More

    ಆರ್‌ಎಸ್‌ಎಸ್, ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಶ್ರಮದಾನ; ರಂಗಸ್ಥಳದ ಕಲ್ಯಾಣಿಗಳಿಗೆ ಮರುಜೀವ

    ಚಿಕ್ಕಬಳ್ಳಾಪುರ: ಲಾಕ್‌ಡೌನ್ ಬಿಡುವಿನ ಅವಧಿಯಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ, ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಕಾರ್ಯಕರ್ತರು ಮತ್ತು ವಿದ್ಯಾರ್ಥಿಗಳು ತಾಲೂಕಿನ ರಂಗಸ್ಥಳದ ಕಲ್ಯಾಣಿ ಸ್ವಚ್ಛಗೊಳಿಸುವ ಮೂಲಕ ಮಾದರಿಯಾಗಿದ್ದಾರೆ.

    ಈ ಹಿಂದೆ ಆಲಯ ಸಮೀಪದ ದೊಡ್ಡ ಕಲ್ಯಾಣಿ, ಕಳೆದವಾರ ಚೌಕಾಕೃತಿಯ ಕಲ್ಯಾಣಿ, ಶನಿವಾರ ಛತ್ರಿಯಾಕಾರದ ಕಲ್ಯಾಣಿ ಸ್ವಚ್ಛಗೊಳಿಸಿದ್ದು, ಮೂರು ಕಲ್ಯಾಣಿಗಳೂ ಆಕರ್ಷಕವಾಗಿ ಕಾಣುತ್ತಿವೆ.

    ರಾಜ ಮಹಾರಾಜರ ಕಾಲದಲ್ಲಿ ನಿರ್ಮಾಣವಾಗಿರುವ ರಂಗಸ್ಥಳದ ರಂಗನಾಥಸ್ವಾಮಿ ದೇವಾಲಯ ಧಾರ್ಮಿಕ ಮತ್ತು ಪ್ರವಾಸಿ ತಾಣ. ಮಕರ ಸಂಕ್ರಾಂತಿಯಂದು ಬೆಳಗ್ಗೆ ಸೂರ್ಯನ ಕಿರಣಗಳು ದೇವರ ಪಾದಗಳನ್ನು ಸ್ಪರ್ಶಿಸುವುದು ಇಲ್ಲಿನ ಮತ್ತೊಂದು ವಿಶೇಷ.

    ಈ ದೇಗುಲ ಸಮೀಪದಲ್ಲಿರುವ ಮೂರು ಕಲ್ಯಾಣಿಗಳು ಸಮರ್ಪಕ ನಿರ್ವಹಣೆ ಇಲ್ಲದೇ ಸ್ವರೂಪವನ್ನೇ ಕಳೆದುಕೊಂಡಿದ್ದವು, ಕಲ್ಯಾಣಿಗಳ ಸ್ವಚ್ಛತೆಗೆ ತಹಸೀಲ್ದಾರ್ ನಾಗಪ್ರಶಾಂತ್ ಚಾಲನೆ ನೀಡುತ್ತಿದ್ದಂತೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ, ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಕಾರ್ಯಕರ್ತರು ಮತ್ತು ವಿದ್ಯಾರ್ಥಿಗಳು ಸ್ವಚ್ಛತಾ ಕಾರ್ಯದಲ್ಲಿ ತೊಡಗಿದರು. ಸಂಜೆ ವೇಳೆಗೆ ಕಲ್ಯಾಣಿಗೆ ಹೊಸಕಳೆ ಬಂದಿದೆ.

    ಜಿಲ್ಲಾಡಳಿತಕ್ಕೆ ಸ್ವಯಂಸೇವಕರ ನೆರವು: ಸತತ ಬರಗಾಲ, ಅಂತರ್ಜಲಮಟ್ಟ ಕುಸಿತದಿಂದ ಜಿಲ್ಲೆ ಬೇಯುತ್ತಿದೆ, ಇದನ್ನರಿತು ಜಿಲ್ಲಾಡಳಿತ ಪಾರಂಪರಿಕ ಜಲಮೂಲಗಳ ರಕ್ಷಣೆ ಹಾಗೂ ಪುನಶ್ಚೇತನಕ್ಕೆ ಮುಂದಾಗಿದ್ದು, ಸಂಘ-ಸಂಸ್ಥೆಗಳು, ಸ್ವಯಂ ಸೇವಕರು ಸೇರಿ ಜನರು ಕೈ ಜೋಡಿಸಿದ್ದಾರೆ.

    ಸ್ವಚ್ಛಗೊಂಡ ಕಲ್ಯಾಣಿ : ಎಲ್ಲೆಂದರಲ್ಲಿ ತ್ಯಾಜ್ಯ ಗಿಡಗಳು ಬೆಳೆದು, ತ್ಯಾಜ್ಯದಿಂದ ತುಂಬಿ ತುಳುಕಾಡುತ್ತಿದ್ದ ಇಲ್ಲಿನ ಕಲ್ಯಾಣಿಗೆ ಹೊಸಮೆರುಗು ಬಂದಿದೆ. ಆರ್‌ಎಸ್‌ಎಸ್ ಪ್ರಾಂತ ಸೇವಾ ಕಾರ್ಯವಾಹ ನಾರಾಯಣಸ್ವಾಮಿ, ನಗರ ಘಟಕದ ಲಕ್ಷ್ಮೀನಾರಾಯಣ ಗುಪ್ತ, ಕಾರ್ಯವಾಹಕ್ ಅನಿಲ್, ವಿಭಾಗ್ ಪ್ರಚಾರಕ ಕಿರಣ್, ಸ್ವಯಂಸೇವಕರಾದ ವಿಕ್ರಮ್, ಮನೋಜ್ ಶರ್ಮ, ಮಧುಚಂದ್ರ, ಆರ್.ನಾರಾಯಣಪ್ಪ, ಎಸ್‌ಆರ್‌ಎಸ್ ದೇವರಾಜ್, ಬಾಲಚಂದ್ರ, ಸ್ಕೌಟ್ ಆ್ಯಂಡ್ ಗೈಡ್ಸ್ ಜಿಲ್ಲಾ ಸಂಘಟಕ ಜೆ.ತಿಮ್ಮರಾಜು, ಚಿಂತಾಮಣಿ ಮತ್ತು ಗೌರಿಬಿದನೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರೋವರ್ಸ್‌ ವಿದ್ಯಾರ್ಥಿಗಳನ್ನೊಳಗೊಂಡ ತಂಡ ಶನಿವಾರ ಬೆಳಗ್ಗೆಯಿಂದಲೇ ಸ್ವಚ್ಛತಾ ಕಾರ್ಯ ಕೈಗೊಂಡು, ಬೆಳೆದಿದ್ದ ಗಿಡಗಳನ್ನು ಕಿತ್ತು ಹಾಕಿದರು. ತ್ಯಾಜ್ಯ ವಿಲೇವಾರಿ ಮಾಡಿದರು.

    ಟ್ವಿಟರ್‌ನಲ್ಲಿ ಸಚಿವರ ಮೆಚ್ಚುಗೆ : ಸ್ವತಃ ವೈದ್ಯಕೀಯ ಶಿಕ್ಷಣ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಾ ಕೆ.ಸುಧಾಕರ್ ಈ ಸ್ವಚ್ಛತಾ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕಲ್ಯಾಣಿಗಳು ನಮ್ಮ ಪ್ರಾರಂಪರಿಕ ಜಲಮೂಲಗಳಲ್ಲೊಂದಾಗಿವೆ. ಆರ್‌ಎಸ್‌ಎಸ್, ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಸೇರಿ ಸ್ವಯಂಸೇವಕರ ಪರಿಶ್ರಮದಿಂದ ರಂಗನಾಥ ಸ್ವಾಮಿ ಆಲಯದ ಕಲ್ಯಾಣಿ ಪುನಶ್ಚೇತನಗೊಂಡಿದೆ. ಈ ಸತ್ಕಾರ್ಯಕ್ಕೆ ಕೈ ಜೋಡಿಸಿದ ಎಲ್ಲರಿಗೂ ಟ್ವಿಟರ್‌ನಲ್ಲಿ ಅಭಿನಂದನೆ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts