More

    ಆನೆ ದಾಳಿಗೆ ಭತ್ತಲಹಳ್ಳಿ ರೈತ ಬಲಿ

    ಕಾಮಸಮುದ್ರ: ಹೋಬಳಿಯ ಗಡಿಭಾಗದಲ್ಲಿ ಕಾಡಾನೆಗಳ ಉಪಟಳ ಮುಂದುವರಿದಿದ್ದು, ಸೋಮವಾರ ರಾತ್ರಿ 10 ಗಂಟೆಯಲ್ಲಿ ಹೊಲಕ್ಕೆ ಹೋಗುತ್ತಿದ್ದ ವ್ಯಕ್ತಿಯೊಬ್ಬರು ಕಾಡಾನೆ ದಾಳಿಯಿಂದ ಮೃತಪಟ್ಟಿದ್ದಾರೆ.

    ದೋಣಿಮಡಗು ಗ್ರಾಪಂನ ಭತ್ತಲಹಳ್ಳಿಯ ವೆಂಕಟೇಶಪ್ಪ (53) ಮೃತ. ಸೋಮವಾರ ರಾತ್ರಿ ಮನೆಯಿಂದ ತೋಟದ ಮನೆಗೆ ನಡೆದುಕೊಂಡು ಹೋಗುತ್ತಿದ್ದ ಸಮಯದಲ್ಲಿ ಒಂಟಿ ಆನೆ ದಾಳಿ ಮಾಡಿದೆ. ಆನೆ ತುಳಿತಕ್ಕೆ ಸಂಪೂರ್ಣವಾಗಿ ನಜ್ಜುಗುಜ್ಜಾಗಿ ಸ್ಥಳದಲ್ಲಿಯೇ ಮೃತರಾಗಿದ್ದಾರೆ. ಕಳೆದ ಆರು ತಿಂಗಳಲ್ಲಿ ಬರೋಬ್ಬರಿ 3 ಮಂದಿಯನ್ನು ಆನೆಗಳು ಬಲಿ ಪಡೆದಿದ್ದರೂ ಅರಣ್ಯ ಇಲಾಖೆ ಅಧಿಕಾರಿಗಳು ಸುಮ್ಮನಿರುವುದು ಗ್ರಾಮಸ್ಥರನ್ನು ಕೆರಳಿಸುವಂತೆ ಮಾಡಿದೆ.

    ಎರಡು-ಮೂರು ದಿನಗಳ ಹಿಂದೆ ಕಾಳಮ್ಮನ ಗುಡಿ ಬಳಿ ರೈತ ಕೆಇಬಿ ಶ್ರೀನಿವಾಸ್ ಎಂಬುವವರ 3 ಎಕರೆಯಲ್ಲಿ ಬೆಳೆದಿದ್ದ ಆಲೂಗಡ್ಡೆ ನಾಶಗೊಳಿಸಿವೆ.

    ಅರಣ್ಯ ಇಲಾಖೆ ನಿರ್ಲಕ್ಷ್ಯದಿಂದ ಆನೆಗಳು ಎಗ್ಗಿಲ್ಲದಂತೆ ಅಡ್ಡಾಡುತ್ತಿವೆ. ಅಧಿಕಾರಿಗಳು ಸೌಜನ್ಯಕ್ಕೂ ಭೇಟಿ ನೀಡುತ್ತಿಲ್ಲ. ಪಳಗಿಸಿರುವ ಆನೆಗಳನ್ನು ಬಳಸಿಕೊಂಡು ಗಡಿಭಾಗದಲ್ಲಿ ಬೀಡುಬಿಟ್ಟಿರುವ ಕಾಡಾನೆಗಳನ್ನು ಸ್ಥಳಾಂತರ ಮಾಡಬೇಕು. ನಾಮ್ ಕೇ ವಾಸ್ತೆಗೆ ಅಶ್ರುವಾಯು ಮತ್ತು ಪಟಾಕಿ ಸಿಡಿಸುವುದನ್ನು ಬಿಟ್ಟರೆ ಆನೆ ದಾಳಿಗೆ ಶಾಶ್ವತ ಪರಿಹಾರ ಕಲ್ಪಿಸುತ್ತಿಲ್ಲ.
    ರವೀಂದ್ರ, ಪ್ರಗತಿಪರ ರೈತ, ಪೋಲೇನಹಳ್ಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts