉಪನ್ಯಾಸಕ ಬಿ.ಎನ್.ಸಚ್ಚಿಂದ್ರ ಮಾತನಾಡಿದರು. ಐಕ್ಯೂಎಸಿ ಸಂಚಾಲಕ ಕೆ.ಆರ್.ಗೋಪಾಲ, ಪ್ರಾಧ್ಯಾಪಕರಾದ ಜಗದೀಶ್, ಲತಾ ಇದ್ದರು. ಕಾರ್ಯಾಗಾರದಲ್ಲಿ ಪದವಿ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts