More

    ಆ್ಯನಿಫ್ರೇಮ್ಸ್ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವುದು ನಮ್ಮ ಗುರಿ : ಕಾಲೇಜಿನ ನಿರ್ದೇಶಕ ರಘುವೀರ್ ನಾಯಕ್ ಬದಾಮಿ ಭರವಸೆ

    ಮೈಸೂರು : ಸ್ಕಿಲ್ ಇದ್ದರೆ ಸಾಕು ಅಂತಹ ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯ ರೂಪಿಸಿಕೊಡುವುದು ನಮ್ಮ ಗುರಿ. ಇದು ಆ್ಯನಿಫ್ರೇಮ್ಸ್ ಆ್ಯನಿಮೇಷನ್ ಕಾಲೇಜಿನ ನಿರ್ದೇಶಕ ರಘುವೀರ್ ನಾಯಕ್ ಬದಾಮಿ ಅವರ ವಿಶ್ವಾಸದ ನುಡಿಗಳು.


    ಮೈಸೂರಿನ ನಿವೇದಿತ ನಗರದಲ್ಲಿ ಕಳೆದ 13 ವರ್ಷಗಳಿಂದ ತನ್ನದೆಯಾದ ಸೇವೆ ನೀಡುತ್ತ ಬರುತ್ತಿರುವ ಆ್ಯನಿಫ್ರೇಮ್ಸ್ ಆ್ಯನಿಮೇಷನ್ ಕಾಲೇಜು, ಇದುವರೆಗೆ ಸಾಕಷ್ಟು ವಿದ್ಯಾರ್ಥಿಗಳ ಭವಿಷ್ಯ ರೂಪಿಸಿದೆ. ಅವರಿಗೆ ವೃತ್ತಿ ಕೌಶಲ ತರಬೇತಿ ನೀಡಿ ಬದ್ಧತೆ ಮೆರೆದಿದೆ. ಈ ಕಾಲೇಜಿನಲ್ಲಿ ಆ್ಯನಿಮೇಷನ್ ಕಲಿತ ವಿದ್ಯಾರ್ಥಿಗಳು ಇಂದು ಜಗತ್ತಿನ ನಾನಾ ದೇಶಗಳಲ್ಲಿ ಉದ್ಯೋಗದಲ್ಲಿದ್ದು, ಸಿನಿಮಾ, ಕೈಗಾರಿಕೆ, ಪ್ಯಾಕೇಜಿಂಗ್, ವೆಬ್, ಗೇಮಿಂಗ್, ಆರ್ಕಿಟೆಕ್ಚರ್ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.


    3 ವರ್ಷದ ಬ್ಯಾಚುಲರ್ ಇನ್ ಮಲ್ಟಿಮೀಡಿಯಾ, (ಬಿ.ವೋಕ್), 3 ವರ್ಷದ ಡಿಪ್ಲೊಮಾ ಇನ್ ಆ್ಯನಿಮೇಷನ್ ಫಿಲ್ಮ್ ಮೇಕಿಂಗ್, 2 ವರ್ಷದ ಡಿಪ್ಲೊಮಾ ಇನ್ ಮಲ್ಟಿಮೀಡಿಯಾ ಸೇರಿದಂತೆ ಇನ್ನೂ ಹಲವಾರು ಕೋರ್ಸ್‌ಗಳಿದ್ದು, ಪಿಯುಸಿ, ಎಸ್‌ಎಸ್‌ಎಲ್‌ಸಿ ಪಾಸ್ / ಪೇಲ್ ಆದ 16 ವರ್ಷ ಮೇಲ್ಪಟ್ಟ ವಿದ್ಯಾರ್ಥಿಗಳು ಈ ಕಾಲೇಜಿನಲ್ಲಿ ಪ್ರವೇಶಾತಿ ಪಡೆಯಬಹುದಾಗಿದೆ. ಶುಲ್ಕ ಪಾವತಿಯಲ್ಲೂ ವಿನಾಯಿತಿ ನೀಡಲಾಗುತ್ತಿದ್ದು, ಪಾಲಕರಿಗೆ ತೊಂದರೆಯಾಗಬಾರದು ಎನ್ನುವ ಉದ್ದೇಶದಿಂದ ಕಂತಿನ ರೂಪದಲ್ಲಿ ಪಾವತಿಸಬಹುದಾದ ವ್ಯವಸ್ಥೆ ಕಲ್ಪಿಸಲಾಗಿದೆ.


    ನಮ್ಮಲ್ಲಿ ಉತ್ತಮ ಬೋಧಕ ವರ್ಗ ಹಾಗೂ ಮೆಂಟರ್‌ಗಳಿದ್ದಾರೆ. ಅವರು ವಿದ್ಯಾರ್ಥಿಗಳ ಸಾಮರ್ಥ್ಯಕ್ಕೆ ಅನುಗುಣವಾಗಿ ಬೋಧನೆ ಮತ್ತು ಮಾರ್ಗದರ್ಶನ ಮಾಡುತ್ತಾರೆ. ಕಲಿಕೆಗೆ ಉತ್ತಮ ವಾತಾವರಣ ಇದ್ದು, ಗ್ರಂಥಾಲಯದ ವ್ಯವಸ್ಥೆ ಕೂಡ ಇದೆ. ಕೇವಲ ವಿದ್ಯೆ ಕಲಿಸುವುದಷ್ಟೆ ನಮ್ಮ ಕೆಲಸವಲ್ಲ. ನಮ್ಮ ಕಾಲೇಜಿಗೆ ದಾಖಲಾದ ವಿದ್ಯಾರ್ಥಿಗಳು ಅಂಕಪಟ್ಟಿ ಜತೆ, ಉದ್ಯೋಗ ಪತ್ರವನ್ನೂ ಕೈಯಲ್ಲಿ ಹಿಡಿದು ಕಾಲೇಜಿನಿಂದ ಹೊರ ಹೊಮ್ಮಬೇಕು, ಇದೇ ನಮ್ಮ ಆಶಯ. ಈ ಕಾರಣಕ್ಕಾಗಿಯೇ ಪ್ರತಿ ವರ್ಷ ಕ್ಯಾಂಪಸ್ ಸೆಲೆಕ್ಷನ್ ನಡೆಸಲಾಗುತ್ತದೆ. ಆ ಮೂಲಕ ವಿದ್ಯಾರ್ಥಿಗಳಿಗೆ ಉದ್ಯೋಗ ಕಲ್ಪಿಸಿಕೊಡಲಾಗುತ್ತದೆ. ಒಂದು ವೇಳೆ ಕ್ಯಾಂಪಸ್ ಸೆಲೆಕ್ಷನ್ ಆಗದಿದ್ದರೆ, ಅಂತಹ ವಿದ್ಯಾರ್ಥಿಗಳಿಗೆ ಮತ್ತೊಮ್ಮೆ ವಿಶೇಷ ತರಗತಿ ಹಾಗೂ ಮಾರ್ಗದರ್ಶನ ಮಾಡಿ ಉದ್ಯೋಗ ಗಿಟ್ಟಿಸಿಕೊಳ್ಳುವ ಅರ್ಹತೆ ಕಲ್ಪಿಸಿಕೊಡಲಾಗುತ್ತದೆ ಎಂದು ಮಾಹಿತಿ ನೀಡಿದರು ರಘುವೀರ್ ನಾಯಕ್ ಬದಾಮಿ


    ಆ್ಯನಿಮೇಷನ್ ಕ್ಷೇತ್ರದಲ್ಲಿ ಜಗತ್ತು ಇಂದು ದಾಪುಗಾಲು ಹಾಕುತ್ತಿದೆ. ಆದರೆ ಬಹುತೇಕ ವಿದ್ಯಾರ್ಥಿಗಳಿಗೆ ಇದರ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ಇದು ಕೌಶಲ ಆಧಾರಿತ ಕೋರ್ಸ್ ಆಗಿದ್ದು, ಪ್ರತಿಭೆಗೆ ಅನುಗುಣವಾಗಿ ಆರ್ಥಿಕವಾಗಿ ಬೆಳವಣಿಗೆ ಹೊಂದಬಹುದು.
    ರಘುವೀರ್ ನಾಯಕ್ ಬದಾಮಿ
    ಆ್ಯನಿಫ್ರೇಮ್ಸ್ ಆ್ಯನಿಮೇಷನ್ ಕಾಲೇಜಿನ ನಿರ್ದೇಶಕ



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts