More

    ಆರು ಜನರಿಗೆ ಕರೊನಾ ದೃಢ

    ಹಾವೇರಿ: ಜಿಲ್ಲೆಯಲ್ಲಿ ಕೋವಿಡ್ ಕಾಟ ಹೆಚ್ಚಾಗುತ್ತಿದ್ದು, ಮಂಗಳವಾರ 6 ಜನರಲ್ಲಿ ಸೋಂಕು ದೃಢಪಟ್ಟಿದೆ. ಇಬ್ಬರು ಗುಣವಾಗಿದ್ದಾರೆ. ಇದರೊಂದಿಗೆ ಸೋಂಕಿತರ ಸಂಖ್ಯೆ 181ಕ್ಕೆ ಏರಿಕೆಯಾಗಿದ್ದು, 121ಸಕ್ರಿಯ ಪ್ರಕರಣಗಳಿವೆ ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೈ ತಿಳಿಸಿದ್ದಾರೆ.

    ಮಂಗಳವಾರ ಹಾವೇರಿ ತಾಲೂಕಿನಲ್ಲಿ 4, ಸವಣೂರ ತಾಲೂಕಿನಲ್ಲಿ 1, ಹಾನಗಲ್ಲ ತಾಲೂಕಿನಲ್ಲಿ ಒಬ್ಬರಿಗೆ ಸೋಂಕು ದೃಢಪಟ್ಟಿದ್ದು, ಹಾವೇರಿ ಶಿವಾಜಿನಗರದ 32ವರ್ಷದ ಮಹಿಳೆ, ಇವರ 2 ವರ್ಷದ ಹೆಣ್ಣು ಮಗು, ಅಶ್ವಿನಿನಗರ 1ನೇ ಕ್ರಾಸ್​ನ 32ವರ್ಷದ ಪುರುಷ, ಖಾಸಗಿ ಆಸ್ಪತ್ರೆಯ ಲ್ಯಾಬ್ ಟೆಕ್ನಿಷಿಯನ್ 23ವರ್ಷದ ಮಹಿಳೆಗೆ ಸೋಂಕು ತಗುಲಿದೆ.

    ಸವಣೂರ ತಾಲೂಕು ಕುಣಿಮೆಳ್ಳಿಹಳ್ಳಿ ನಿವಾಸಿ, ಹಾವೇರಿ ಶಹರ ಪೊಲೀಸ್ ಠಾಣೆಯ 38ವರ್ಷದ ಪೇದೆ, ಹಾನಗಲ್ಲ ಪಟ್ಟಣದ ಮಟನ್​ವಾರ್ಕೆಟ್​ನ 30ವರ್ಷದ ಬಾಣಂತಿಗೆ ಸೋಂಕು ದೃಢಪಟ್ಟಿದೆ.

    ಟ್ರಾವೆಲ್ ಹಿಸ್ಟರಿ: ಶಿವಾಜಿನಗರದ 32ವರ್ಷದ ಮಹಿಳೆ ತನ್ನ ಎರಡು ವರ್ಷದ ಮಗಳೊಂದಿಗೆ ಜೂ. 28ರಂದು ಬಳ್ಳಾರಿ ಜಿಲ್ಲೆ ಹೊಸಪೇಟೆಯಿಂದ ಹಾವೇರಿಗೆ ವಾಪಸಾಗಿದ್ದರು. ಜೂ. 30ರಂದು ಹೊಸಪೇಟೆಯಲ್ಲಿನ ತಂದೆಗೆ ಕೋವಿಡ್ ಪಾಸಿಟಿವ್ ವರದಿ ಬಂದ ಕಾರಣ ಜು. 3ರಂದು ಹಾವೇರಿಯಲ್ಲಿ ಮಗಳೊಂದಿಗೆ ಸ್ವ್ಯಾಬ್ ಟೆಸ್ಟ್ ಮಾಡಿಸಿದ್ದರು. ಜು. 6ರಂದು ತಾಯಿ ಮತ್ತು ಮಗಳಿಗೆ ಪಾಸಿಟಿವ್ ವರದಿ ಬಂದಿದೆ. ಇವರನ್ನು ಸವಣೂರ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಾಥಮಿಕ ಸಂಪರ್ಕದ ಇಬ್ಬರು, ದ್ವಿತೀಯ ಸಂಪರ್ಕದ ಮೂವರನ್ನು ಗುರುತಿಸಿ ಹೋಂ ಕ್ವಾರಂಟೈನ್​ನಲ್ಲಿ ಇರಿಸಲಾಗಿದೆ.

    ಹಾವೇರಿ ಅಶ್ವಿನಿ ನಗರದ 1ನೇ ಕ್ರಾಸ್​ನ 32ವರ್ಷದ ವ್ಯಕ್ತಿಗೆ ಐಎಲ್​ಐ ಲಕ್ಷಣಗಳ ಕಾರಣ ಸ್ವ್ಯಾಬ್ ಟೆಸ್ಟ್ ಮಾಡಿ ಜು. 4ರಂದು ಲ್ಯಾಬ್​ಗೆ ವರದಿ ಕಳುಹಿಸಲಾಗಿತ್ತು. ಈತನ ಪ್ರಾಥಮಿಕ ಸಂಪರ್ಕದಲ್ಲಿ ನಾಲ್ವರನ್ನು, ದ್ವಿತೀಯ ಸಂರ್ಪತ ಆರು ಜನರನ್ನು ಗುರುತಿಸಿ ಹೋಂ ಕ್ವಾರಂಟೈನ್ ಮಾಡಲಾಗಿದೆ.

    ಕರೊನಾ ಸೋಂಕಿತ ಪೇದೆಯ ಸಹೋದ್ಯೋಗಿ, ಹಾವೇರಿ ಶಹರ ಪೊಲೀಸ್ ಠಾಣೆಯ 38ವರ್ಷದ ಕಾನ್​ಸ್ಟೇಬಲ್​ಗೆ ವೈರಸ್ ದೃಢಪಟ್ಟಿದೆ. ಜು. 4ರಂದು ಸ್ವ್ಯಾಬ್ ಪರೀಕ್ಷೆ ನಡೆಸಲಾಗಿತ್ತು. ಇವರನ್ನು ಸವಣೂರ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸೋಂಕಿತರ ಪ್ರಾಥಮಿಕ ಸಂಪರ್ಕದ 17 ಹಾಗೂ ದ್ವಿತೀಯ ಸಂಪರ್ಕದ 51ಜನರನ್ನು ಹೋಂ ಕ್ವಾರಂಟೈನ್ ಮಾಡಲಾಗಿದೆ.

    ಹಾವೇರಿ ಅಶ್ವಿನಿ ನಗರದ 1ನೇ ಕ್ರಾಸ್​ನಲ್ಲಿ ಗಂಡನೊಂದಿಗೆ ವಾಸವಿದ್ದ 23ವರ್ಷದ ಮಹಿಳೆ, ಅಶ್ವಿನಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಲ್ಯಾಬ್ ಟೆಕ್ನಿಷಿಯನ್ ಕಾರ್ಯನಿರ್ವಹಿಸುತ್ತಿದ್ದಾರೆ. ಐಎಲ್​ಐ ಲಕ್ಷಣಗಳ ಕಾರಣ ಜು. 4ರಂದು ಸ್ವಯಂ ಸ್ವ್ಯಾಬ್ ಟೆಸ್ಟ್​ಗೆ ಒಳಗಾಗಿದ್ದರು. ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. 7 ಜನ ಪ್ರಾಥಮಿಕ ಹಾಗೂ 12 ಜನ ದ್ವಿತೀಯ ಸಂರ್ಪತರನ್ನು ಕ್ವಾರಂಟೈನ್ ಮಾಡಲಾಗಿದೆ.

    6 ಜನರ ಸೋಂಕಿತರ ನಿವಾಸದ 100ಮೀ. ಪ್ರದೇಶವನ್ನು ಕಂಟೇನ್ಮೆಂಟ್ ಜೋನ್ ಆಗಿ ಪರಿವರ್ತಿಸಲಾಗಿದೆ. ನಗರದ ಪ್ರದೇಶದಲ್ಲಿ ವಾಸಿಸುವ ಸೋಂಕಿತರ ನಿವಾಸದ 200ಮೀಟರ್ ಪ್ರದೇಶ ಹಾಗೂ ಗ್ರಾಮೀಣ ಪ್ರದೇಶವಾಗಿರುವ ಕುಣಿಮೆಳ್ಳಿಹಳ್ಳಿ ಗ್ರಾಮವನ್ನು ಸಂಪೂರ್ಣವಾಗಿ ಬಫರ್ ಜೋನ್ ಆಗಿ ಪರಿಗಣಿಸಲಾಗಿದೆ.

    ಇಬ್ಬರ ಸಾವು: ರಾಣೆಬೆನ್ನೂರ ಮಾರುತಿ ನಗರದ 55ವರ್ಷದ ಪುರುಷ ದಾವಣಗೆರೆಯ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿರುವುದಾಗಿ ವರದಿಯಾಗಿದೆ. ಮೃತ ವಾಸವಿದ್ದ ಮಾರುತಿ ನಗರದ ಮನೆಯ ಸುತ್ತಲಿನ 100ಮೀ. ಪ್ರದೇಶವನ್ನು ಕಂಟೇನ್ಮೆಂಟ್ ಜೋನ್ ಆಗಿ ಪರಿವರ್ತಿಸಲಾಗಿದೆ. ಸೋಂಕಿತನ ಪ್ರಾಥಮಿಕ ಸಂಪರ್ಕದಲ್ಲಿದ್ದ 8ಜನರನ್ನು ಹಾಗೂ ದ್ವಿತೀಯ ಸಂಪಕದಲ್ಲಿದ್ದ 40ಜನರನ್ನು ಕ್ವಾರಂಟೈನ್ ಮಾಡಲಾಗಿದೆ. ಹಾವೇರಿ ತಾಲೂಕು ಗುತ್ತಲದ 70 ವರ್ಷದ ವೃದ್ಧ ಕೋವಿಡ್ ಸೋಂಕಿನಿಂದ ಹುಬ್ಬಳ್ಳಿಯ ಕಿಮ್್ಸ ಆಸ್ಪತ್ರೆಯಲ್ಲಿ ಮೃತಪಟ್ಟಿರುವುದು ವರದಿಯಾಗಿದೆ. ಸೋಂಕಿತನ ಸಂಪರ್ಕದಲ್ಲಿ 14ಜನರನ್ನು ಪ್ರಾಥಮಿಕ ಹಾಗೂ 31ಜನರನ್ನು ದ್ವಿತೀಯ ಸಂರ್ಪತರೆಂದು ಕ್ವಾರಂಟೈನ್ ಮಾಡಲಾಗಿದೆ. ಗುತ್ತಲ ನಗರದ ವಾಸದ ಮನೆಯ ಸುತ್ತಲಿನ 100ಮೀ.ಪ್ರದೇಶವನ್ನು ಕಂಟೇನ್ಮೆಂಟ್ ಜೋನ್ ಆಗಿ ಪರಿವರ್ತಿಸಲಾಗಿದೆ.

    ಇಬ್ಬರ ಬಿಡುಗಡೆ: ಶಿಗ್ಗಾಂವಿ ದೇಸಾಯಿಗಲ್ಲಿ ನಿವಾಸಿ 44ವರ್ಷದ ಮಹಿಳೆ, ಸವಣೂರ ಲಕ್ಸರ್ ಬಜಾರ ನಿವಾಸಿ 16ವರ್ಷದ ಬಾಲಕ ಮಂಗಳವಾರ ಗುಣವಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

    ಇತ್ತ ಹೆರಿಗೆ, ಅತ್ತ ಪಾಸಿಟಿವ್ ವರದಿ

    ಹಾನಗಲ್ಲ ತಾಲೂಕಿನ ಜಾನಗುಂಡಿಕೊಪ್ಪದ ನಿವಾಸಿ, 30ವರ್ಷದ ಗರ್ಭಿಣಿ ಹೆರಿಗಾಗಿ ಕಳೆದ 15 ದಿನಗಳ ಹಿಂದೆ ಪಟ್ಟಣದ ಮಟನ್ ಮಾರ್ಕೆಟ್​ನಲ್ಲಿರುವ ತಾಯಿ ಮನೆಗೆ ಬಂದಿದ್ದಳು. ಜು. 3ರಂದು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಳು. ಜತೆಗೆ ಗಂಟಲ ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಜು. 6ರಂದು ಆಸ್ಪತ್ರೆಗೆ ದಾಖಲಾಗಿದ್ದು, ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಆ ದಿನವೇ ಕೋವಿಡ್ ವರದಿ ಪಾಸಿಟಿವ್ ಎಂದು ಬಂದಿದೆ. ಮುನ್ನೆಚ್ಚರಿಕೆ ಕ್ರಮಕೈಗೊಂಡು ಹೆರಿಗೆ ಮಾಡಿಸಿದ ಜಿಲ್ಲಾಸ್ಪತ್ರೆಯ ವೈದ್ಯರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ. ತಾಯಿ-ಮಗು ಆರೋಗ್ಯವಾಗಿದ್ದಾರೆ. ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. 8 ಜನರನ್ನು ಪ್ರಾಥಮಿಕ ಹಾಗೂ ಮೂವರನ್ನು ದ್ವಿತೀಯ ಸಂರ್ಪತರನ್ನು ಕ್ವಾರಂಟೈನ್ ಮಾಡಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts