More

    ಆರ್ಥಿಕ ಸಂಕಷ್ಟ: ಎಲೆಚುಕ್ಕೆ ರೋಗಕ್ಕೆ ಮೊದಲ ಬಲಿ; ಕಿಳಂದೂರು ಗ್ರಾಮದ ರೈತ ಕೃಷ್ಣಪ್ಪಗೌಡ ಆತ್ಮಹತ್ಯೆ

    ಹೊಸನಗರ: ಮಲೆನಾಡಿನಲ್ಲಿ ಎಲೆ ಚುಕ್ಕೆ ರೋಗದ ತೀವ್ರತೆ ಹೆಚ್ಚಾಗಿದ್ದು, ಬೆಳೆಗಾರರು ಸಂಕಷ್ಟಕ್ಕೀಡಾಗಿದ್ದು, ಇದೇ ಚಿಂತೆಯಲ್ಲಿ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಹೊಸನಗರ ತಾಲೂಕು ಕರಿಮನೆ ಗ್ರಾಪಂ ವ್ಯಾಪ್ತಿಯ ಕಿಳಮದೂರು ಗ್ರಾಮದ ರೈತ ಕೃಷ್ಣಪ್ಪ ಗೌಡ (60) ಶುಕ್ರವಾರ ಸಂಜೆ ಮನೆ ಸಮೀಪದ ಮಾವಿನಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
    ಅಡಕೆ ತೋಟ ಎಲೆಚುಕ್ಕೆ ರೋಗಕ್ಕೆ ಬಲಿಯಾಗಿದ್ದು, ಬ್ಯಾಂಕ್ ಮತ್ತು ಸಹಕಾರ ಸಂಘದಲ್ಲಿ ಪಡೆದಿದ್ದ ಸಾಲ ಮರುಪಾವತಿ ಹೇಗೆ ಎಂಬ ಚಿಂತೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
    ಕೃಷ್ಣಪ್ಪಗೌಡ ಅವರು ಸಹೋದರ ಯೋಗೇಂದ್ರ ಗೌಡ ಜಂಟಿ ಹೆಸರಿನಲ್ಲಿ 4 ಎಕರೆ 11 ಗುಂಟೆ ಹಾಗೂ ಅವರ ಹೆಸರಿನಲ್ಲಿ 2 ಎಕರೆ 20 ಗುಂಟೆ ಜಮೀನು ಹೊಂದಿದ್ದರು. ಜಮೀನಿನಲ್ಲಿ ಅಡಕೆ ತೋಟ ಮತ್ತು ಭತ್ತದ ಕೃಷಿ ಮಾಡಿಕೊಂಡಿದ್ದರು. ಎಲೆಚುಕ್ಕೆ ರೋಗದಿಂದ ಅಡಕೆ ತೋಟ ಸಂಪೂರ್ಣ ಹಾಳಾಗಿದ್ದು, ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು.
    ಕೃಷಿ ಅಭಿವೃದ್ಧಿಗಾಗಿ ಕೆನರಾ ಬ್ಯಾಂಕಿನಲ್ಲಿ 3 ಲಕ್ಷ ರೂ., ನಗರ ನೀಲಕಂಠೇಶ್ವರ ಪತ್ತಿನ ಸಹಕಾರ ಸಂಘದಲ್ಲಿ 1.5 ಲಕ್ಷ ರೂ. ಸಾಲ ಮಾಡಿದ್ದರು. ಅಲ್ಲದೇ ಕೃಷಿ ಕೆಲಸಕ್ಕಾಗಿ ಊರಿನಲ್ಲಿ ಹಲವರ ಬಳಿ ಕೈಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ. ಅಡಕೆ ತೋಟ ಎಲೆಚುಕ್ಕೆ ರೋಗಕ್ಕೆ ತುತ್ತಾದ ಹಿನ್ನೆಲೆಯಲ್ಲಿ ಸಾಲ ಹೇಗೆ ತೀರಿಸೋದು ಎಂದು ಕುಟುಂಬದ ಸದಸ್ಯರ ಬಳಿ ನೋವು ಹೇಳಿಕೊಂಡಿದ್ದರು. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts