More

    ಆನ್​ಲೈನ್​ನಲ್ಲಿ ಮದುವೆಯಾದ ವಧು-ವರರು

    ಧಾರವಾಡ: ಕರೋನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಆನ್​ಲೈನ್​ನಲ್ಲೆ ಪಾಠ-ಪ್ರವಚನಗಳು ನಡೆಯುತ್ತಿವೆ. ಇದೀಗ ನಗರದಲ್ಲಿ ಆನ್​ಲೈನ್ ಮೂಲಕವೇ ಮದುವೆ ಮಾಡಿದ ಘಟನೆ ನಡೆದಿದೆ.

    ಧಾರವಾಡದ ಯುವಕ ಹಾಗೂ ಕೊಪ್ಪಳದ ಯವತಿಯ ಮದುವೆಯನ್ನು ಏ. 19ರಂದು ನಿಶ್ಚಯಿಸಲಾಗಿತ್ತು. ಆದರೆ ಕರೊನಾ ವೈರಸ್ ಹರಡುವಿಕೆ ತಡೆಯಲು ಲಾಕ್​ಡೌನ್ ವಿಧಿಸಿದ ಹಿನ್ನೆಲೆಯಲ್ಲಿ ನಿಗದಿತ ದಿನವೇ ಆನ್​ಲೈನ್​ನಲ್ಲಿ ಮದುವೆಯಾಗಿ ಪತಿ-ಪತ್ನಿಯಾಗಿದ್ದಾರೆ.

    ಇಲ್ಲಿನ ಆದರ್ಶ ನಗರದ ಇಮ್ರಾನ್ ನದಾಫ್ ಜತೆಗೆ ಕೊಪ್ಪಳದ ತಾಜಮಾ ಬೇಗಂ ಜೊತೆಗೆ ವೀಡಿಯೋ ಕಾಲ್ ಮೂಲಕ ವಿವಾಹ ಮಾಡಲಾಯಿತು. ವರನ ಸ್ವಗೃಹ ಹಾಗೂ ವಧುವಿನ ಮನೆಯಲ್ಲಿ ಲ್ಯಾಪಟಾಪ್ ಇಟ್ಟು ಈ ಮೂಲಕ ಗುರುಹಿರಿಯರ ಸಮ್ಮುಖದಲ್ಲಿ ಮುಸ್ಲಿಂ ಸಮಾಜದ ಸಂಪ್ರದಾಯಗಳನ್ನು ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಎರಡು ಕುಟುಂಬದ ಸದಸ್ಯರು ಮಾಸ್ಕ್ ಹಾಕಿಕೊಂಡೇ ಸಂಪ್ರದಾಯಗಳನ್ನು ನೆರವೇರಿಸಿದ್ದು ವಿಶೇಷವಾಗಿತ್ತು.

    ಜನವರಿ ತಿಂಗಳಲ್ಲಿ ನಿಶ್ಚಿತಾರ್ಥ ನೆರವೇರಿಸಿ ಏ.19ರಂದು ಮದುವೆ ಮಾಡಲು ನಿಶ್ಚಯಿಸಲಾಗಿತ್ತು. ಆದರೆ, ಲಾಕ್​ಡೌನ್ ಕಾರಣದಿಂದ ಜಿಲ್ಲಾಡಳಿತಕ್ಕೆ ಮದುವೆ ಬಗ್ಗೆ ಮಾಹಿತಿ ನೀಡಿದಾಗ 4 ಜನರು ಮಾತ್ರ ತೆರಳಲು ಪರವಾನಗಿ ಕೊಡುವುದಾಗಿ ಹೇಳಿದರು. ಹೀಗಾಗಿ ಎರಡೂ ಕುಟುಂಬಗಳ ಒಪ್ಪಿಗೆ ಮೇರೆಗೆ ಆನ್​ಲೈನ್ ಮೂಲಕ ಸರಳವಾಗಿ ಮದುವೆ ಮಾಡಲಾಗಿದ್ದು, ಲಾಕ್​ಡೌನ್ ನಂತರದಲ್ಲಿ ಕೊಪ್ಪಳದಲ್ಲಿರುವ ಪತ್ನಿಯನ್ನು ಕರೆತರಲಾಗುವುದು ಎಂದು ವರ ಇಮ್ರಾನ್ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts