More

    ಆಯೋಗದಿಂದ ಸ್ವಯಂ ಪ್ರೇರಿತ ಪ್ರಕರಣ ದಾಖಲು

    ಯಾದಗಿರಿ: ಶಹಾಪುರ ತಾಲ್ಲೂಕಿನ ಬೇವಿನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ (ಪರಿಶಿಷ್ಟ ಜಾತಿ) ಹತ್ತಾರು ಸಮಸ್ಯೆಗಳ ಕುರಿತಾಗಿ ಪತ್ರಿಕೆಗಳಲ್ಲಿ ವರದಿಯಾದ ಬೆನ್ನಲ್ಲೇ ಕರ್ನಾಟಕ ರಾಜ್ಯ ಮಕ್ಕಳ ರಕ್ಷಣಾ ಆಯೋಗದ ಸದಸ್ಯರಾದ ಶಶಿಧರ್ ಕೋಸಂಭೆ ಹಾಗೂ ಜಿಲ್ಲಾ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಕಾರ್ಯದರ್ಶಿ ಗೌರವಾನ್ವಿತ ಶ್ರೀ ರವೀಂದ್ರ ಹೊನೋಲೆ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿ ಮಕ್ಕಳ ಕುರಿತಾಗಿ ವಿಚಾರಣೆ ನಡೆಸಿದರು.

    ವಸತಿ ಶಾಲೆಯಲ್ಲಿ ಮಕ್ಕಳಿಗೆ ಮೆನು ಚಾರ್ಟ್ ಪ್ರಕಾರ ಆಹಾರ ನೀಡುವುದಿಲ್ಲ, ಶುದ್ಧ ಕುಡಿಯುವ ನೀರು ಮತ್ತು ಬಿಸಿ ನೀರಿನ ವ್ಯವಸ್ಥೆ, ಬೆಡ್, ಸೊಳ್ಳೆಪರದಿಗಲಿಲ್ಲ, ವಸತಿ ನಿಲಯದಲ್ಲಿ ಮಕ್ಕಳ ರಕ್ಷಣಾ ದೃಷ್ಟಿಯಿಂದ ಮಕ್ಕಳೊಂದಿಗೆ ಯಾವ ಸ್ಟಾಪ್ ನರ್ಸ್ ಇರಲ್ಲ, ಸಿಸಿಟಿವಿ ಕ್ಯಾಮರಗಲಿಲ್ಲ ಹೀಗೆ ಹತ್ತಾರು ಸಮಸ್ಯೆಗಳನ್ನು ಮಕ್ಕಳು ಆಯೋಗದ ಸದಸ್ಯರಿಗೆ ಹಾಗೂ ನ್ಯಾಯಾಧೀಶರಿಗೆ ಎಳೆಎಳೆಯಾಗಿ ಬಿಚ್ಚಿಟ್ಟರು.

    ವಸತಿ ಶಾಲೆಯ ಪ್ರಾಂಶುಪಾಲರು ಹೆಣ್ಣು ಮಕ್ಕಳಿಗೆ ಸ್ಯಾನಿಟರಿ ಪ್ಯಾಡ್ ಗಳು ಸರಿಯಾಗಿ ವಿತರಿಸಲ್ಲ, 2 ತಿಂಗಳಿಗೊಮ್ಮೆ ಒಂದರಂತೆ ಕೊಡುತ್ತಾರೆ. ಪ್ಯಾಡ್ ಗಳು ಕೊಡುವಾಗ ಸ್ಯಾನಿಟರಿ ಪ್ಯಾಡ್ ಮತ್ತು ಮಕ್ಕಳ ಫೋಟೋ ತೆಗೆದು ಕೊಡುತ್ತಾರೆ ಅದರಿಂದ ನಮಗೆ ತುಂಬಾ ಮುಜುಗರಕ್ಕೆ ಒಳಗಾಗುತ್ತೇವೆ ಎಂದು ವಿದ್ಯಾರ್ಥಿನಿಯರು ವಿವರಿಸಿದರು.

    ಇನ್ನು ಗಣಿತ ಹಾಗೂ ಸಮಾಜ ವಿಜ್ಞಾನ ಶಿಕ್ಷಕರು ತರಗತಿಗೆ ಸರಿಯಾಗಿ ಬರದೆ ಪಾಠ ಪ್ರವಚನಗಳು ಬಾಕಿ ಇವೆ. ಗಣಿತ ಶಿಕ್ಷಕರು ಹೇಳು ಪಾಠ ನಮಗೆ ಅರ್ಥವೇ ಆಗುವುದಿಲ್ಲ. ಜೊತೆಗೆ ಮನಸ್ಸಿಗೆ ಬಂದಾಗ ತರಗತಿಗೆ ಬರುವ ಶಿಕ್ಷಕರಿಂದ ಮಕ್ಕಳು ಮುಂದಿನ ಪರೀಕ್ಷಾ ತಯಾರಿಗೆ ಹೆದರಿಕೆಯಾಗತ್ತಿದೆ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts