More

    ಆದೇಶ ಹಿಂಪಡೆಯಲು ಒತ್ತಾಯ

    ಹುಕ್ಕೇರಿ: ಜೈನರ ಪವಿತ್ರ ಸ್ಥಳವಾದ ಜಾರ್ಖಂಡದ ಸಮ್ಮೇದ ಶಿಖರಜಿಯನ್ನು ಪ್ರವಾಸಿ ತಾಣವೆಂದು ಅಲ್ಲಿನ ಸರ್ಕಾರ ಘೋಷಿಸಿರುವ ಆದೇಶವನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿ ಹುಕ್ಕೇರಿ ತಾಲೂಕು ಜೈನ ಸಮುದಾಯದವರು ಮಂಗಳವಾರ ತಹಸೀಲ್ದಾರ್​ ಎನ್​.ಆರ್​.ಪಾಟೀಲ ಅವರಿಗೆ ಮನವಿ ಸಲ್ಲಿಸಿದರು.

    ತಾಲೂಕು ಜೈನ ಅಸೋಸಿಯೇಷನ್​ ಟಕ ಮತ್ತು ತಾಲೂಕಿನ ವಿವಿಧ ಗ್ರಾಮಗಳ ಸಾವಿರಾರು ಜೈನ ಶ್ರಾವಕ, ಶ್ರಾವಕಿಯರು ಕೋರ್ಟ್​ ವೃತ್ತದಲ್ಲಿ ಮಾನ ಸರಪಳಿ ನಿರ್ಮಿಸಿ ಜಾರ್ಖಂಡ್​ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತ ಪಡಿಸಿದರು.

    ಮಹಾವೀರ ಉದ್ಯೋಗ ಸಮೂಹ ಸಂಸ್ಥೆ ಅಧ್ಯಕ್ಷ ಮಹಾವೀರ ನಿಲಜಗಿ, ಹಿರಿಯ ವಕೀಲ ಪಿ.ಆರ್​.ಚೌಗಲಾ, ಎಸ್​.ಟಿ.ಮುನ್ನೋಳಿ, ಶ್ರೀಧರ ಖತಗಲ್ಲಿ, ಪಪ್ಪುಗೌಡ ಪಾಟೀಲ, ಪ್ರಿಯಾ ಖತಗಲ್ಲಿ, ಅವ್ವಕ್ಕ ಖೇಮಲಾಪುರೆ ಮಾತನಾಡಿ, ಜೈನ ಸಮುದಾಯದ 26 ಜೈನ ತೀರ್ಥಂಕರರಲ್ಲಿ 20 ತೀರ್ಥಂಕರರು ಮೋಕ್ಷ ಹೊಂದಿದ ಪವಿತ್ರ ಧಾರ್ಮಿಕ ೇತ್ರ. ಈ ಸ್ಥಳ ಜೈನರು ಪವಿತ್ರ ಹಾಗೂ ಶ್ರದ್ಧಾ ಭಕ್ತಿಯ ಕೇಂದ್ರವಾಗಿದೆ. ಅದನ್ನು ಪ್ರವಾಸಿ ತಾಣವಾಗಿ ಮಾಡಿದಲ್ಲಿ ಬರುವ ಪ್ರವಾಸಿಗರಿಂದ ಮೋಜು, ಮಸ್ತಿಯಿಂದ ಪ್ರಸಿದ್ಧ ಧಾರ್ಮಿಕ ೇತ್ರ ಹಾಳಾಗುತ್ತದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.

    ಪುಂಡ&ಪೋಕರಿಗಳು ಮತ್ತು ಕುಡುಕರಿಂದ ಇಂತಹ ಪವಿತ್ರ ಸ್ಥಳಕ್ಕೆ ಧಕ್ಕೆಯಾಗುತ್ತದೆ. ಕಾರಣ, ತಕ್ಷಣ ಜಾರ್ಖಂಡ್​ ಸರ್ಕಾರ ೂಷಿಸಿದ ಪ್ರವಾಸಿ ತಾಣದ ಆದೇಶ ರದ್ದುಗೊಳಿಸಬೇಕು. ಇಲ್ಲವಾದರೆ ದೇಶಾದ್ಯಂತ ಉಗ್ರ ಹೋರಾಟ ಅನಿವಾರ್ಯವೆಂದು ಎಚ್ಚರಿಸಿದರು. ರೋಹಿತ ಚೌಗಲಾ, ಬಾಹುಬಲಿ ಸೊಲ್ಲಾಪುರೆ, ಸಂಜಯ ಅಡಕೆ, ಬಿ.ಬಿ.ಕಂಠಿ, ಡಾ.ಎಂ.ಎಸ್​.ಮುನ್ನೋಳಿ, ಪ್ರಕಾಶ ಚೌಗಲಾ, ಸಿ.ಪಿ.ಪಾಟೀಲ, ಸಂಜಯ ನಿಲಜಗಿ, ಪಾರೇಶ ಮಲಾಜ, ಸಿ.ಡಿ.ಪಾಟೀಲ, ಸಂಜೀವ ಮಗದುಮ್ಮ, ವಿಫುಲ ಬಾಳಿಕಾಯಿ, ವಿದ್ಯಾಧರ ಹರಾರೆ, ಸುದರ್ಶನ ಜಾಬಣ್ಣವರ, ಅಶೋಕ ರಂಗೋಳಿ, ಮಹಾವೀರ ಬಾಗಿ, ಸುಜಾತಾ ಖಾನಾಪುರೆ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts