More

    ಆನ್​ಲೈನ್ ಪರೀಕ್ಷೆ ಮರುಪರಿಶೀಲನೆಗೆ ಆಗ್ರಹ

    ಹುಬ್ಬಳ್ಳಿ: ಇಂಜಿನಿಯರಿಂಗ್ ಪದವೀಧರರಿಗೆ ನಡೆಸುತ್ತಿರುವ ಆನ್​ಲೈನ್ ಪರೀಕ್ಷೆಯನ್ನು ಮರು ಪರಿಶೀಲಿಸುವಂತೆ ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ (ಎನ್​ಎಸ್​ಯುುಐ) ಧಾರವಾಡ ಜಿಲ್ಲಾ ಘಟಕ ಆಗ್ರಹಿಸಿದೆ. ಮಂಗಳವಾರ ಘಟಕದ ಪದಾಧಿಕಾರಿಗಳು ಕೆಎಲ್​ಇ ತಾಂತ್ರಿಕ ವಿವಿಗೆ ಮನವಿ ಸಲ್ಲಿಸಿದರು.
    ಆನ್​ಲೈನ್​ನಲ್ಲಿ ಪರೀಕ್ಷೆ ಆರಂಭಕ್ಕೂ ಪೂರ್ವ ವಿದ್ಯಾರ್ಥಿಗಳು ಟ್ವಿಟ್ಟರ್, ಸಾಮಾಜಿಕ ಜಾಲತಾಣದಲ್ಲೂ ಆಕ್ಷೇಪ ವ್ಯಕ್ತಪಡಿಸಿದ್ದರು. ಆದಾಗ್ಯೂ ಪರೀಕ್ಷೆ ನಡೆಸುತ್ತಿರುವುದು ಸರಿಯಲ್ಲ. ಅಣಕು ಆನ್​ಲೈನ್ ಪರೀಕ್ಷೆಗೆ ಬಹಳಷ್ಟು ವಿದ್ಯಾರ್ಥಿಗಳು ಹಾಜರಾಗದಿರುವುದನ್ನು ಗಣನೆಗೆ ತೆಗೆದುಕೊಳ್ಳದೇ ಪರೀಕ್ಷೆ ನಡೆಸಿರುವುದು ಆಕ್ಷೇಪಾರ್ಹ ಎಂದು ಸಂಘಟನೆ ಹೇಳಿದೆ.

    ಜಿಲ್ಲಾ ಘಟಕದ ಅಧ್ಯಕ್ಷ ಶಿವಾ ಬೆಂಡಿಗೇರಿ, ರಜತ್ ಉಳ್ಳಾಗಡ್ಡಿಮಠ, ಮಣಿಕಂಠ ಗುಡಿಹಾಳ, ಲಕ್ಷ್ಮಣ ಗಡ್ಡಿ, ಸುನೀಲ ಮರಾಠೆ, ಲಿಂಗರಾಜ ಕಿರೇಸೂರ ಇದ್ದರು.

    ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ: ಯಾವುದೇ ಕಾರಣಕ್ಕೂ ಇಂಜಿನಿಯರಿಂಗ್ ಪದವಿಗೆ ಆನ್​ಲೈನ್ ಪರೀಕ್ಷೆ ನಡೆಸುವುದನ್ನು ಕೈ ಬಿಡುವುದಿಲ್ಲ. ಯಾರಿಗೆ ಆನ್​ಲೈನ್ ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗುವುದಿಲ್ಲವೋ ಅವರನ್ನು ಲಿಖಿತ ಪರೀಕ್ಷೆಗೆ ಆಹ್ವಾನಿಸಲಾಗುವುದು. ಪರೀಕ್ಷೆ ನಡೆಸದೇ ವಿದ್ಯಾರ್ಥಿಗಳನ್ನು ತೇರ್ಗಡೆಗೊಳಿಸುವ ಕ್ರಮ ಅನುಸರಿಸುವುದಿಲ್ಲ ಎಂದು ಕೆಎಲ್​ಇ ತಾಂತ್ರಿಕ ವಿವಿ ಕುಲಪತಿ ಡಾ. ಅಶೋಕ ಶೆಟ್ಟರ್ ಸ್ಪಷ್ಟಪಡಿಸಿದ್ದಾರೆ. ರಾಜ್ಯ ಸರ್ಕಾರ ಅಥವಾ ಯುಜಿಸಿಯಿಂದ ಅಂತಿಮ ಪರೀಕ್ಷೆ ನಡೆಸಲೇಬಾರದು ಎಂಬ ಆದೇಶ ಬಂದಲ್ಲಿ ಮಾತ್ರ ನಮ್ಮ ನಿರ್ಧಾರವನ್ನು ಮರು ಪರಿಶೀಲಿಸಲಾಗುವುದು. ಕೆಲವು ವಿದ್ಯಾರ್ಥಿಗಳು ಆನ್​ಲೈನ್ ಪರೀಕ್ಷೆಗೆ ಆಕ್ಷೇಪ ವ್ಯಕ್ತಪಡಿಸಿ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ನಡೆಸುತ್ತಿದ್ದಾರೆ. ಕೆಲವರು ಮುಗ್ಧ ವಿದ್ಯಾರ್ಥಿಗಳ ದಾರಿ ತಪ್ಪಿಸುತ್ತಿದ್ದಾರೆ. ಈ ಎಲ್ಲ ಅಂಶಗಳು ನಮ್ಮ ಗಮನದಲ್ಲಿವೆ. ದುರುದ್ದೇಶಪೂರಿತವಾದ ಅಭಿಯಾನವನ್ನು ತಕ್ಷಣ ನಿಲ್ಲಿಸದಿದ್ದರೆ ಶಿಸ್ತು ಕ್ರಮ ಜರುಗಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts