More

    ಆನ್​ಲೈನ್ ಶ್ರೀರುದ್ರ ತರಗತಿಗೆ ಚಾಲನೆ

    ವಾರಾಣಸಿ: ಕಾಶೀ ಜ್ಞಾನಸಿಂಹಾಸನ ಪೀಠದ 85ನೇ ಪೀಠಾಧೀಶರಾಗಿದ್ದ ಲಿಂಗೈಕ್ಯ ಜಗದ್ಗುರು ಶ್ರೀ ವಿಶ್ವೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳ 31ನೇ ಪುಣ್ಯಸ್ಮರಣೋತ್ಸವವು ಆಶ್ವೀಜ ಮಾಸದ ತೃತೀಯದಂದು ಕಾಶಿ ಜಂಗಮವಾಡಿ ಮಠದಲ್ಲಿ ನಡೆಯಿತು.

    ಪ್ರತಿವರ್ಷ ಲಿಂಗೈಕ್ಯ ಜಗದ್ಗುರುಗಳ ಗದ್ದುಗೆಗೆ ನಡೆಯುವಂತೆ ರುದ್ರಾಭಿಷೇಕ ಮತ್ತು ವಿಶೇಷ ಅಲಂಕಾರದೊಂದಿಗೆ ಮಹಾಪೂಜೆ ನೆರವೇರಿಸಲಾಯಿತು. ಕಾಶೀ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳ ಸಾನ್ನಿಧ್ಯದಲ್ಲಿ ಶ್ರೀ ಪೀಠದ ಗುರುಕುಲ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

    ಕರೊನಾ ಹಿನ್ನೆಲೆಯಲ್ಲಿ ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ ಮತ್ತಿತರ ರಾಜ್ಯಗಳಲ್ಲಿರುವ ಪೀಠದ ಭಕ್ತರು ಆನ್​ಲೈನ್ ಮುಖಾಂತರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

    ಇದೇ ವೇಳೆ ಇತ್ತೀಚೆಗೆ ಶತಮಾನೋತ್ಸವ ಆಚರಿಸಿಕೊಂಡಿರುವ ಜಗದ್ಗುರು ವಿಶ್ವಾರಾಧ್ಯ ಗುರುಕುಲದ ವತಿಯಿಂದ ಆನ್ ಲೈನ್ ಶ್ರೀರುದ್ರ ತರಗತಿಗೆ ಚಾಲನೆ ನೀಡಲಾಯಿತು. ಬೆಂಗಳೂರಿನಿಂದ ಪಾಲ್ಗೊಂಡಿದ್ದ ವಿಭೂತಿಪುರ ಮಠದ ಡಾ.ಮಹಾಂತಲಿಂಗ ಶಿವಾಚಾರ್ಯ ಸ್ವಾಮಿಗಳು ತರಗತಿಯನ್ನು ಉದ್ಘಾಟಿಸಿದರು. ಮೊದಲನೇ ತರಗತಿಗೆ ದೇಶದ ವಿವಿಧ ರಾಜ್ಯಗಳಿಂದ 25 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಮುಂದಿನ ದಿನಗಳಲ್ಲಿ ಜಗತ್ತಿನ ಯಾವುದೇ ಮೂಲೆಯಲ್ಲಿ ಕುಳಿತು ವಿದ್ಯಾರ್ಥಿಗಳು ವೇದ, ಆಗಮ, ರುದ್ರ ಇನ್ನಿತರ ಸಂಸ್ಕೃತ ಪಾಠವನ್ನು ಕಲಿಯಲು ಕ್ರಮ ಕೈಗೊಳ್ಳುವುದಾಗಿ ಇದೇ ವೇಳೆ ಕಾಶೀ ಜಗದ್ಗುರುಗಳು ಭರವಸೆ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts