More

    ಆರೋಗ್ಯದ ಬಗ್ಗೆ ನಿಷ್ಕಾಳಜಿ ಬೇಡ

    ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ

    ಆರೋಗ್ಯದ ಮಹತ್ವ ಏನೆಂಬುದು ಅನಾರೋಗ್ಯಕ್ಕೀಡಾದಾಗಲೇ ಗೊತ್ತಾಗುತ್ತದೆ. ಪ್ರತಿಯೊಬ್ಬರೂ ಕಾಲಕಾಲಕ್ಕೆ ತಪಾಸಣೆ ಮಾಡಿಕೊಂಡು ಆರೋಗ್ಯದತ್ತ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಬಿಜೆಪಿ ಮಹಾನಗರ ಜಿಲ್ಲಾಧ್ಯಕ್ಷ ಸಂಜಯ ಕಪಟಕರ ತಿಳಿಸಿದರು.

    ಭಾರತೀಯ ಜನತಾ ಪಾರ್ಟಿ ಹು-ಧಾ ಪೂರ್ವ ವಿಧಾನಸಭಾ ಕ್ಷೇತ್ರ, ಭಾವಸಾರ ಕ್ಷತ್ರಿಯ ಸಮಾಜ ಹುಬ್ಬಳ್ಳಿ ಹಾಗೂ ಶ್ರೀ ಬಾಲಾಜಿ ನರರೋಗ ಆಸ್ಪತ್ರೆ ಮತ್ತು ತುರ್ತು ಚಿಕಿತ್ಸಾ ಕೇಂದ್ರದ ಸಹಯೋಗದಲ್ಲಿ ಬುಧವಾರ ಇಲ್ಲಿನ ವಾರ್ಡ್ ನಂ.61ರ ಗಣೇಶಪೇಟೆ ಕುಂಬಾರ ಓಣಿಯ ಶ್ರೀ ವಿಠ್ಠಲ ಹರಿ ಮಂದಿರದಲ್ಲಿ ಏರ್ಪಡಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

    ಶ್ರೀ ಬಾಲಾಜಿ ಆಸ್ಪತ್ರೆ ಚೇರ್ಮನ್ ಡಾ. ಕ್ರಾಂತಿಕಿರಣ, ಹು-ಧಾ ಪೂರ್ವ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಪ್ರಭು ನವಲಗುಂದಮಠ ಮಾತನಾಡಿದರು.

    ಭಾವಸಾರ ಕ್ಷತ್ರಿಯ ಸಮಾಜದ ಅಧ್ಯಕ್ಷ ಸಾಯಿನಾಥ ಅಂಬೇಕರ, ಮಾರುತಿರಾವ್ ರಾಶಿನಕರ, ಸತೀಶ ವೈಕುಂಠ, ಕುಶಾಲರಾವ್ ಬೇದರೆ, ಪ್ರಮುಖರಾದ ಮಲ್ಲಪ್ಪ ಶಿರಕೋಳ, ರಂಗಸ್ವಾಮಿ ಬಳ್ಳಾರಿ, ಬಸವರಾಜ ಶೆಟ್ಟರ್, ಗೋವಿಂದ ಬೇದರೆ, ವಿಠ್ಠಲ ಬೆಳಮಕರ, ಗಂಗಾಧರ ಟಿಕಾರೆ, ಅಮೃತ ದಾಮೋದರ, ಶ್ರೀನಿವಾಸ ತಾತುಸ್ಕರ, ರಮಾಕಾಂತ ಗುಜ್ಜರ, ರಾಕೇಶ ಚುಟ್ಕೆ, ಮಹಾದೇವ ಸುಲಾಕೆ, ಹರಿ ಶಂಕರ, ವಿವೇಕ ಚುಟಕೆ, ಗಣೇಶ ತೇಲ್ಕರ್, ವಿಲಾಸ ಕುಂಠೆ, ಮುಖಂಡರಾದ ರಂಗಾ ಬದ್ದಿ, ಡಾ. ರವೀಂದ್ರ ಎಲಿಕಾನ ಇತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts