More

    ಆದಿನಾಥ ಸಂಸ್ಥೆಗೆ 1.52 ಕೋಟಿ ರೂ.ಲಾಭ

    ಬೆಳಗಾವಿ: ಆದಿನಾಥ ಅಲ್ಪ ಸಂಖ್ಯಾತರ ಕ್ರೆಡಿಟ್ ಸೌಹಾರ್ದ ಸಹಕಾರಿ ನಿ.ಸಂಸ್ಥೆಗೆ 2020-21ನೇ ಸಾಲಿನಲ್ಲಿ 1,52,36,833 ರೂ. ಲಾಭವಾಗಿದೆ ಎಂದು ಸಂಸ್ಥೆ ಚೇರ್ಮನ್ ಅಶೋಕ ಬೆಂಢಿಗೇರಿ ಹೇಳಿದರು.

    ನಗರದಲ್ಲಿ ಈಚೆಗೆ ಏರ್ಪಡಿಸಿದ್ದ ಸಂಸ್ಥೆಯ ವಾರ್ಷಿಕ ಸರ್ವ ಸಾಧಾರಣ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಂಸ್ಥೆಯಲ್ಲಿ 825 ಸದಸ್ಯರಿದ್ದು, 25,57,300 ಷೇರು ಬಂಡವಾಳ ಹೊಂದಿದೆ. ವಿವಿಧ ಠೇವು ಯೋಜನೆಗಳಡಿ ಒಟ್ಟು 71.39 ಕೋಟಿ ರೂ. ಠೇವಣಿ ಹೊಂದಿದ್ದು, ಸಾಲ ಮತ್ತು ಮುಂಗಡವಾಗಿ ಒಟ್ಟು 57.64 ಕೋಟಿ ರೂ.
    ನೀಡಲಾಗಿದೆ ಎಂದರು.

    ಸಂಸ್ಥೆಯು ಸೇಫ್ ಲಾಕರ್ ಸೇರಿ ಇನ್ನಿತರ ಎಲ್ಲ ಸೌಕರ್ಯ ಹೊಂದಿದ್ದು, ಸಂಸ್ಥೆಯ ಗ್ರಾಹಕರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ಎಲ್ಲ ರೀತಿಯ ವ್ಯವಹಾರ ನಡೆಸಲಾಗುತ್ತಿದೆ. ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಶೇ.90 ಮೇಲ್ಪಟ್ಟು ಅಂಕ ಗಳಿಸಿದ ಸಂಸ್ಥೆಯ ಸದಸ್ಯರ ಮಕ್ಕಳಗಳಿಗೆ ಬಹುಮಾನ ನೀಡಲಾಗುತ್ತಿದೆ ಎಂದರು.

    ಉಪಾಧ್ಯಕ್ಷ ಪ್ರಮೋದ ಪಾಟೀಲ, ನಿರ್ದೇಶಕ ಪ್ರಕಾಶ ಉಪಾಧ್ಯೆ, ಪುಷ್ಪಕ ಹನುಮಣ್ಣವರ, ರಾಜೇಂದ್ರ ಹನಮಣ್ಣವರ, ಧನಪಾಲ ಪಾಟೀಲ, ಶ್ರೀಧರ ಭೆಂಡಿಗೇರಿ, ಸಂಜೀವ ಕಡೆಮನಿ, ಅನಿತಾ ಜಕ್ಕಣ್ಣವರ, ರಾಖಿ ಪೂಜಾರಿ, ಸಲಹಾ ಸಮಿತಿ ಸದಸ್ಯರಾದ ಸುಭಾಷ ಜೈನರ, ಮಹಾವೀರ ಉಪಾಧ್ಯೆ, ಸುಧೀರ ಬೆಂಢಿಗೇರಿ, ಅಭಯಕುಮಾರ ಪಾಟೀಲ ಇದ್ದರು. ಕಾರ್ಯದರ್ಶಿ ಜಿತೇಂದ್ರ ಉಪಾಧ್ಯೆ ಸ್ವಾಗತಿಸಿದರು. ಕಿರಣ ಶಹಾ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts