More

    ಇಂಡಿ ತಾಲೂಕಿನಲ್ಲಿ ಮದ್ಯ ಮಾರಾಟ ಜೋರು, ಶಿವಯೋಗಪ್ಪ ನೇದಲಗಿ ಎಚ್ಚರಿಕೆ, ಅಕ್ರಮ ತಡೆಯದಿದ್ದರೆ ಉಗ್ರ ಹೋರಾಟ

    ವಿಜಯಪುರ: ಇಂಡಿ ತಾಲೂಕಿನಾದ್ಯಂತ ಅಕ್ರಮ ಮದ್ಯ ಮಾರಾಟ ಹಾವಳಿ ಹೆಚ್ಚಾಗಿದ್ದು ಕೂಡಲೇ ಅಬಕಾರಿ ಅಧಿಕಾರಿಗಳು ಕ್ರಮ ಕೈಗೊಳ್ಳದಿದ್ದರೆ ಉಗ್ರ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಜಿಪಂ ಮಾಜಿ ಅಧ್ಯಕ್ಷ ಶಿವಯೋಗಪ್ಪ ನೇದಲಗಿ ಎಚ್ಚರಿಸಿದರು.

    ಬುಧವಾರ ಅಬಕಾರಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ ಅವರು, ತಾಲೂಕಿನ ಪ್ರತಿ ಹಳ್ಳಿಗಳಲ್ಲೂ ಅಕ್ರಮ ಮದ್ಯ ಮಾರಾಟ ನಡೆಯುತ್ತಿದೆ. ಸಣ್ಣ ಪುಟ್ಟ ಗೂಡಂಗಡಿಗಳಲ್ಲೂ ಮದ್ಯ ಮಾರಾಟ ನಡೆದಿದೆ. ಅದಾಗ್ಯೂ ಅಬಕಾರಿ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದರು.

    ಇಂಡಿ ನಗರ ಸೇರಿದಂತೆ ತಾಂಬಾ, ಸಂಗೋಗಿ, ತಡವಲಗಾ, ಲಚ್ಯಾಣ, ಝಳಕಿ, ಬಂಥನಾಳ, ಬಳ್ಳೊಳ್ಳಿ, ಹೋರ್ತಿ, ಸಾತಲಗಾಂವ, ರೋಡಗಿ, ಖೇಡಗಿ, ಲಾಳಸಂಗಿ ಮುಂತಾದ ಗ್ರಾಮಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ. ಸರ್ಕಾರಿ ಸ್ವಾಮ್ಯದ ಎಂಎಸ್‌ಐಎಲ್ ಮಳಿಗೆಗಳಲ್ಲಿ ನಿಯಮ ಬಾಹಿರವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ. ಬಾಕ್ಸ್‌ಗಟ್ಟಲೇ ಹೊರಗಡೆ ಮಾರಾಟ ಮಾಡುತ್ತಿರುವುದು ಸಾಮಾನ್ಯವಾಗಿದೆ. ಅಲ್ಲದೇ, ಹೆಚ್ಚಿನ ದರಕ್ಕೆ ಮಾರಾಟ ಮಾಡಲಾಗುತ್ತಿದೆ. ಇಷ್ಟಾದರೂ ಅಬಕಾರಿ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ ಎಂದು ನೇದಲಗಿ ಆಪಾದಿಸಿದರು.

    ಎಂಎಸ್‌ಐಎಲ್ ಮಳಿಗೆ ಮುಂದೆ ದರ ಪಟ್ಟಿ ಇರಿಸಬೇಕು. ಆದರೆ, ಬಹುತೇಕ ಮಳಿಗೆಗಳು ದರಪಟ್ಟಿ ಅಳವಡಿಸಿಲ್ಲ. ಇಂಥ ಅನೇಕ ಲೋಪದೋಷಗಳಿದ್ದರೂ ಅಧಿಕಾರಿಗಳು ದಾಳಿ ನಡೆಸುತ್ತಿಲ್ಲ. ಕೂಡಲೇ ಎಚ್ಚೆತ್ತುಕೊಂಡು ಅಕ್ರಮ ಮದ್ಯ ಮಾರಾಟ ಹಾಗೂ ನಿಯಮ ಬಾಹಿರವಾಗಿ ಮದ್ಯ ಸಾಗಾಟ ಮತ್ತು ಮಾರಾಟ ಮಾಡುವವರ ಮೇಲೆ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ಅನಿವಾರ್ಯ ಎಂದರು.

    ಗ್ರಾಮೀಣರಾದ ಎಂ.ಎಸ್. ಗಿಣ್ಣಿ, ಸಿದ್ರಾಮ ಶಿವಣ್ಣ ಈಶ್ವರಗೊಂಡ, ಎ.ಐ. ಅಗರಖೇಡ, ಎಸ್.ಎ. ಲೋಣಿ, ಚನ್ನಪ್ಪ ಶ್ರೀ. ಪಡಗಾನೂರ, ವಿಠಲ ತೆನ್ನಿಹಳ್ಳಿ, ಎಚ್.ಎಲ್. ಹಂಜಗಿ, ಡಿ.ಎಸ್. ಸಾಲೋಟಗಿ, ಎಸ್.ಎಸ್. ನಂದಾಗೋಳ, ಮಹೇಶ ಚಾಂದಕವಟೆ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts