More

    ಆಡೂರ ಗ್ರಾಮದ ಸುತ್ತಮುತ್ತ ತೀವ್ರ ನಿಗಾ

    ಅಕ್ಕಿಆಲೂರ: ವಿಜಯಪುರ ಜಿಲ್ಲೆಯ ಇಬ್ಬರು ವ್ಯಕ್ತಿಗಳ ಸಂಪರ್ಕದಲ್ಲಿದ್ದ 21 ಜನರನ್ನು ಕ್ವಾರಂಟೈನ್​ಗೆ ಪಡೆದ ಬೆನ್ನಲ್ಲೇ ಆಡೂರ ಗ್ರಾಮಕ್ಕೆ ಸೋಮವಾರ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.

    ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಯೋಗೇಶ, ಜಿಪಂ ಮುಖ್ಯಕಾರ್ಯನಿವಾರ್ಹಕ ಅಧಿಕಾರಿ ರಮೇಶ ದೇಸಾಯಿ, , ಡಿಎಚ್​ಒ ಡಾ. ರಾಜೇಂದ್ರ ದೊಡ್ಡಮನಿ, ಹೆಚ್ಚುವರಿಗೆ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಸವಣೂರ ಉಪವಿಭಾಗಾಧಿಕಾರಿ ಅನ್ನಪೂರ್ಣ ಮುದಕಮ್ಮನವರ, ತಹಸೀಲ್ದಾರ್ ಪಿ. ಎಸ್. ಏರಿಸ್ವಾಮಿ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಚನ್ನಪ್ಪ ರಾಯಣ್ಣನವರ, ಡಿವೈಎಸ್ಪಿ ಕಲ್ಲೇಶಪ್ಪ ಒ.ಬಿ., ಪಿಎಸ್​ಐಗಳಾದ ಬಿ.ಎನ್. ಮಂಜುನಾಥ, ಎನ್.ಎಚ್. ಆಂಜನೇಯ, ಪಿಡಿಒ ಮಂಜುಳಾ, ಗ್ರಾಮಲೆಕ್ಕಾಧಿಕಾರಿ ರಾಜಶೇಖರ ಎಚ್. ನೇತೃತ್ವದಲ್ಲಿ ಹತ್ತಾರು ಅಧಿಕಾರಿಗಳು, ಆಡೂರ ಗ್ರಾಪಂ ಆವರಣ, ಗ್ರಾಮದ ಶಾಲೆಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಪರಿಶೀಲಿಸಿದರು.

    21 ಜನರು ವಾಸವಿದ್ದ ಎರಡು ಮನೆಗಳ ಸುತ್ತಲಿನ ವಾತಾವರಣ ಪರಿಶೀಲಿಸಿ, ಕೈಗೊಳ್ಳಬೇಕಾದ ಕ್ರಮಗಳ ಕುರಿತು ಮಾತುಕತೆ ನಡೆಸಿದರು. ಶಿರಸಿ-ಹಾವೇರಿ ರಾಜ್ಯ ಹೆದ್ದಾರಿಯಲ್ಲಿ ಅನವಶ್ಯಕವಾಗಿ ಸಂಚರಿಸುವರ ವಿರುದ್ಧ ಕ್ರಮ ಕೈಗೊಳ್ಳುವುದು, ಅಗತ್ಯ ಚೆಕ್ ಪೋಸ್ಟ್ ನಿರ್ವಿುಸುವ ಕುರಿತು ಅಧಿಕಾರಿಗಳು ರ್ಚಚಿಸಿದರು.

    ಜಿಪಂ ಸಿಇಒ ರಮೇಶ ದೇಸಾಯಿ ಮಾತನಾಡಿ, ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಭೆ ನಡೆಯಲಿದೆ. ಶೀಘ್ರವೇ ಗ್ರಾಪಂ ಸಿಬ್ಬಂದಿಗೆ ಮಾಸ್ಕ್, ಆರೋಗ್ಯ ಕಿಟ್ ನೀಡಲಾಗುವುದು ಎಂದು ಹೇಳಿದರು.

    ಆಡೂರ ಗ್ರಾಮದ 7 ಕಿಲೋ ಮೀಟರ್ ಸುತ್ತಲಿನ ಗ್ರಾಮಗಳ ಮೇಲೆ ತೀವ್ರ ನಿಗಾ ವಹಿಸಲಾಗಿದೆ. ಈ ಪ್ರದೇಶದಲ್ಲಿ ರೆಡ್ ಅಲರ್ಟ್ ಎಂದು ಘೊಷಿಸಿ, ಆಡೂರಿನಿಂದ ಸಂಪರ್ಕ ಹೊಂದುವ ಬಾಳಂಬೀಡ, ಕಂಚಿನೆಗಳೂರ, ಶಂಕ್ರಿಕೊಪ್ಪ, ಕೊಡ್ಡಿಯಲ್ಲಾಪುರ, ತುಮರಿಕೊಪ್ಪ ಗ್ರಾಮದ ಮಧ್ಯ ಚೆಕ್ ಪೋಸ್ಟ್ ನಿರ್ವಿುಸುವ ಕುರಿತು, ಸಾರ್ವಜನಿಕರಿಗೆ ಅಗತ್ಯ ಸಾಮಗ್ರಿಗಳ ವಿತರಣೆ, ಆರೋಗ್ಯ ಕೇಂದ್ರ ಸ್ಥಾಪನೆ ಕುರಿತು ರ್ಚಚಿಸಲಾಗಿದ್ದು, ಮುಂದಿನ ಕ್ರಮಕೈಗೊಳ್ಳಲಾಗುವುದು. | ಪಿ.ಎಸ್. ಏರಿಸ್ವಾಮಿ, ತಹಸೀಲ್ದಾರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts