More

    ಇಂದಿನಿಂದ ಭಾರತ-ಆಸ್ಟ್ರೇಲಿಯಾ ಅಹರ್ನಿಶಿ ಮಹಿಳಾ ಟೆಸ್ಟ್ ಪಂದ್ಯ

    ಗೋಲ್ಡ್‌ಕೋಸ್ಟ್: ಆಸ್ಟ್ರೇಲಿಯಾ ಪ್ರವಾಸದ ಏಕದಿನ ಸರಣಿಯಲ್ಲಿ ಸೋಲಿನ ನಡುವೆಯೂ ಗಮನಾರ್ಹ ನಿರ್ವಹಣೆ ನೀಡಿದ್ದ ಭಾರತ ಮಹಿಳಾ ತಂಡ ಚೊಚ್ಚಲ ಅಹರ್ನಿಶಿ ಟೆಸ್ಟ್ ಪಂದ್ಯಕ್ಕೆ ಸಜ್ಜಾಗಿದೆ. ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವೆ ಗುರುವಾರದಿಂದ ಏಕೈಕ ಟೆಸ್ಟ್ ಪಂದ್ಯ ಕ್ಯಾರಾರಾ ಓವಲ್ ಮೈದಾನದಲ್ಲಿ ನಡೆಯಲಿದೆ. ಇದರೊಂದಿಗೆ ಉಭಯ ತಂಡಗಳು 15 ವರ್ಷಗಳ ಬಳಿಕ ಟೆಸ್ಟ್ ಪಂದ್ಯದಲ್ಲಿ ಎದುರಾಗಲಿವೆ. ಆತಿಥೇಯರ ಸತತ 26 ಏಕದಿನ ಪಂದ್ಯ ಗೆಲುವಿನ ಓಟಕ್ಕೆ ಬ್ರೇಕ್ ಹಾಕಿದ ವಿಶ್ವಾಸದಲ್ಲಿರುವ ಮಿಥಾಲಿ ರಾಜ್ ಬಳಗ, ಟೆಸ್ಟ್‌ನಲ್ಲೂ ತಿರುಗೇಟು ನೀಡುವ ಲೆಕ್ಕಾಚಾರದಲ್ಲಿದೆ. ಗಾಯದಿಂದ ಚೇತರಿಸಿಕೊಳ್ಳದ ಹರ್ಮಾನ್‌ಪ್ರೀತ್ ಕೌರ್ ಈ ಪಂದ್ಯಕ್ಕೂ ಅಲಭ್ಯರಾಗಿದ್ದಾರೆ.

    ಉಭಯ ತಂಡಗಳು 2006ರಲ್ಲಿ ಕಡೇ ಬಾರಿ ಟೆಸ್ಟ್‌ನಲ್ಲಿ ಎದುರಾಗಿದ್ದವು. ಎರಡೂ ತಂಡಗಳ ಪೈಕಿ ಅಂದಿನ ಹಣಾಹಣಿಯಲ್ಲಿ ಆಡಿದ್ದ ಮಿಥಾಲಿ ರಾಜ್ ಹಾಗೂ ಜೂಲನ್ ಗೋಸ್ವಾಮಿ ಮಾತ್ರ ಈಗಿನ ತಂಡದಲ್ಲೂ ಇದ್ದಾರೆ. ಕಳೆದ ಇಂಗ್ಲೆಂಡ್ ಪ್ರವಾಸದಲ್ಲಿ ಭಾರತ ತಂಡ ಪ್ರತಿಹೋರಾಟದ ಮೂಲಕ ಡ್ರಾ ಸಾಧಿಸಲು ಯಶಸ್ವಿಯಾಗಿತ್ತು. ಇದು ಮಹಿಳಾ ಕ್ರಿಕೆಟ್‌ನಲ್ಲಿ ಕೇವಲ 2ನೇ ಪಿಂಕ್ ಬಾಲ್ ಟೆಸ್ಟ್ ಆಗಿದೆ. 2017ರ ನವೆಂಬರ್‌ನಲ್ಲಿ ಆಸೀಸ್-ಇಂಗ್ಲೆಂಡ್ ನಡುವೆ ಸಿಡ್ನಿಯಲ್ಲಿ ಮಹಿಳೆಯರ ಚೊಚ್ಚಲ ಅಹರ್ನಿಶಿ ಟೆಸ್ಟ್ ನಡೆದಿತ್ತು.

    ಪಂದ್ಯ ಆರಂಭ: ಬೆಳಗ್ಗೆ 10
    ನೇರಪ್ರಸಾರ: ಸೋನಿ ನೆಟ್‌ವರ್ಕ್

    ಟೆಸ್ಟ್ ಮುಖಾಮುಖಿ: 9
    ಆಸೀಸ್: 4
    ಭಾರತ: 0
    ಡ್ರಾ: 5

    * 9: ಉಭಯ ತಂಡಗಳು ಇದುವರೆಗೂ 9 ಟೆಸ್ಟ್ ಪಂದ್ಯಗಳಲ್ಲಿ ಎದುರಾಗಿದ್ದು, 4ರಲ್ಲಿ ಆಸ್ಟ್ರೇಲಿಯಾ ಗೆದ್ದರೆ, ಉಳಿದ 5 ಪಂದ್ಯಗಳು ಡ್ರಾಗೊಂಡಿವೆ. ಭಾರತ ಇದುವರೆಗೂ ಗೆಲುವಿನ ಖಾತೆ ತೆರೆದಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts