More

    ಆರ್ಥಿಕ ನೀತಿಗಳಿಗೆ ಸಂವಿಧಾನ ಅಡಿಪಾಯ

    ಬೆಳಗಾವಿ: ಆರ್ಥಿಕ ನೀತಿಗಳನ್ನು ರೂಪಿಸಲು ಸಂವಿಧಾನವು ಅಡಿಪಾಯ ಒದಗಿಸುತ್ತದೆ ಎಂದು ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಕುಲಪತಿ ಪ್ರೊ.ಬಿ.ಕೆ.ತುಳಸಿಮಾಲಾ ಅಭಿಪ್ರಾಯಪಟ್ಟರು.

    ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಕುವೆಂಪು ಸಭಾಂಗಣದಲ್ಲಿ ಅರ್ಥಶಾಸ್ತ್ರ ವಿಭಾಗದಿಂದ ಬುಧವಾರ ಆಯೋಜಿಸಿದ್ದ ‘ಸ್ವಾತಂತ್ರೊೃೀತ್ತರ ಅವಧಿಯಲ್ಲಿ ಭಾರತೀಯ ಆರ್ಥಿಕತೆ: ಕಾರ್ಯಕ್ಷಮತೆ, ನೀತಿಗಳು ಮತ್ತು ಸಾಧ್ಯತೆಗಳು’ ವಿಷಯದ 2 ದಿನಗಳ ರಾಷ್ಟ್ರೀಯ ಮಟ್ಟದ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

    ಕೊಲ್ಲಾಪುರ ಶಿವಾಜಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪ್ರೊ. ಪಿ.ಎಸ್. ಕಾಂಬಳೆ ಮಾತನಾಡಿ, ಆರ್ಥಿಕ ನೀತಿಗಳು ಸಮಾಜವಾದ ಮತ್ತು ಸಮಾನತೆಯ ಸಂವಿಧಾನದ ಮೂಲ ತತ್ತ್ವಗಳಿಂದ ಹೆಚ್ಚು ವಿಚಲಿತಗೊಳ್ಳಬಾರದು. ಎಲ್ಲರನ್ನೊಳಗೊಳ್ಳುವ ಬೆಳವಣಿಗೆ, ಪ್ರಾದೇಶಿಕ ಸಮತೋಲನ, ಬಡತನ ನಿರ್ಮೂಲನೆ, ಆರೋಗ್ಯ ಮತ್ತು ಶಿಕ್ಷಣ ನೀತಿಗಳು ಆದ್ಯತೆಗಳಾಗಿರಬೇಕು ಎಂದರು

    ರಾಣಿ ಚನ್ನಮ್ಮ ವಿವಿ ಕುಲಸಚಿವ ಪ್ರೊ. ಬಸವರಾಜ ಪದ್ಮಶಾಲಿ, ಮೌಲ್ಯಮಾಪನ ಕುಲಸಚಿವ ಪ್ರೊ. ಶಿವಾನಂದ ಗೋರನಾಳೆ, ಹಣಕಾಸು ಅಧಿಕಾರಿ ಪ್ರೊ. ಡಿ.ಎನ್. ಪಾಟೀಲ, ಸಂಘಟನಾ ಕಾರ್ಯದರ್ಶಿ ಡಾ. ಕಿರಣ ಕುಮಾರ ಪಿ., ಡಾ ಸಚೀಂದ್ರ ಜಿ.ಆರ್., ಜಂಟಿ ಸಂಘಟನಾ ಕಾರ್ಯದರ್ಶಿ, ಪ್ರೊ. ಎಚ್.ವೈ. ಕಾಂಬಳೆ, ಪ್ರೊ. ಚಂದ್ರಿಕಾ ಕೆ.ಬಿ., ಪ್ರೊ. ಬಿ.ಎಸ್. ನಾವಿ ಹಾಗೂ ಬೋಧಕ/ಬೋಧಕೇತರ ಸಿಬ್ಬಂದಿ ಇದ್ದರು.

    ಡಾ. ಕಿರಣ್ ಕುಮಾರ ಪಿ. ಸ್ವಾಗತಿಸಿದರು. ಪ್ರೊ. ಡಿ.ಎನ್. ಪಾಟೀಲ ಸಮ್ಮೇಳನದ ಕುರಿತು ಮಾಹಿತಿ ನೀಡಿದರು. ಶಿಕ್ಷಕ ಪ್ರತಿನಿಧಿಗಳು, ಸಂಶೋಧನಾ ವಿದ್ಯಾರ್ಥಿಗಳು, ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಈ ಸಮ್ಮೇಳನದಲ್ಲಿ 150ಕ್ಕೂ ಹೆಚ್ಚಿನ ಸಂಶೋಧನಾ ಲೇಖನಗಳನ್ನು ಮಂಡಿಸಲಾಗುತ್ತಿದೆ. ಡಾ.ಪ್ರಸನ್ನ ಜೋಶಿ ನಿರೂಪಿಸಿದರು ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts