More

    ಆನ್​ಲೈನ್​ನಲ್ಲಿ ಶಾದಿ ಭಾಗ್ಯ

    ಭಟ್ಕಳ: ಕರೊನಾ ಸೋಂಕು ಆತಂಕ, ಭಯ ಹುಟ್ಟಿಸಿರುವುದರ ಜತೆಗೆ ಸರಳ ಬದುಕು ನಡೆಸುವುದನ್ನೂ ಕಲಿಸುತ್ತಿದೆ. ಇದಕ್ಕೆ ಉದಾಹರಣೆ ಎಂಬಂತೆ ನಡೆದ ಆನ್​ಲೈನ್ ವಿವಾಹ.

    ಹೌದು, ಭಟ್ಕಳದ ಮಹ್ಮದ್ ಆದಿಲ್ ಕೌಡ ಎಂಬ ಯುವಕ ಚೆನ್ನೈ ಮೂಲದ ಆಂಬೂರು ನಿವಾಸಿ ಆಫಿಯಾ ಎಂಬ ವಧುವಿನೊಂದಿಗೆ ಆನ್​ಲೈನ್​ನಲ್ಲಿಯೇ ವಿವಾಹವಾಗಿದ್ದಾರೆ.

    ಮಾಲ್ಡೀವ್ಸ್​ನಲ್ಲಿ ಪೈಲಟ್ ಆಗಿರುವ ಆದಿಲ್ ಲಾಕ್​ಡೌನ್ ಪೂರ್ವದಲ್ಲಿ ವಿವಾಹದ ಸಂಬಂಧ ಬೆಂಗಳೂರಿಗೆ ಆಗಮಿಸಿದ್ದರು. ಆದರೆ, ಕರೊನಾ ಹಾವಳಿಯಿಂದ ಬೆಂಗಳೂರಿನಲ್ಲಿಯೇ ಲಾಕ್ ಆಗಬೇಕಾದ ಸ್ಥಿತಿ ನಿರ್ವಣವಾಯಿತು. ಅಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ತೆರಳಿ ಕ್ವಾರಂಟೈನ್ ನಿಯಮ ಪಾಲಿಸುವ ಅನಿವಾರ್ಯತೆ ಇತ್ತು. ಹಾಗಾಗಿ ಎರಡೂ ಕುಟುಂಬದವರು ಆನ್​ಲೈನ್​ನಲ್ಲಿಯೇ ವಿವಾಹ ನೆರವೇರಿಸುವ ನಿರ್ಧಾರಕ್ಕೆ ಬಂದರು. ಅದೇ ರೀತಿ ಶುಕ್ರವಾರ ಬೆಂಗಳೂರಿನಲ್ಲಿ ವಿವಾಹ ನಡೆಯಿತು.

    ಧರ್ಮಗುರು ಖಾಜಿ ಸಾಹೇಬ್ ಅವರ ಎದುರು ವಧು-ವರನ ಒಪ್ಪಿಗೆಯ ಸಹಿ ಹಾಕಿಸಿ ಕೊಳ್ಳುವ ಮೂಲಕ ವಿವಾಹ ಕಾರ್ಯಕ್ರಮ ನಡೆಸಿಕೊಟ್ಟರು. ಉಳಿದ ಕಾನಾತ್ಮಕ ವಿವಾಹ ದಾಖಲೆಗಳು ಚೆನ್ನೈನಲ್ಲಿ ಈಗಾಗಲೇ ಮಾಡಿಕೊಂಡಿದ್ದಾರೆ. ಈ ವಿವಾಹವನ್ನು ಇವರ ಸಂಬಂಧಿಕರು ಮತ್ತು ಸ್ನೇಹಿತರು ಸಿಸ್ಕೋ ಆಪ್ ಮೂಲಕ ಆನ್ ಲೈನ್ ನಲ್ಲಿ ವಿವಾಹ ಸಮಾರಂಭ ನೋಡಿ ಸಂತೋಷ ಪಟ್ಟರು.

    ಕರೊನಾ ಲಾಕ್​ಡೌನ್​ನಿಂದಾಗಿ ಭಟ್ಕಳದಲ್ಲಿ ಮುಸ್ಲಿಂ ಸಮುದಾಯವೊಂದರಲ್ಲೇ ನೂರಕ್ಕೂ ಹೆಚ್ಚು ವಿವಾಹಗಳು ಸ್ಥಗಿತಗೊಂಡಿವೆ. ಈಗ ಆನ್ ಲೈನ್ ವಿವಾಹಗಳಲ್ಲಿ ಯಾವುದೇ ಸಮಸ್ಯೆ ಎದುರಾಗದು ಎಂಬುದನ್ನು ಈ ಘಟನೆ ತೋರಿಸಿಕೊಟ್ಟಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts