More

    ಆನ್​ಲೈನ್​ನಲ್ಲಿ ಭಗವದ್ಗೀತಾ ಅಭಿಯಾನ

    ಶಿರಸಿ: ಪ್ರಸಕ್ತ ವರ್ಷ ಭಗವದ್ಗೀತಾ ಅಭಿಯಾನವು ಡಿ.18ರಿಂದ 24ರವರೆಗೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಶುಕ್ರವಾರ ಸ್ವರ್ಣವಲ್ಲೀ ಶ್ರೀಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಅವರು ಮಠದಲ್ಲಿ ವಿಡಿಯೋ ಕಾನ್ಪರೆನ್ಸ್ ಮೂಲಕ ರಾಜ್ಯದ ಎಲ್ಲ ಜಿಲ್ಲೆಗಳ ಪ್ರಮುಖರೊಂದಿಗೆ ರ್ಚಚಿಸಿದರು.

    ಈ ವೇಳೆ ಮಾತನಾಡಿದ ಶ್ರೀಗಳು, ಸಾಮಾಜಿಕ ಸಾಮರಸ್ಯ, ನೈತಿಕತೆಯ ಪುನರುತ್ಥಾನ, ವ್ಯಕ್ತಿತ್ವ-ವಿಕಸನ, ರಾಷ್ಟ್ರೀಯ ಭಾವೈಕ್ಯ ಸಾಧಿಸುವ ದೃಷ್ಟಿಯಿಂದ 2007ರಲ್ಲಿ ಪ್ರಾರಂಭಿಸಿರುವ ಶ್ರೀಭಗವದ್ಗೀತಾ ಅಭಿಯಾನ ನಾಡಿನಾದ್ಯಂತ ನಿರಂತರವಾಗಿ ನಡೆಯುತ್ತಿದೆ. ಆದರೆ ಈ ವರ್ಷ ಕರೊನಾ ಮಹಾಮಾರಿಯ ಹಿನ್ನೆಲೆಯಲ್ಲಿ ಯಾವುದೇ ಸಾರ್ವಜನಿಕ ಕಾರ್ಯಕ್ರಮಗಳಿಲ್ಲದೇ ಸರ್ಕಾರ ರೂಪಿಸಿರುವ ನಿಯಮಗಳಿಗೆ ಅನುಸಾರವಾಗಿ ಆನ್​ಲೈನ್​ನಲ್ಲಿ ಅಭಿಯಾನ ನಡೆಯಲಿದೆ. ಈ ಸಲ ರಾಜ್ಯಮಟ್ಟದಲ್ಲಿ ಎಲ್ಲ ಜಿಲ್ಲೆಗಳಲ್ಲಿ, ಏಕಕಾಲದಲ್ಲಿ ಅಭಿಯಾನ ನಡೆಯಲಿದೆ. ಏಳು ದಿನಗಳ ಕಾಲ ಭಗವದ್ಗೀತೆಯ 3ನೇ ಅಧ್ಯಾಯದ ಪಠಣ ರಾಜ್ಯಾದ್ಯಂತ ಮನೆ ಮನೆಗಳಲ್ಲಿ, ದೇವಸ್ಥಾನ, ಶಂಕರ ಮಠ, ರಾಘವೇಂದ್ರ ಮಠ, ಸಮಾಜ ಮಂದಿರ ಮುಂತಾದ ಸ್ಥಳಗಳಲ್ಲಿ ನಡೆಯಲಿದೆ.

    ಡಿ.25ರಂದು 18 ಅಧ್ಯಾಯಗಳ ಸಮಗ್ರ ಪಠಣದೊಂದಿಗೆ ಗೀತಾ ಜಯಂತಿಯನ್ನು ಆಚರಿಸಲಾಗುವುದು. ಈ ಅಭಿಯಾನದ ಸಂದರ್ಭದಲ್ಲಿಯೇ ಅಂತರ್ಜಾಲದ ಮೂಲಕ ಪ್ರವಚನ ಪ್ರಸಾರ ಮಾಡಲಾಗುವುದು. ಅದರಂತೆ ವಿದ್ವಾಂಸರಿಂದ ಪ್ರವಚನ ಏರ್ಪಡಲಿದೆ ಎಂದರು. ಡಿ.12ರೊಳಗಾಗಿ ತಾಲೂಕಾ ಮಟ್ಟ, ಡಿ.16ರೊಳಗಾಗಿ ಜಿಲ್ಲಾಮಟ್ಟ ಹಾಗೂ ಡಿ.20ರೊಳಗಾಗಿ ರಾಜ್ಯಮಟ್ಟದಲ್ಲಿ ಆನ್​ಲೈನ್​ನಲ್ಲಿ ಹಿರಿಯ ಪ್ರಾಥಮಿಕ, ಪ್ರೌಢಶಾಲೆ, ಪದವಿ ಪೂರ್ವ ಶಾಲೆಗಳ ವಿದ್ಯಾರ್ಥಿಗಳಿಗಾಗಿ 3ನೇ ಅಧ್ಯಾಯದ ಗೀತಾ ಕಂಠಪಾಠ ಸ್ಪರ್ಧೆ, ಗೀತೆಯ ಕುರಿತಾಗಿ ಭಾಷಣ ಸ್ಪರ್ಧೆಯನ್ನು ನಡೆಸಲಾಗುವುದು

    ಎಂದು ತಿಳಿಸಿದರು. ಈ ವೇಳೆ ಅಭಿಯಾನದ ಕೆ.ವಿ. ಭಟ್ಟ, ಜಿ.ಎನ್. ಹೆಗಡೆ ಹಿರೇಸರ ಹಾಗೂ ಇತರರು ಇದ್ದರು.</

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts