More

    ಇಂದು, ನಾಳೆಯೂ ಉತ್ತಮ ಮಳೆ ಸಾಧ್ಯತೆ

    ಕಾರವಾರ: ಜಿಲ್ಲೆಯಲ್ಲಿ ನಿರಂತರ ಮಳೆ ಮುಂದುವರಿದಿದೆ. ಶನಿವಾರ ಇಡೀ ದಿನ ಜಿಲ್ಲೆಯ ವಿವಿಧೆಡೆ ನಿರಂತರ ಮಳೆಯಾಗಿದೆ. ಸೆ.13 ಹಾಗೂ 14 ರಂದೂ ಉತ್ತಮ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕಿತ್ತಳೆ ಅಲರ್ಟ್ ಘೊಷಿಸಲಾಗಿದೆ. ಸೆ. 17 ರವರೆಗೆ ಹದವಾಗಿ ಮಳೆಯಾಗಬಹುದು ಎಂದು ಹಳದಿ ಅಲರ್ಟ್ ಘೊಷಿಸಲಾಗಿದೆ.
    ಶನಿವಾರ ಬೆಳಗಿನ ವರದಿಯಂತೆ ಅಂಕೋಲಾದಲ್ಲಿ 36, ಭಟ್ಕಳ-145, ಹಳಿಯಾಳ- 6, ಹೊನ್ನಾವರ- 79, ಕಾರವಾರ- 55.8, ಕುಮಟಾ-63.6, ಮುಂಡಗೋಡ- 10.4, ಸಿದ್ದಾಪುರ- 42.4, ಶಿರಸಿ- 36, ಜೊಯಿಡಾ- 5.6, ಯಲ್ಲಾಪುರದಲ್ಲಿ 6.6 ಮಿಮೀ ಮಳೆಯಾಗಿದೆ.
    ಸತತ ಮಳೆಗೆ ಕುಸಿದು ಬಿದ್ದ ಮನೆ: ಭಟ್ಕಳ ತಾಲೂಕಿನಲ್ಲಿ ಕಳೆದೆರಡು ದಿನಗಳಿಂದ ಒಂದೇ ಸಮನೆ ಮಳೆ ಸುರಿಯುತ್ತಿದ್ದು, ತಾಲೂಕಿನ ವಿವಿಧ ಭಾಗಗಳಲ್ಲಿ ಹಾನಿಯಾದ ಕುರಿತು ವರದಿಯಾಗಿದೆ. ಬೈಲೂರಿನ ಭಂಡಾರಿಕೇರಿಯಲ್ಲಿ ಲಕ್ಷ್ಮೀ ಅಣ್ಣಪ್ಪ ದೇವಾಡಿಗ ಅವರ ಮನೆ ಕುಸಿದು ಬಿದ್ದಿದೆ. ಬೈಲೂರಿನ ಮೇಲಿನ ಶೇರುಗಾರ ಕೇರಿಯಲ್ಲೂ ಗೋಪಾಲ ಸೀತಾರಾಮ ಆಚಾರ್ಯ ಅವರಿಗೆ ಸೇರಿದ ಮನೆ ಕುಸಿದು ಬಿದ್ದು ಮನೆಯ ಸದಸ್ಯರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
    ಸ್ಥಳಕ್ಕೆ ಗ್ರಾಮ ಲೆಕ್ಕಾಧಿಕಾರಿ ಚರಣ ಗೌಡ ಮತ್ತು ಪಂಚಾಯಿತಿ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಭಟ್ಕಳದ ಪುರಸಭೆ ವ್ಯಾಪ್ತಿಯ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಆವರಣದ ಗೋಡೆ ಕುಸಿದು ಬಿದ್ದಿದೆ. ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ತಗ್ಗು ಪ್ರದೇಶಗಳು ಜಲಾವೃತವಾಗಿವೆ. ಮೀನುಗಾರರು, ಫಾತಿ ದೋಣಿಯವರು ಸಮುದ್ರಕ್ಕೆ ತೆರಳದಂತೆ ತಾಲೂಕಾಡಳಿತ ಎಚ್ಚರಿಕೆ ನೀಡಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts