More

    ಆತ್ಮಹತ್ಯೆ ಮಾಡಿಕೊಂಡ ಸೋಂಕಿತನ ಅಜ್ಜಿ

    ದಾಂಡೇಲಿ: ಕರೊನಾ ಸೋಂಕಿತನ ಅಜ್ಜಿ ದಾಂಡೇಲಿ ಸರ್ಕಾರಿ ಆಸ್ಪತ್ರೆಯ ಐಸೋಲೇಶನ್ ವಾರ್ಡ್​ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಶುಕ್ರವಾರ ನಡೆದಿದೆ.

    ಹಳೇ ದಾಂಡೇಲಿ ಕಾಳಿ ಓಣಿಯ ಲಕ್ಷ್ಮೀ ಶಿವಪ್ಪ ಲಮಾಣಿ(62)ಮೃತ ಪಟ್ಟವರು. 24 ವರ್ಷದ ಲಾರಿ ಚಾಲಕನಿಗೆ ಕರೊನಾ ಸೋಂಕು ಇರುವುದು ಮೇ 19 ರಂದು ಖಚಿತವಾಗಿತ್ತು. ಆತನ ನೇರ ಸಂಪರ್ಕಕ್ಕೆ ಬಂದ ಮನೆಯವರು ಹಾಗೂ ಸಂಬಂಧಿಕರು ಸೇರಿ ಒಟ್ಟು 23 ಜನರನ್ನು ಅಂದೇ ದಾಂಡೇಲಿ ಆಸ್ಪತ್ರೆಯ ಐಸೋಲೇಶನ್ ವಾರ್ಡ್​ನಲ್ಲಿ ಇಡಲಾಗಿತ್ತು. ಗಂಟಲ ದ್ರವದ ಮಾದರಿಗಳನ್ನು ಪರಿಶೀಲನೆಗೆ ಕಳಿಸಲಾಗಿತ್ತು. ಇದರಿಂದ ಆತಂಕಗೊಂಡಿದ್ದ ಅಜ್ಜಿ ಶುಕ್ರವಾರ ಬೆಳಗಿನ ಜಾವ ಆಸ್ಪತ್ರೆಯ ಕಿಟಕಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ದಾಂಡೇಲಿ ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    86 ಜನರ ಕ್ವಾರಂಟೈನ್: ದಾಂಡೇಲಿ ವೆಸ್ಟ್​ಕೋಸ್ಟ್ ಕಾಗದ ಕಾರ್ಖಾನೆಯಿಂದ ಕಾಗದ ತುಂಬಿಕೊಂಡು ಗುಜರಾತ್​ಗೆ ತೆರಳಿದ್ದ ವ್ಯಕ್ತಿ ಅಲ್ಲಿಂದ ಮಂಗಳೂರು, ಮಣಿಪಾಲ, ಗೋವಾಕ್ಕೆ ತೆರಳಿದ್ದ. ಗೋವಾದಲ್ಲಿ ಕಬ್ಬಿಣ ತುಂಬಿಕೊಂಡು ಮೇ 10 ರಂದು ಹಳಿಯಾಳಕ್ಕೆ ಬಂದು ಕೆಎಚ್​ಬಿ ಕಾಲನಿಯ ಸ್ನೇಹಿತನ ಮನೆಯಲ್ಲಿ ರಾತ್ರಿ ಉಳಿದಿದ್ದ. ಮೇ 11 ರಂದು ಹಳಿಯಾಳ ಪಟ್ಟಣದ ಹಾರ್ಡ್​ವೇರ್ ಅಂಗಡಿಗೆ ಹೋಗಿ ಕಬ್ಬಿಣ ಖಾಲಿ ಮಾಡಿದ್ದ. ಸ್ನೇಹಿತ ಬೈಕ್ ಮೇಲೆ ಸುತ್ತಾಡಿ ದಾಂಡೇಲಿಗೆ ಮರಳಿದ್ದ. ದಾಂಡೇಲಿಯ ವಿವಿಧೆಡೆ ಸುತ್ತಾಡಿದ್ದ. ಆದರೆ, ಸ್ವಯಂಪ್ರೇರಿತವಾಗಿ ಕ್ವಾರಂಟೈನ್​ಗೆ ಒಳಗಾಗಿರಲಿಲ್ಲ. ನಾಲ್ಕು ದಿನದ ನಂತರ ಮಾಹಿತಿ ಪಡೆದ ಆರೋಗ್ಯ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ಆತನನ್ನು ಕ್ವಾರಂಟೈನ್​ಗೆ ಒಳಪಡಿಸಿ, ಮೇ 15 ರಂದು ಗಂಟಲ ದ್ರವದ ಮಾದರಿ ಪರಿಶೀಲನೆಗೆ ಕಳಿಸಿದ್ದರು. ಆತನಲ್ಲಿ ಸೋಂಕು ಇರುವುದು ಖಚಿತವಾಗಿತ್ತು. ಆತನ ಪ್ರಥಮ ಹಾಗೂ ದ್ವಿತೀಯ ಸಂಪರ್ಕಕ್ಕೆ ಬಂದ ಒಟ್ಟು 86 ಜನರ ಮೇಲೆ ಅಧಿಕಾರಿಗಳು ನಿಗಾ ಇರಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts