More

    ಆರ್ಯವೈಶ್ಯ ನಿಗಮಕ್ಕೆ 15 ಕೋಟಿ ಅನುದಾನ ಬೇಡಿಕೆ

    ಶಿವಮೊಗ್ಗ: ಆರ್ಯವೈಶ್ಯ ನಿಗಮಕ್ಕೆ ಬರಲಿರುವ ಬಜೆಟ್​ನಲ್ಲಿ 15 ಕೋಟಿ ರೂ. ಅನುದಾನ ಒದಗಿಸಬೇಕು ಎಂದು ಸಿಎಂ ಬಿ.ಎಸ್. ಯಡಿಯೂರಪ್ಪ ಅವರಿಗೆ ನಿಗಮದ ಅಧ್ಯಕ್ಷ ಡಿ.ಎಸ್. ಅರುಣ್ ಮನವಿ ಮಾಡಿದ್ದಾರೆ.

    ಸಾಲ ನಿರೀಕ್ಷೆ ಮಾಡಿ ಅರ್ಜಿ ಸಲ್ಲಿಸುವವರ ಸಂಖ್ಯೆ ಅಧಿಕವಾಗಿದೆ. ಉತ್ತರ ಕರ್ನಾಟಕ ಭಾಗದ ಆರ್ಯ ವೈಶ್ಯ ಸಮುದಾಯದ ಕೃಷಿಕರಿಗೆ ಗಂಗಾಕಲ್ಯಾಣ ಯೋಜನೆಯಡಿ ಅನುದಾನ ನೀಡುವ ಉದ್ದೇಶವಿದೆ. ಈ ಕಾರಣಕ್ಕಾಗಿ ಹೆಚ್ಚಿನ ಅನುದಾನ ಕೋರಲಾಗಿದೆ ಎಂದು ಡಿ.ಎಸ್.ಅರುಣ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡು ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಸಾಧನೆಯ ಮಾಹಿತಿ ಹಂಚಿಕೊಂಡ ಅವರು, ನಿಗಮದ ಆಡಳಿತ ವ್ಯವಸ್ಥೆಯನ್ನು ಡಿಜಿಟಲೀಕರಣ ಮಾಡಲಾಗುತ್ತಿದೆ. ಕಳೆದ ಆರ್ಥಿಕ ಸಾಲಿನಲ್ಲಿ ಎರಡು ಯೋಜನೆಗಳಿಗೆ 2,298 ಅರ್ಜಿಗಳು ಸಲ್ಲಿಕೆಯಾಗಿದ್ದು, ಸಾವಿರಕ್ಕೂ ಹೆಚ್ಚು ಫಲಾನುಭವಿಗಳಿಗೆ 10.50 ಕೋಟಿ ರೂ. ಸಾಲ ನೀಡಲಾಗಿದೆ ಎಂದು ತಿಳಿಸಿದರು.

    ಸಾಲ ನೀಡಿಕೆಯಲ್ಲಿ ಶೇ.95 ಪ್ರಗತಿಯಾಗಿದೆ. ಈಗಾಗಲೇ ಸುಮಾರು 25 ಲಕ್ಷ ರೂ. ಸಾಲ ಮರುಪಾವತಿಯಾಗಿದೆ. ಹಲವು ಯೋಜನೆಗಳನ್ನು ಸಮುದಾಯಕ್ಕೆ ತಲುಪಿಸಿದ ತೃಪ್ತಿ ಇದೆ. ಆರ್ಯವೈಶ್ಯ ಜಾತಿ ಮತ್ತು ಆದಾಯ ಪ್ರಮಾಣ ಪತ್ರದ ಗೊಂದಲ ಬಗೆಹರಿದಿದೆ. ಮರುಬಳಕೆಯಾದ ಕಾಗದದಿಂದ ಕೈಪಿಡಿ, ಪ್ರಚಾರ ಪತ್ರ ಸಿದ್ಧಪಡಿಸಲಾಗುತ್ತಿದೆ. ಡಿಜಿಟಲೀಕರಣದ ಮೂಲಕ ಪಾರದರ್ಶಕತೆ ತರಲಾಗುತ್ತಿದೆ ಎಂದು ಹೇಳಿದರು.

    ಕಡುಬಡವರಿಗೆ ಯೋಜನೆ ರೂಪಿಸಲಾಗಿದ್ದು, ಆನ್​ಲೈನ್​ನಲ್ಲೇ ಅರ್ಜಿ ಸಲ್ಲಿಕೆ ಮತ್ತು ಅರ್ಜಿ ಪರಿಶೀಲಿಸುವ ವ್ಯವಸ್ಥೆ ಮಾಡಿದ ಮೊದಲ ನಿಗಮ ಎಂಬ ಹೆಗ್ಗಳಿಕೆ ನಮ್ಮದು ಎಂದು ತಿಳಿಸಿದರು.

    ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಭದ್ರಾ ಕಾಡಾ ಅಧ್ಯಕ್ಷೆ ಕೆ.ಬಿ.ಪವಿತ್ರಾ ರಾಮಯ್ಯ, ಬಿಜೆಪಿ ರಾಜ್ಯ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಎಸ್.ದತ್ತಾತ್ರಿ, ಪ್ರಮುಖರಾದ ಶಿವರಾಜ್, ಎನ್.ಜಿ.ನಾಗರಾಜ್, ಬಿ.ಆರ್.ಮಧುಸೂದನ್, ಕೆ.ವಿ.ಅಣ್ಣಪ್ಪ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts