More

    ಆಯಿಷಾ ಆಗಿ ಬದಲಾಗಿದ್ದಳೆ ‘ಹೇಮಾವತಿ’ 

    ಶಿವಾನಂದ ಹಿರೇಮಠ ಗದಗ,

    ‘ಹೇಮಾವತಿ’ ಮತಾಂತರ ಆರೋಪದ ಪ್ರಕರಣ ದಿನಕ್ಕೊಂದು ಹೊಸ ತಿರುವು ಪಡೆದುಕೊಳ್ಳುತ್ತಿದ್ದು,  ‘ಹೇಮಾವತಿ’ ಆಯಿಷಾ ಆಗಿ ಬದಲಾಗಿದ್ದಳು ಎಂಬ ವಿಷಯ ಈದೀಗ ಬೆಳಕಿಗೆ ಬಂದಿದೆ. ಅದರಲ್ಲೂ ಮತಾಂತರಗೊಂಡ ಹೇಮವಾತಿಯನ್ನು ಪ್ರಕಾಶ್ ಜತೆಗೆ ಮರು ಮದುವೆ ಮಾಡಿಸಲಾಗಿತ್ತು ಎಂಬ ವಿಷಯ ಗೊತ್ತಾಗಿದೆ. ಮರು ಮದುವೆಯಾದರೂ ಕೂಡ ಮನಸ್ಸು ಕರಗಿಸದ ಹೇಮಾವತಿ ನಾಲ್ಕೂ ಮಕ್ಕಳನ್ನು ತೊರೆದು ಮಕ್ಬೂಲ್ ಬಾಯಿಬಡಕಿ ಜತೆ ಎರಡನೇ ಬಾರಿ ಹೋಗಿದ್ದಳು ಎಂಬುದು ಮೂಲಗಳು ತಿಳಿಸಿವೆ. 

    • *ಮರು ಮದುವೆ?* 

    ಮತಾಂತರಗೊಳಿಸಿದ ಆರೋಪಕ್ಕೆ ಒಳಗಾಗಿರುವ ಮಕ್ಬೂಲ್ ಬಾಯಿಬಡಕಿ ಮೂಲತಃ ಹಾವೇರಿ ಜಿಲ್ಲೆಯ ಸವಣೂರು ಪಟ್ಟಣದನಾಗಿದ್ದು ಗೋವಾದಲ್ಲಿ ಎಳನೀರು ಮಾರುತ್ತಿದ್ದ. ಸಹೋದರರ ಜತೆ ಹಲವು ವರ್ಷಗಳಿಂದ ಅಲ್ಲೆ ವಾಸವಿದ್ದ. ಗೋವಾಕ್ಕೆ ದುಡಿಯಲು ಹೋಗಿದ್ದ ಪ್ರಕಾಶ್ ಗುಜರಾತಿ ಕುಟುಂಬಕ್ಕೆ ಮನೆಕೊಡಿಸುವ ನೆಪದಲ್ಲಿ ಪರಿಚಯಸ್ಥನಾಗಿ ಮನೆಗೆ ಆಗಾಗ ಬಂದು ಹೋಗುತ್ತಿರುತ್ತಾನೆ. ಪ್ರಕಾಶ್ ಹೇಳುವ ಪ್ರಕಾರ, ‘ಅಣ್ಣ-ತಂಗಿ’ ಎಂದೇ ಇಬ್ಬರೂ ಸಂಬೋಧಿಸುತ್ತಿದ್ದರು ಎಂದು ತಿಳಿದು ಬಂದಿದೆ. ಅವರಿಬ್ಬರ ನಡುವೆ ಅಕ್ರಮ ಸಂಬಂಧ ಬೆಳೆದ ವಿಚಾರ ಪ್ರಕಾಶ್ ಗೆ ಗೊತ್ತಾಗಿ ಗಂಡ ಹೆಂಡತಿ ನಡುವೆ ಜಗಳವಾಗುತ್ತದೆ. ಈ ಕಾರಣದಿಂದ ಕುಟುಂಬ ಸಮೇತ ಪ್ರಕಾಶ್ ಗದಗಿಗೆ ಆಗಮಿಸಿ ನೆಲೆಸುತ್ತಾನೆ. ಈ ನಡುವೆ ಹೇಮಾವತಿ ಮನೆಯಲ್ಲಿರುವ ಹಣದೊಂದಿಗೆ ಗೋವಾಕ್ಕೆ ಪರಾರಿಯಾಗುತ್ತಾಳೆ. ಈ ವಿಷಯ ತಿಳಿದು ಆಘಾತಕ್ಕೆ ಒಳಗಾದ ಪ್ರಕಾಶ್ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಾನೆ‌. ಈ ಎಲ್ಲ ಘಟನಗಳನ್ನು ಆಧರಿಸಿ ಕುಟುಂಬವನ್ನು ಒಂದುಗೂಡಿಸುವ ಸಲುವಾಗಿ ಮಹಿಳಾ ಸಂಘಟಕರು ಮತ್ತು ಕೆಲ ಹಿರಿಯರ ಮಧ್ಯಸ್ಥಿಕೆಯಲ್ಲಿ ಗೋವಾದಿಂದ ಹೇಮಾವತಿಯನ್ನು ಕರೆತರುತ್ತಾರೆ. ಆಗ ಹೇಮಾವತಿ ಸಂಪೂರ್ಣ ಆಯಿಷಾ ಆಗಿ ಬದಲಾಗಿರುವ ವಿಷಯ ಬೆಳಕಿಗೆ ಬರುತ್ತದೆ. ಕೊರಳಲ್ಲಿ ತಾಳಿ ಇಲ್ಲದ್ದನ್ನು ಕಂಡ ಹಿರಿಯರು ತಿಳಿಹೇಳಿ ನಗರದ ದಂಡಿದುರ್ಗಮ್ಮ ದೇವಸ್ಥಾನದಲ್ಲಿ ಪ್ರಕಾಶ್ ಜತೆ ಮರುಮದುವೆ ಮಾಡಿಸಿ ಹೇಮಾವತಿಯಾಗಿ ಬದಲಾಯಿಸುತ್ತಾರೆ. ಕೆಲ ದಿನಗಳ ವರೆಗೆ ಮನೆಯಲ್ಲೇ ಇದ್ದ ಹೇಮಾವತಿ ಮನೆಯಲ್ಲಿ ಗಂಡ ಇಲ್ಲದ ವೇಳೆ ಕಿರಿಯ ಮಗನನ್ನು ಕರೆದುಕೊಂಡು ಗೋವಾಕ್ಕೆ ಪಲಾಯನ ಬೆಳೆಸುತ್ತಾಳೆ. ಈ ನಡುವೆ ಮಗಳೂ ನಾಪತ್ತೆಯಾಗುತ್ತಾಳೆ.  ವಿಷಯ ತಿಳಿದ ಪ್ರಕಾಶ್, ಗೋವಾದಲ್ಲಿ ಮಕ್ಬೂಲ್ ಗೆ ಕರೆ ಮಾಡಿ ವಿಚಾರಿಸಿದಾಗ ಅವರು ಬೆದರಿಕೆಯೊಡ್ಡಿದ ನಂತರ ಗದಗ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಬಾಕ್ಸ್:

    ಮತಾಂತರಗೊಂಡಿಲ್ಲ ಎಂಬ ಹೇಮಾವತಿಯ ಹೇಳಿಕೆ ಅನುಮಾನಕ್ಕೆ ಎಡೆಮಾಡಿಕೊಡುತ್ತಿದೆ. ಹೇಮಾವತಿ ವೇಷಭೂಷಣಗಳು ಬದಲಾಗಿದ್ದು ಬೆಳಿಕೆಗೆ ಬಂದಿದೆ. ಅನ್ಯ ಧರ್ಮದ ಸಂಪ್ರದಾಯದಂತೆ ಮೂಗುತಿ ಬದಲಾಗಿದ್ದು, ಕಾಲುಂಗುರ ಇಲ್ಲದಿರುವುದು, ಈ ಮೊದಲು ಕೊರಳಲ್ಲಿ ತಾಳಿ ಇಲ್ಲದ ಸಂದರ್ಭದಲ್ಲಿ ಮರು ಮದುವೆ ಮಾಡಿಸಿರುವ ಘಟನೆ, ತಾಯಿ ವೇಷಭೂಷಣ ಬದಲಾಯಿಸದ್ದನ್ನು ಕಂಡ ಮಕ್ಕಳ ಹೇಳಿಕೆಗಳು ಹಾಗೂ  ಆಯಿಷಾ ಆಗಿ ಹೇಮಾವತಿ ಬದಲಾಗಿದ್ದಳು ಎಂಬ ಪ್ರಕಾಶ್ ಹೇಳಿಕೆಗಳನ್ನೆಲ್ಲ ತನಿಖೆಗೆ ಒಳಪಡಿಸಬೇಕಿದೆ.  

    *ಹೇಮಾವತಿ ಪರ ವಾದವೇನು?* 

    ಮತಾಂತರ ಆರೋಪ ಪ್ರಕರಣದಲ್ಲಿ ಮಧ್ಯಸ್ಥಿಕೆ ವಹಿಸಿದ ಹಿರಿಯರ ಪ್ರಕಾರ ಹೇಮಾವತಿ, ಮಕ್ಬೂಲ್ ನಡುವೆ ಸಂಬಂಧ ಇತ್ತು. (ಇದನ್ನು ಹೇಮಾವತಿಯೂ ಸ್ಪಷ್ಟಪಡಿಸಿದ್ದಾಳೆ) ಇದನ್ನು ತಿಳಿದ ಪ್ರಕಾಶ್, ಹೇಮಾವತಿ ಮೇಲೆ ಹಲ್ಲೆ, ಕಿರುಕುಳ ಕೊಡಲು ಆರಂಭಿಸಿದ. ಇಬ್ಬರಿಗೂ ಬುದ್ದಿ ಹೇಳಲಾಗಿತ್ತು. ಎರಡನೇ ಬಾರಿ ಹೇಮಾವತಿ ಹೋದಾಗಲೂ ಮರಳಿ ಕರೆಸಿ ಮರು ಮದುವೆ ಮಾಡಿಸಿದ್ದೇವು. ಪ್ರಕಾಶ್ ಮತ್ತೇ ಅದೇ ಚಾಳಿ ಮುಂದುವರಿಸಿದ. ಪ್ರಾಣಭಯದಿಂದ ಹೇಮಾವತಿ ಈ ನಿರ್ಧಾರ ತೆಗೆದುಕೊಂಡಿದ್ದಾಳೆ ಎಂದಿದ್ದಾರೆ

    ==== 

    ಕೋಟ್: ಪ್ರಕಾಶ್ ನನಗೆ ಹಿಂಸೆ ನೀಡುತ್ತಿದ್ದ. ಗಂಡನ ಕಿರುಕುಳದಿಂದ ಗೋವಾದಲ್ಲಿ ಒಬ್ಬಳೇ ವಾಸಿಸುತ್ತಿದ್ದೆ. ಇನ್ನೇಂದಿಗೂ ಪ್ರಕಾಶ್ ಜತೆ ಜೀವನ ನಡೆಸುವುದಿಲ್ಲ.

    – ಹೇಮಾವತಿ ಗುಜರಾತಿ.

    *ಕೋಟ್:* 

    ಹಿರಿಯ ಮಗನ ಕಿವಿ ಶಸ್ತ್ರಚಿಕಿತ್ಸೆ ಕೊಡಿಸುವ ನೆಪದಲ್ಲಿ ಮೊದಲ ಬಾರಿ ಮಕ್ಬೂಲ್ ಜತೆ ಹೇಮಾವತಿ ಹೋಗಿದ್ದಳು. ಎರಡನೇ ಬಾರಿ ಹೋಗುವಾಗ ಕಿರಿಯ ಮಗನನ್ನು ಕರೆದುಕೊಂಡು ಹೋಗಿದ್ದಳು. ಮಕ್ಕಳ ಶೈಕ್ಷಣಿಕ ದೃಷ್ಟಿಯಿಂದ ನಾನೇ ಕರೆ ಮಾಡಿ ಮಕ್ಕಳನ್ನು ಕರೆಸಿದ್ದೆ. ಕಿರುಕುಳ ಕೊಟ್ಟಿದ್ದೇ ನಿಜವಾದರೆ ಪೊಲೀಸ್ ಠಾಣೆಗೆ ದೂರು ಏಕೆ ನೀಡಿಲ್ಲ.

    – ಪ್ರಕಾಶ್ ಗುಜರಾತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts