More

    ಆನೇಕಲ್ ಕ್ರೀಡಾಂಗಣ  ಶೀಘ್ರ ಮೇಲ್ದರ್ಜೆಗೆ, ಶಾಸಕ ಬಿ. ಶಿವಣ್ಣ ವಿಶ್ವಾಸ, ಚಿಕ್ಕಕೆರೆ ಉದ್ಯಾನವನ ಅಭಿವೃದ್ಧಿಗೆ ಚಾಲನೆ

    ಆನೇಕಲ್: ಆನೇಕಲ್ ಪುರಸಭೆ ವ್ಯಾಪ್ತಿಯ ಕ್ರೀಡಾಂಗಣವನ್ನು ಮೇಲ್ದರ್ಜೆಗೇರಿಸಲು ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಶೀಘ್ರದಲ್ಲೇ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದು ಶಾಸಕ ಬಿ. ಶಿವಣ್ಣ ತಿಳಿಸಿದರು.
     ಪುರಸಭೆಯ 2016-17ನೇ ಸಾಲಿನ ವಿಶೇಷ ಅನುದಾನ ಮತ್ತು ಪುರಸಭಾ ನಿಧಿ ಅನುದಾನದಿಂದ 70 ಲಕ್ಷ ರೂ. ವೆಚ್ಚದಲ್ಲಿ ಚಿಕ್ಕಕೆರೆ ಉದ್ಯಾನವನ ಅಭಿವೃದ್ಧಿ ಕಾಮಗಾರಿಗೆ ಬುಧವಾರ ಚಾಲನೆ ನೀಡಿ ಮಾತನಾಡಿದರು.
     ಕಾಂಗ್ರೆಸ್ ಸರ್ಕಾರವಿದ್ದಾಗ ಕ್ರೀಡಾಂಗಣ ಅಭಿವೃದ್ಧಿ ಮಾಡಲು ಮನವಿ ಸಲ್ಲಿಸಲಾಗಿತ್ತು. ಸರ್ಕಾರ ಬದಲಾವಣೆ ಕಾರಣದಿಂದ ಸಿಎಂ ಆಗಿದ್ದ ಯಡಿಯೂರಪ್ಪ ಅವರಿಗೂ ಮನವಿ ಸಲ್ಲಿಸಲಾಗಿತ್ತು. ಉನ್ನತ ಅಧಿಕಾರಿಗಳ ಜತೆ ಚರ್ಚಿಸಿ, ಅಭಿವೃದ್ಧಿ ಕಾರ್ಯಕ್ಕೆ ಶೀಘ್ರದಲ್ಲೇ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.
     ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಆಗಿನ ಪುರಸಭಾ ಅಧ್ಯಕ್ಷರಾಗಿದ್ದ ಎನ್. ಎಸ್. ಅಶ್ವತ್ಥ್ ನಾರಾಯಣ್ ಅವರ ಕನಸಿನಂತೆ ಮುಖ್ಯಮಂತ್ರಿಗಳ ಬಳಿ ಚರ್ಚಿಸಿ ವಿಶೇಷ ಅನುದಾನದಲ್ಲಿ 50 ಲಕ್ಷ ಹಣವನ್ನು ಉದ್ಯಾನವನ ಅಭಿವೃದ್ಧಿಗೆ ಬಿಡುಗಡೆ ಮಾಡಿಸಲಾಗಿತ್ತು. ಹಾಗೆಯೇ ಪುರಸಭಾ ನಿಧಿಯ 20 ಲಕ್ಷ ಹಣ ಸೇರಿ 70 ಲಕ್ಷ ರೂ. ವೆಚ್ಚದಲ್ಲಿ ಉದ್ಯಾನವನ ಅಭಿವೃದ್ಧಿಗೆ ಚಾಲನೆ ನೀಡಲಾಗಿದೆ ಎಂದು ತಿಳಿಸಿದರು.
     ಈ ಭಾಗದ ಎಲ್ಲ ಪುರಸಭೆ, ನಗರಸಭೆ, ಗ್ರಾಪಂ ಅಧಿಕಾರಿಗಳಿಗೆ ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡಲು ಸೂಚನೆ ನೀಡಿದ್ದೇನೆ. ಮುಂದಿನ ದಿನಗಳಲ್ಲಿ ಏತ ನೀರಾವರಿ ಯೋಜನೆಯಡಿ ತಾಲೂಕಿನ 66 ಕೆರೆಗಳನ್ನು ತುಂಬಿಸಲಾಗುವುದು ಎಂದು ಹೇಳಿದರು.
     ಆನೇಕಲ್ ಪುರಸಭಾ ಅಧ್ಯಕ್ಷ ಎನ್.ಎಸ್.ಪದ್ಮನಾಭ ಮಾತನಾಡಿ, ಸಿದ್ದರಾಮಯ್ಯ  ಮುಖ್ಯಮಂತ್ರಿಯಾಗಿದ್ದಾಗ ಆನೇಕಲ್ ಪುರಸಭೆಗೆ 50 ಲಕ್ಷ ರೂ. ನೀಡಿದ್ದರು. ತಾಂತ್ರಿಕ ಕಾರಣದಿಂದಾಗಿ ಹಣ ಬಳಕೆ ಆಗಿರಲಿಲ್ಲ. ಪಾರ್ಕ್ ಅಭಿವೃದ್ಧಿ ಮಾಡಿ ಪಕ್ಕದಲ್ಲೇ ಇರುವ ಕಲ್ಯಾಣಿಗೆ ನೀರು ಹರಿಯುವಂತೆ ಮಾಡಲಾಗುವುದು ಎಂದರು.
     ಪಾರ್ಕ್ ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡಿ, ಅನೈತಿಕ ಚಟುವಟಿಕೆ ತಪ್ಪಿಸಲು ಮುಂದಾದರೆ ಅದಕ್ಕೆ ಬಿಜೆಪಿ ಮುಖಂಡರು ವಿರೋಧಿಸುವುದು ಸರಿಯಲ್ಲ ಎಂದರು.
      ಕಾಂಗ್ರೆಸ್ ಟೌನ್ ಅಧ್ಯಕ್ಷ ಜಿ.ಗೋಪಾಲ್, ಆನೇಕಲ್ ಪುರಸಭಾ ಸದಸ್ಯರಾದ ಶ್ರೀನಿವಾಸ್, ಮುನಾವರ್, ರವಿಚೇತನ್, ಮಹಾಂತೇಶ್, ಕೃಷ್ಣ, ರವಿ, ಮುಖಂಡರಾದ ಸಿ.ಕೆ.ಚಿನ್ನಪ್ಪ, ರಾಜೇಂದ್ರಬಾಬು, ವಿನಯ್  ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts