More

    ಸಂಭ್ರಮದ ರಂಗನಾಥಸ್ವಾಮಿ, ದಿಡ್ಡಮ್ಮ ದೇವಿಯ ರಂಗದ ಹಬ್ಬ

    ಹಿರೀಸಾವೆ: ಹೋಬಳಿಯ ಬೂಕ ಗ್ರಾಮದಲ್ಲಿ ಭಾನುವಾರ ರಾತ್ರಿ ಹಾಗೂ ಸೋಮವಾರ ರಂಗನಾಥಸ್ವಾಮಿ ಮತ್ತು ದಿಡ್ಡಮ್ಮ ದೇವಿಯ ರಂಗದ ಹಬ್ಬವನ್ನು ಭಕ್ತಿಭಾವದಿಂದ ಆಚರಿಸಲಾಯಿತು.

    ಭಾನುವಾರ ಬೂಕನಬೆಟ್ಟದಲ್ಲಿ ಇರುವ ಮೂಲ ದೇವಸ್ಥಾನದಲ್ಲಿ ಶ್ರೀ ರಂಗನಾಥಸ್ವಾಮಿಗೆ ಅಭಿಷೇಕದ ಜತೆಗೆ ಪೂಜೆ ಸಲ್ಲಿಸಲಾಯಿತು. ನಂತರ ಉತ್ಸವ ಮೂರ್ತಿಯನ್ನು ಒಡವೆ, ವಸ್ತ್ರ ಹಾಗೂ ವಿವಿಧ ಬಗೆಯ ಪುಷ್ಪಗಳಿಂದ ಅಲಂಕರಿಸಿ ಗ್ರಾಮಕ್ಕೆ ಕರೆತರಲಾಯಿತು. ಸಂಜೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮಂಗಳವಾದ್ಯದೊಂದಿಗೆ ಸ್ವಾಮಿಯ ಉತ್ಸವ ನಡೆಸಿ ಗ್ರಾಮದ ಮಧ್ಯದಲ್ಲಿರುವ ರಂಗ ಮಂಟಪದ ಬಳಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲಾಯಿತು. ರಾತ್ರಿ ದಿಡ್ಡಮ್ಮ ದೇವರಿಗೆ ಹಸಿರು ಬಂಡಿಯನ್ನು ಸಿದ್ಧಪಡಿಸಿ, ಬಲಿ ಅರ್ಪಿಸಲಾಯಿತು. ಗ್ರಾಮಸ್ಥರಿಂದ ರಂಗ ಕುಣಿತ ನಡೆಸಲಾಯಿತು.

    ದಿಡ್ಡಮ್ಮ ದೇವಿಯ ಮೂಲಸ್ಥಾನದಲ್ಲಿ ತಂಬಿಟ್ಟು, ಮಡೆ ಆರತಿಯೊಂದಿಗೆ ಪೂಜೆ ಸಲ್ಲಿಸಲಾಯಿತು. ಅಲಂಕೃತ ಟ್ಯಾಂಕರ್‌ನಲ್ಲಿ ದೇವರನ್ನು ಕೂರಿಸಿ, ತಮಟೆ ವಾದ್ಯದೊಂದಿಗೆ ಗ್ರಾಮದಲ್ಲಿ ಉತ್ಸವ ನಡೆಸಿದರು.

    ಸೋಮವಾರ ಸಂಜೆ 3 ಗಂಟೆಗೆ ಉತ್ಸವ ದೇವರನ್ನು ಬೂಕನಬೆಟ್ಟದ ಮೂಲಸ್ಥಾನಕ್ಕೆ ಕರೆದೊಯ್ದು ಗುಡಿದುಂಬಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts