More

    ಆರೋಗ್ಯ, ಕಣ್ಣಿನ ಉಚಿತ ತಪಾಸಣೆ ಶಿಬಿರ

    ಯಳಂದೂರು: ಮೈಸೂರಿನ ಮಾ ಫೌಂಡೇಷನ್, ರಕ್ಷಾ ಆಸ್ಪತ್ರೆ ಹಾಗೂ ಅನ್ನಪೂರ್ಣ ಕಣ್ಣಿನ ಆಸ್ಪತ್ರೆ ಸಹಯೋಗದಲ್ಲಿ ಮಾಜಿ ಶಾಸಕ ದಿ.ಕೆ.ಪಿ. ಶಾಂತಮೂರ್ತಿ ಅವರ 19 ನೇ ವರ್ಷದ ಪುಣ್ಯ ಸ್ಮರಣೆಯ ನಿಮಿತ್ತ ತಾಲೂಕಿನ ಅಗರ ಗ್ರಾಮದ ನಾಯಕ ವಾಲ್ಮೀಕಿ ಸಮುದಾಯ ಭವನದಲ್ಲಿ ಆರೋಗ್ಯ ಹಾಗೂ ಕಣ್ಣಿನ ಉಚಿತ ತಪಾಸಣಾ ಶಿಬಿರ ಯಶಸ್ವಿಯಾಗಿ ನಡೆಯಿತು.


    ನ.2 ರಿಂದ ಆರಂಭಗೊಂಡ ಈ ಶಿಬಿರವು ಮೂರು ದಿನಗಳ ಕಾಲ ನಡೆಯಿತು. 400 ಕ್ಕೂ ಹೆಚ್ಚಿನ ರೋಗಿಗಳು ಇದರ ಉಪಯೋಗವನ್ನು ಪಡೆದುಕೊಂಡರು. ಇದರಲ್ಲಿ ಮೈಸೂರಿನ ರಕ್ಷಾ ಆಸ್ಪತ್ರೆಯ ಸಹಯೋಗದಲ್ಲಿ ನಡೆದ ಆರೋಗ್ಯ ತಪಾಸಣಾ ಶಿಬಿರದಲ್ಲಿ ಪ್ರಸೂತಿ ಹಾಗೂ ಸ್ತ್ರೀ ರೋಗ ತಜ್ಞರಾದ ಡಾ. ರಕ್ಷಾ ಮಂಜುನಾಥ್, ಡಾ. ಎಂ.ಎಸ್. ದೀಪಕ್, ನರಶಾಸ್ತ್ರಜ್ಞ ಡಾ. ಎಂ.ಎಸ್. ಶಶಾಂಕ್ ರೋಗಿಗಳನ್ನು ಪರೀಕ್ಷಿಸಿ ಸ್ಥಳದಲ್ಲೇ ಉಚಿತವಾಗಿ ಔಷಧ ನೀಡಿದರು. ಅನ್ನಪೂರ್ಣ ಕಣ್ಣಿನ ಆಸ್ಪತ್ರೆಯ ನೇತ್ರ ತಜ್ಞೆ ಡಾ. ಸಹನಶ್ರೀ ಹಾಗೂ ಇವರ ತಂಡದ ಸದಸ್ಯರು ನೂರಾರು ರೋಗಿಗಳ ಕಣ್ಣನ್ನು ಪರೀಕ್ಷಿಸಿ ಅವರಿಗೆ ಔಷಧಗಳನ್ನು ವಿತರಿಸಿ ಹೆಚ್ಚಿನ ಚಿಕಿತ್ಸೆ ಪಡೆಯಲು ಸಲಹೆ ಸೂಚನೆಗಳನ್ನು ನೀಡಿದರು.


    ಮಾ ಫೌಂಡೇಷನ್‌ನ ಉಪಾಧ್ಯಕ್ಷ ಪಿ. ಅಭಿಷೇಕ್ ಮಾತನಾಡಿ, ನಮ್ಮ ಫೌಂಡೇಷನ್ ವತಿಯಿಂದ ಹಲವು ಸಾಮಾಜಿಕ ಸೇವಾ ಕಾರ್ಯಕ್ರಮಗಳ ಆಯೋಜನೆ ಮಾಡಲಾಗುತ್ತಿದೆ. ಅಗರ ಹೋಬಳಿ ವ್ಯಾಪ್ತಿಯಲ್ಲಿ ನಡೆಸಲಾದ ಆರೋಗ್ಯ ಹಾಗೂ ಕಣ್ಣಿನ ಉಚಿತ ತಪಾಸಣಾ ಶಿಬಿರಗಳು ಯಶಸ್ವಿಯಾಗಿ ನೆರವೇರಿದೆ. ನೂರಾರು ರೋಗಿಗಳು ಇದರ ಲಾಭವನ್ನು ಪಡೆದುಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಅತೀ ಬಡವರಿರುವ, ಆದಿವಾಸಿಗಳು ವಾಸಿಸುವ ಹಾಡಿಗಳು, ಗ್ರಾಮಗಳಲ್ಲಿ ಆರೋಗ್ಯ ಶಿಬಿರಗಳನ್ನು ಹಮ್ಮಿಕೊಳ್ಳಲಾಗುವುದು. ಶಿಬಿರಗಳಲ್ಲಿ ಆರೋಗ್ಯ ತಪಾಸಣೆ ನಡೆಸಿದಾಗ ಅನೇಕರಿಗೆ ರೋಗಗಳು ಪತ್ತೆಯಾಗಿದ್ದು, ಇವರಿಗೆ ಉಚಿತವಾಗಿ ಚಿಕಿತ್ಸೆ ನೀಡಲು ಫೌಂಡೇಷನ್ ನೆರವಾಗಲಿದೆ ಎಂದು ಮಾಹಿತಿ ನೀಡಿದರು.


    ಫೌಂಡೇಷನ್ ಅಧ್ಯಕ್ಷೆ ಡಿ. ಅನಿತಾ, ಕಾರ್ಯದರ್ಶಿ ಎಸ್. ರೂಪಾ, ಆರ್. ಚಂದ್ರಕಾಂತ್, ಎಸ್.ವಿ. ರವಿಕುಮಾರ್, ಕಾವ್ಯ ಅರುಣ್, ಮುಖಂಡರಾದ ಕಿನಕಹಳ್ಳಿ ಪ್ರಭುಪ್ರಸಾದ್, ರಾಜಮ್ಮ, ಎಚ್. ಕುಮಾರ್, ಮಹದೇವಸ್ವಾಮಿ, ಎಂ. ಸಿದ್ದರಾಜು, ವೆಂಕಟೇಶ್, ನಾಗರಾಜು, ಸೋಮಣ್ಣ, ಲಿಂಗರಾಜು, ಕೆ.ಬಿ. ಬಸವಣ್ಣ ಸೇರಿದಂತೆ ಹಲವರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts