More

    ಆನಂದಪುರ: ಚೆನ್ನಶೆಟ್ಟಿಕೊಪ್ಪದಲ್ಲಿ ಭತ್ತ ನಾಟಿ ಸಂಭ್ರಮ

    ಆನಂದಪುರ: ಹೊಸೂರು ಗ್ರಾಪಂ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಜಾನಪದ ಕಲಾವಿದರು ಸಾಕಷ್ಟು ನೆಲೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಇದನ್ನು ಜಾನಪದ ಗ್ರಾಮವನ್ನಾಗಿ ಘೋಷಿಸುವ ಅಗತ್ಯವಿದೆ ಎಂದು ಗ್ರಾಪಂ ಅಧ್ಯಕ್ಷ ಶರತ್ ನಾಗಪ್ಪ ಹೇಳಿದರು.
    ಇಲ್ಲಿಗೆ ಸಮೀಪದ ಹೊಸೂರು ಗ್ರಾಪಂ ವ್ಯಾಪ್ತಿಯ ಚೆನ್ನಶೆಟ್ಟಿಕೊಪ್ಪ ಗ್ರಾಮದ ಹುರುಳಿ ಶಿವಪ್ಪ ಅವರ ಗದ್ದೆಯಲ್ಲಿ ಆಯೋಜಿಸಿದ್ದ ಭತ್ತದ ನಾಟಿ ಸಂಭ್ರಮ ಮತ್ತು ಹಾಡು-ಹಾಸ್ಯ ಕಾರ್ಯಕ್ರಮದಲ್ಲಿ ಮಾತನಾಡಿ, ತಲೆಮಾರಿನಿಂದ ತಲೆಮಾರಿಗೆ ಬಳುವಳಿಯಾಗಿ ಬಂದ ಜಾನಪದ ಕಲೆಗಳು ಮನಸ್ಸಿಗೆ ನೆಮ್ಮದಿ ನೀಡುವ ದಿವ್ಯೌಷಧ ಎಂದರು.
    ಕರ್ನಾಟಕ ಜಾನಪದ ಪರಿಷತ್, ಕನ್ನಡ ಸಾಹಿತ್ಯ ಪರಿಷತ್, ಜಿಲ್ಲಾ ಕನ್ನಡ ಸಾಹಿತ್ಯ ವೇದಿಕೆ ಹಾಗೂ ಚನ್ಮಮ್ಮಾಜಿ ಜಾನಪದ ಕಲಾತಂಡಗಳ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಹಿರಿಯ ಜಾನಪದ ಕಲಾವಿದೆ ಗಾಮಮ್ಮ ಹೊಸಕಲ್ ಅವರನ್ನು ಗೌರವಿಸಲಾಯಿತು.
    ಕಲಾವಿದ ನಾರಾಯಣಪ್ಪ ಹುರಳಿ, ಜಾನಪದ ಪರಿಷತ್ ಅಧ್ಯಕ್ಷ ಗುಡವಿ ಸ್ವಾಮಿರಾವ್, ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಹೋಬಳಿ ಘಟಕದ ಅಧ್ಯಕ್ಷ ರಘು ಮಾಸ್ಟರ್, ಕಸಾಪ ಆನಂದಪುರ ಘಟಕದ ಅಧ್ಯಕ್ಷ ಬಿ.ಡಿ.ರವಿಕುಮಾರ್, ಜಾನಪದ ಕಲಾವಿದ ಗುಡ್ಡಪ್ಪ ಜೋಗಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts