More

    ಕಲಾವಿದರಿಗೆ ವೇದಿಕೆ ಕಲ್ಪಿಸಲು ನಿರಂತರ ಪ್ರಯತ್ನ – ಚಿಮ್ಮಡದಲ್ಲಿ ಜಾನಪದ ಕಲಾ ಸಂಭ್ರಮ

    ಚಿಮ್ಮಡ: ಜನಪದ ಕಲೆ ಮತ್ತು ಕಲಾವಿದರು ಗ್ರಾಮೀಣ ಭಾರತದ ತಾಯಿ ಬೇರುಗಳಿದ್ದಂತೆ. ಉನ್ನತ ಸಾಂಸ್ಕೃತಿಕ ಪರಂಪರೆ ಬಿಂಬಿಸುವ ಜನಪದ ಕಲೆ ಗ್ರಾಮೀಣ ಭಾರತದ ಜೀವಾಳವಾಗಿದೆ ಕನ್ನಡ ಸಾಹಿತ್ಯ ಪರಿಷತ್ ಬಾಗಲಕೋಟೆ ಜಿಲ್ಲಾಧ್ಯಕ್ಷ ಶಿವಾನಂದ ಶೆಲ್ಲಿಕೇರಿ ಹೇಳಿದರು.

    ಜಂಗಮಲಿಂಗಕ್ಷೇತ್ರ ಚಿಮ್ಮಡ ಗ್ರಾಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಬಾಗಲಕೋಟೆ ಜಿಲ್ಲಾ ಘಟಕ, ರಬಕವಿ-ಬನಹಟ್ಟಿ ತಾಲೂಕು ಘಟಕ, ತೇರದಾಳ, ಮಹಾಲಿಂಗಪುರ ವಲಯಗಳು, ಓಂ ಪ್ರಭುಲಿಂಗೇಶ್ವರ ಜಾತ್ರಾ ಮಹೋತ್ಸವ ಸಮಿತಿ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಜಾನಪದ ಕಲಾ ಸಂಭ್ರಮವನ್ನು ಡೊಳ್ಳು ಬಾರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಜನಪದ ಕಲೆ ಉಳಿಸಿ ಬೆಳೆಸಲು, ಕಲಾವಿದರಿಗೆ ಪ್ರೋತ್ಸಾಹಿಸಲು ಹಾಗೂ ಸೂಕ್ತ ವೇದಿಕೆ ಕಲ್ಪಿಸಿಕೊಡಲು ಕನ್ನಡ ಸಾಹಿತ್ಯ ಪರಿಷತ್, ಕರ್ನಾಟಕ ಜಾನಪದ ಪರಿಷತ್, ಬಯಲಾಟ ಅಕಾಡೆಮಿ ನಿರಂತರ ಪ್ರಯತ್ನಿಸುತ್ತಿವೆ. ಕಲಾವಿದರಿಗೆ ಮಠಗಳು ಆಶ್ರಯ ನೀಡುತ್ತಿವೆ. ಕಲಾವಿದರನ್ನು ಸದಾಕಾಲ ಆಶೀರ್ವದಿಸುವ ಮೂಲಕ ಚಿಮ್ಮಡ ಶ್ರೀಗಳು ಪ್ರೋತ್ಸಾಹಿಸುತ್ತಿದ್ದಾರೆ ಎಂದರು.
    ಚಿಮ್ಮಡ ವಿರಕ್ತಮಠದ ಪ್ರಭು ಸ್ವಾಮಿಗಳು ಸಾನ್ನಿಧ್ಯ ವಹಿಸಿ ಕಾಡಪ್ಪ ಬೀಳಗಿ ಸಾಹಿತ್ಯದ ಶ್ರೀ ಅಲ್ಲಮಪ್ರಭುವೇ ಧರೆಗೆ ಬಾ.. ಭಕ್ತಿಗೀತೆ ವಿಡಿಯೋ ಹಾಗೂ ಪೋಸ್ಟರ್ ಬಿಡುಗಡೆ ಮಾಡಿದರು.

    ಹಿರಿಯ ಸಾಹಿತಿ ಗುರುನಾಥ ಸುತಾರ ಹುಲ್ಯಾಳ, ಮಹಾದೇವ ಹೆರಕಲ್ಲ, ಪತ್ರಕರ್ತ ಇಲಾಹಿ ಜಮಖಂಡಿ ವೇದಿಕೆಯಲ್ಲಿದ್ದರು.

    ಹಿರಿಯ ಕಲಾವಿದ ನಾವಲಗಿಯ ಮಲ್ಲಪ್ಪ ಗಣಿ ಪ್ರಾರ್ಥಿಸಿದರು. ಕಸಾಪ ತಾಲೂಕು ಅಧ್ಯಕ್ಷ ಮ.ಕೃ.ಮೇಗಾಡಿ ಸ್ವಾಗತಿಸಿದರು. ಮಹಾಲಿಂಗ ತೆಳಗಿನಮನಿ ವಂದಿಸಿದರು.

    ಓಂ ಪ್ರಭುಲಿಂಗೇಶ್ವರ ಕಿಚಡಿ ಜಾತ್ರೆ ಅಂಗವಾಗಿ ಹಮ್ಮಿಕೊಂಡಿದ್ದ ಜಾನಪದ ಕಲಾ ಸಂಭ್ರಮದಲ್ಲಿ ಅನೇಕ ಕಲಾವಿದರು ತಮ್ಮ ಕಲಾಪ್ರದರ್ಶನ ನೀಡಿದರು. ಭೀಮಪ್ಪ ಕೆಸರಗೊಪ್ಪ ಜನಪದ ಗೀತೆ, ಢವಳೇಶ್ವರದ ಮಹಾನಂದಾ ಹಿರೇಮಠ ಸೋಬಾನ ಪದ, ನಾವಲಗಿಯ ಸೋಮಯ್ಯ ಹಿರೇಮಠ , ಅಕ್ಕಮಹಾದೇವಿ ಭಜನಾ ಮಂಡಳಿ, ರಬಕವಿಯ ಲಕ್ಷ್ಮೀ ಭಜನಾ ಮಂಡಳಿ, ಮಹಾದೇವ ಸಂಬಾಳ, ಪ್ರಭುಲಿಂಗ ಭಜನಾ ಮಂಡಳಿ, ಈರಪ್ಪ ಮನ್ಮಿ ತಂಡದವರಿಂದ ಭಕ್ತಿಗೀತೆ, ಚಿಮ್ಮಡದ ಕರಿಸಿದ್ದೇಶ್ವರ ಗಾಯನ ಸಂಘ, ರುದ್ರಪ್ಪ ಪೂಜಾರಿ ಗಾಯನ ಸಂಘ, ವಿಠಲ ಮೇಳದವರಿಂದ ಡೊಳ್ಳಿನ ಪದಗಳು, ನಾವಲಗಿಯ ಮಲ್ಲಪ್ಪ ಕಂಚು, ಪ್ರಭುಲಿಂಗ ಭಜನಾ ಮಂಡಳಿ, ಧರೆಪ್ಪ ಚಿಮ್ಮಡ ಅವರಿಂದ ಭಕ್ತಿಗೀತೆ, ರಾಮದುರ್ಗ ತಾಲೂಕು ಸಾಲಹಳ್ಳಿ ರೇವಣಸಿದ್ದೇಶ್ವರ ಡೊಳ್ಳಿನ ಮೇಳದವರಿಂದ ಡೊಳ್ಳಿನ ಪದಗಳು, ಕಾಡಪ್ಪ ಬೀಳಗಿ ಭಕ್ತಿಗೀತೆ, ಮಳಲಿಯ ಲಕ್ಕವ್ವ ಹೂಗಾರ ಭಜನಾಪದ, ಡವಳೇಶ್ವರದ ಸ್ತ್ರೀಶಕ್ತಿ ಸಂಘದಿಂದ ಬೀಸುವಕಲ್ಲಿನ ಪದ, ಜಗದಾಳದ ಸದಾಶಿವ ಸಿದ್ದಗೋನ, ಹಾರೂಗೇರಿಯ ಶಿವರಾಯ ಮೇಲಾಪುರೆ, ತೇರದಾಳದ ಪ್ರಭುಲಿಂಗೇಶ್ವರ ಭಜನಾ ಮಂಡಳಿ ಅವರಿಂದ ಭಜನೆ, ವಿಜಯಪುರದ ಶೇಖರ ಸಲಬಣ್ಣವರ, ರೇಖಾ ಬಿರಾದಾರ ಸುಗಮ ಸಂಗೀತ ನಡೆಸಿಕೊಟ್ಟರು. ಎಲ್ಲ ಕಲಾವಿದರಿಗೆ ಪ್ರಭು ಸ್ವಾಮಿಗಳು ಪ್ರಮಾಣ ಪತ್ರಗಳನ್ನು ವಿತರಿಸಿದರು .

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts