More

    ಆಯುಧ ಪೂಜೆಗೆ ತಟ್ಟದ ಬೆಲೆಏರಿಕೆ ಬಿಸಿ


    ಯಾದಗಿರಿ: ನಾಡಹಬ್ಬ ದಸರಾ ಆಚರಣೆಗೆ ಕ್ಷಣಗಣನೆ ಆರಂಭಗೊಂಡಿದ್ದು, ಮುನ್ನ ದಿನವಾದ ಆಯುಧ ಪೂಜೆಗೆ ಜಿಲ್ಲೆಯ ಜನತೆ ಸಕಲ ಸಿದ್ಧತೆ ನಡೆಸುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಪೂಜಾ ಸಾಮಗ್ರಿಗಳನ್ನು ಭರದಿಂದ ಕೊಂಡುಕೊಳ್ಳುತ್ತಿರುವ ದೃಶ್ಯ ಭಾನುವಾರ ನಗರದಲ್ಲಿ ಕಂಡು ಬಂದಿತು.


    ನಾಡಹಬ್ಬ ದಸಾರದ ಝಲಕ್ ಬೇರೇಯೆ ಇರುತ್ತದೆ. ಜನರಿಂದ ಮಾರುಕಟ್ಟೆ ಭತರ್ಿಯಾಗಿದ್ದು ಕಂಡು ಬಂದಿತು. ಇಲ್ಲಿನ ಗಾಂಧಿ ವೃತ್ತದಲ್ಲಂತೂ ಕಣ್ಣು ಹಾಯಿಸದಲೆಲ್ಲ ಕುಂಬಳಕಾಯಿ ರಾಶಿ ಕಾಣಿಸಿತು. ನಗರದ ಸುಭಾಷ ವೃತ್ತ, ಗಾಂಧಿವೃತ್ತ, ಶಾಸ್ತ್ರಿ ಸರ್ಕಲ್, ಬಸವೇಶ್ವರ ಗಂಜ್ ಸೇರಿ ಮತ್ತಿತರ ಪ್ರದೇಶಗಳಲ್ಲಿ ಜನತೆ ಬೆಳಗ್ಗೆಯಿಂದಲೇ ಪೂಜಾ ವಸ್ತುಗಳಾದ ಹೂವು, ಹಣ್ಣು, ಬಾಳೆದಿಂಡು, ಕುಂಬಳಕಾಯಿಗಳನ್ನು ಮುಗಿಬಿದ್ದು ಖರೀದಿಸುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು. ಆಯುಧ ಪೂಜೆಯ ವಸ್ತುಗಳ ಬೆಲೆ ಕಳೆದ ವರ್ಷಕ್ಕಿಂತ ಈ ಬಾರಿ ದುಬಾರಿಯಾಗಿದ್ದರೂ ಜಿಲ್ಲೆಯ ಜನತೆ ಆ ಬಗ್ಗೆ ತಲೆಕೆಡಿಸಿ ಕೊಂಡಿಲ್ಲ. ಬೆಳಗ್ಗೆ ಬೇಗ ಎದ್ದು, ವಾಹನಗಳನ್ನು ಸಿಂಗಾರಗೊಳಿಸಿ ಪೂಜೆ ಸಲ್ಲಿಸಲಾಗುತ್ತದೆ. ಹಬ್ಬದ ಅಡುಗೆ ಮಾಡಿ ನೈವೆದ್ಯ ಸಮಪರ್ಿಸಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ.

    ಕಳೆದ ಬಾರಿ ಒಂದು ಕುಂಬಳಕಾಯಿ ಒಂದಕ್ಕೆ 150 ರಿಂದ 200 ರೂ. ಇತ್ತು. ಆದರೆ ಈ ಬಾರಿ 80 ರಿಂದ 100 ರೂ. ಇಳಿಕೆಯಾಗಿದೆ. ಕಲಬುರಗಿ ಜಿಲ್ಲೆ ಆಳಂದ, ಅಫಜಲಪುರ ಹಾಗು ವಿಜಯಪುರದಿಂದ ಕುಂಬಳಕಾಯಿಗಳನ್ನು ರಾಶಿಗಟ್ಟಲೇ ಮಾರಾಟಕ್ಕೆ ತರಲಾಗಿದೆ. ಇನ್ನು ಬೆಂಗಳೂರು, ತುಮಕೂರು, ಹಾಸನ ಜಿಲ್ಲೆಗಳಿಂದ ಹೂವಿನ ಮಾಲೆಗಳು ಜಿಲ್ಲೆಗೆ ತರಿಸಿಕೊಳ್ಳಲಾಗುತ್ತಿದ್ದು, ಉಳಿದಂತೆ ಸೇವಂತಿಗೆ, ಬಾಳೆದಿಂಡು, ಸಂತೂರ, ಸೇಬು, ಬಾಳೆಹಣ್ಣಿನ ಬೆಲೆಯಲ್ಲೂ ಏರಿಕೆ ಕಂಡು ಬಂದಿದೆ. ಚಂಡೆಹೂವಿನ ಹಾರ ಒಂದಕ್ಕೆ 250 ರಿಂದ 350ರ ಗಡಿ ದಾಟಿದೆ. ಹೀಗಾಗಿ ಗ್ರಾಹಕ ಮಾರುಕಟ್ಟೆಗೆ ಬರಬೇಕಾದರೆ ಹೌಹಾರುವಂತಾಯಿತು.

    ಹೊಸ ಬಟ್ಟೆಗಳ ಖರೀದಿಗೆ ಜನತೆ ಬೆಳಗ್ಗೆಯಿಂದ ಜಿಲ್ಲಾಕೇಂದ್ರಕ್ಕೆ ದೌಡಾಯಿಸಿದ್ದರು. ಪಾಲಕರು ತಮ್ಮ ಮಕ್ಕಳಿಗೆ ಹೊಸದಾದ ಬಟ್ಟೆ ಖರೀದಿಸಿ ಕೊಡುವ ಖುಷಿಯಲ್ಲಿದ್ದರು. ಇತ್ತ ಆಭರಣದ ಅಂಗಡಿಯಲ್ಲೂ ಜನರ ದಂಡೇ ಕಾಣಿಸಿತು.
    ಅಲ್ಲದೆ, ಈ ಬಾರಿ ಮುಂಗಾರಿನ ಮಳೆ ಸಹ ಕೈಕೊಟ್ಟ ಪರಿಣಾಮ ಬೆಳೆದ ಬೆಳೆಗಳು ರೈತರು ಕೈಗೆ ಬರದಂತಾಗಿವೆ. ಆದರೂ ಗ್ರಾಮೀಣ ಭಾಗದಿಂದ ಬಂದ ಜನತೆ ಬೆಲೆ ಏರಿಕೆಗೆ ತಲೆ ಕೆಡಿಸಿಕೊಳ್ಳದೆ ಪೂಜಾ ಸಾಮಗ್ರಿಗಳ ಖರೀದಿಯಲ್ಲಿ ಮಗ್ನರಾಗಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts