More

    ಆರ್​ಪಿಎಫ್​ನಿಂದ ನಿತ್ಯ ಆಹಾರ ಸಾಮಗ್ರಿ ಪೂರೈಕೆ

    ಹುಬ್ಬಳ್ಳಿ: ಲಾಕ್ ಡೌನ್​ನಿಂದಾಗಿ ತೊಂದರೆಗೀಡಾದ ಜನರಿಗೆ ಹುಬ್ಬಳ್ಳಿ ವಿಭಾಗೀಯ ರೈಲ್ವೆ ಭದ್ರತಾ ದಳದಿಂದ ವಿವಿಧೆಡೆ ನಿತ್ಯ ಆಹಾರ ಸಾಮಗ್ರಿ, ಊಟ, ಉಪಹಾರ ವಿತರಿಸಲಾಗುತ್ತಿದೆ.

    ಶನಿವಾರದವರೆಗೆ 23,931 ಆಹಾರದ ಪೊಟ್ಟಣಗಳನ್ನು ನಿರ್ಗತಿಕರು, ದಿನಗೂಲಿ ಕಾರ್ವಿುಕರು, ಕೊಳಚೆ ಪ್ರದೇಶದ ನಿವಾಸಿಗಳಿಗೆ ವಿತರಿಸಲಾಗಿದೆ.

    ನಿತ್ಯ ಸುಮಾರು 1 ಸಾವಿರ ಆಹಾರದ ಪೊಟ್ಟಣಗಳನ್ನು ವಿವಿಧ ಎನ್​ಜಿಒಗಳ ಸಹಾಯದೊಂದಿಗೆ ವಿತರಿಸಲಾಗುತ್ತಿದೆ.

    ವಾಸ್ಕೊ ಡ ಗಾಮಾದಲ್ಲಿಯೂ ನಿತ್ಯ ಉಪಹಾರ ಮತ್ತು ಊಟ ವಿತರಿಸಲಾಗುತ್ತಿದೆ. ಶನಿವಾರ ಎನ್​ಜಿಒ ಹಾಗೂ ನೌಕಾಪಡೆ ಸಹಯೋಗದೊಂದಿಗೆ 190 ಉಪಾಹಾರದ ಪೊಟ್ಟಣ ಹಾಗೂ 655 ಊಟದ ಪೊಟ್ಟಣ ವಿತರಿಸಲಾಯಿತು.

    ಹೊಸಪೇಟೆಯಲ್ಲಿ 150, ಬೆಳಗಾವಿಯಲ್ಲಿ 65, ವಿಜಯಪುರದಲ್ಲಿ 125, ಬಳ್ಳಾರಿಯಲ್ಲಿ 180 ಊಟದ ಪೊಟ್ಟಣಗಳನ್ನು ಆರ್​ಪಿಎಫ್ ನಿತ್ಯ ಹಂಚುತ್ತಿದೆ.

    ಧಾರವಾಡ ಹಾಗೂ ಗದಗನಲ್ಲಿಯೂ ಆಹಾರ ವಿತರಿಸಲಾಗುತ್ತಿದೆ. ತೊಂದರೆಗೀಡಾದವರಿಗೆ ಊಟ, ಉಪಾಹಾರ ಒದಗಿಸಲು

    ನೈಋತ್ಯ ರೈಲ್ವೆ ವಲಯದ ಅಧಿಕಾರಿಗಳು, ಸಿಬ್ಬಂದಿ ಹಾಗೂ ವಲಯದ ಮಹಿಳಾ ಕಲ್ಯಾಣ ಸಂಘ ಆರ್ಥಿಕ ನೆರವು ಒದಗಿಸುವ ಜೊತೆಗೆ ಸ್ವಯಂ ಸೇವಕರಾಗಿ ಆಹಾರ ವಿತರಣೆ ಕಾರ್ಯ ಸಹ ಮಾಡುತ್ತಿದ್ದಾರೆ.

    ಶುಕ್ರವಾರದಂದು ಹುಬ್ಬಳ್ಳಿಯ ರೈಲ್ವೆ ವರ್ಕ್​ಶಾಪ್​ಗೆ ಭೇಟಿ ನೀಡಿದ್ದ ರೈಲ್ವೆ ರಾಜ್ಯ ಸಚಿವ ಸುರೇಶ ಅಂಗಡಿ, ಆರ್​ಪಿಎಫ್​ನ ಮಾನವೀಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

    ಆರ್​ಪಿಎಫ್ ಅತ್ಯಂತ ಕಾಳಜಿಯಿಂದ ಶಿಸ್ತುಬದ್ಧವಾಗಿ ಆಹಾರ ಪೂರೈಕೆಯನ್ನು ನಿರ್ವಹಿಸುತ್ತಿದೆ ಎಂದು ನೈಋತ್ಯ ರೈಲ್ವೆ ವಲಯದ ಮಹಾಪ್ರಬಂಧಕ ಅಜಯಕುಮಾರ ಸಿಂಗ್ ಶ್ಲಾಘಿಸಿದ್ದಾರೆ.



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts