More

    ಆಸಂಗಿಯ ಅಫ್ಜಲ್​ಖಾನ್ ಪ್ರಥಮ

    ನರಗುಂದ: ತಾಲೂಕಿನ ಭೈರನಹಟ್ಟಿ ಗ್ರಾಮದಲ್ಲಿ ಶ್ರೀ ದೊರೆಸ್ವಾಮಿಗಳ ಪುಣ್ಯ ಸ್ಮರಣೋತ್ಸವದ ಅಂಗವಾಗಿ ಏರ್ಪಡಿಸಿದ್ದ ಸಂಗ್ರಾಣಿ ಕಲ್ಲೆತ್ತುವ ಸ್ಪರ್ಧೆಯಲ್ಲಿ ಮಹಾರಾಷ್ಟ್ರದ ಆಸಂಗಿ ಗ್ರಾಮದ ಅಫ್ಜಲ್​ಖಾನ್ ಪ್ರಥಮ ಸ್ಥಾನದೊಂದಿಗೆ 5 ಸಾವಿರ ರೂ. ನಗದು ಹಾಗೂ ಟ್ರೋಫಿ ತಮ್ಮದಾಗಿಸಿಕೊಂಡರು

    ಮುನವಳ್ಳಿಯ ಯೂನುಸ್ ತೋರಗಲ್ಲ ದ್ವಿತೀಯ ಸ್ಥಾನ (3001 ರೂ. ಹಾಗೂ ಟ್ರೋಫಿ) ಹಾಗೂ ಬನಹಟ್ಟಿ ಗ್ರಾಮದ ಮುತ್ತು ಗಡ್ಡಿ ತೃತೀಯ ಸ್ಥಾನ (2001 ರೂ. ಟ್ರೋಫಿ )ಪಡೆದರು.

    ಶ್ರೀ ಸಿಂದಗಿ ಶಾಂತವೀರೇಶ್ವರ ಯೋಗ ವ್ಯಾಯಾಮ ಹಾಗೂ ಕ್ರೀಡಾ ಸಂಘ ಮತ್ತು ಶ್ರೀ ದೊರೆಸ್ವಾಮಿ ವಿವಿಧೋದ್ಧೇಶ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಸ್ಪರ್ಧೆಯಲ್ಲಿ ರಾಯಚೂರು, ಬೆಳಗಾವಿ, ಯಾದಗಿರಿ, ಧಾರವಾಡ ಜಿಲ್ಲೆಯ 28 ಸ್ಪರ್ಧಾಳುಗಳು ಭಾಗವಹಿಸಿದ್ದರು.

    ಇದಕ್ಕೂ ಮುನ್ನ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದ ಶಾಂತಲಿಂಗ ಶ್ರೀಗಳು, ‘ಗ್ರಾಮೀಣ ಕ್ರೀಡೆಗಳು ದೇಶದ ಆಸ್ತಿ. ಸದೃಢ ದೇಹದಿಂದ ಬಲಿಷ್ಠ ರಾಷ್ಟ್ರ ನಿರ್ವಿುಸಲು ಸಾಧ್ಯವಿದೆ. ಆದ್ದರಿಂದ ಯುವಕರು ಸೋಮಾರಿಗಳಾಗದೆ ಗ್ರಾಮ, ನಾಡು ಹಾಗೂ ಭವ್ಯ ಭಾರತಕ್ಕಾಗಿ ತಮ್ಮ ಜೀವನ ಮೀಸಲಾಗಿರಿಸಬೇಕು’ ಎಂದುಹೇಳಿದರು.

    ರುದ್ರಪ್ಪ ಐನಾಪೂರ, ಉಮೇಶ ಮೊರಬದ, ವಿನಾಯಕ ತೆಗ್ಗಿ, ಸಚಿನ ಹದಲಿ, ಹನುಮಂತ ಸಂಗಳದ, ರುದ್ರಪ್ಪ ಐನಾಪೂರ, ಬಸವಂತಪ್ಪ ಲದ್ದಿ, ಶಿವನಗೌಡ ಉಮಚಗಿ, ದೇವಪ್ಪ ಪೂಜಾರ, ಈರಣ್ಣ ಜಡೆನ್ನವರ, ಮೆಹಬೂಬಸಾಬ್ ಅಗಸರ ಇತರರು ಉಪಸ್ಥಿತರಿದ್ದರು. ಪ್ರೊ. ಆರ್.ಬಿ. ಚಿನಿವಾಲರ, ಮಹಾಂತೇಶ ಹಿರೇಮಠ ಕಾರ್ಯಕ್ರಮ ನಿರ್ವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts