More

    ಆಡು ಮಲ್ಲೇಶ್ವರ ಮೃಗಾಲಯ ಅಭಿವೃದ್ಧಿಗೆ ಪ್ಲಾೃನ್

    ವಿಜಯವಾಣಿ ವಿಶೇಷ, ಚಿತ್ರದುರ್ಗ: ನಗರದ ಹೊರವಲಯದ ಜೋಗಿಮಟ್ಟಿ ವನ್ಯಜೀವಿಧಾಮಕ್ಕೆ ಹೊಂದಿಕೊಂಡಿರುವ 21 ಎಕರೆ ವಿಸ್ತೀರ್ಣದ ಆಡುಮಲ್ಲೇಶ್ವರ ಕಿರು ಮೃಗಾಲಯವನ್ನು 22 ಕೋಟಿ ರೂ. ಕೆಎಂಇಆರ್‌ಸಿ ಅನುದಾನದೊಂದಿಗೆ ಅಭಿವೃದ್ಧಿ ಪಡಿಸಲು ಅರಣ್ಯ ಇಲಾಖೆ ಯೋಜಿಸಿದೆ.
    ಇದಕ್ಕಾಗಿ ಕೇಂದ್ರ ಮೃಗಾಲಯ ಪ್ರಾಧಿಕಾರ ಹಾಗೂ ಕರ್ನಾಟಕ ಮೃಗಾಲಯ ಪ್ರಾಧಿಕಾರಕ್ಕೆ ಇಲಾಖೆ ಈಗಾಗಲೇ ಮಾಸ್ಟರ್‌ಪ್ಲಾೃನ್
    ಸಲ್ಲಿಸಿದೆ. ಅದಕ್ಕೆ ಒಪ್ಪಿಗೆ ಸಿಗುತ್ತಿದ್ದಂತೆ ಅನುದಾನ ಬಿಡುಗಡೆ ನಿರೀಕ್ಷೆಯೊಂದಿಗೆ ವಿವಿಧ ಅಭಿವೃದ್ಧಿ ಕೆಲಸಗಳಿಗೆ ಚಾಲನೆ ನೀಡಲು ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ.
    ವಾಹನ ನಿಲ್ದಾಣದ ಅಭಿವೃದ್ಧಿ, ರೆಸ್ಟೋರೆಂಟ್, ಮೊಸಳೆ, ಹಾವು, ಮಂಗನ ಮನೆಗಳು, ಮೃಗಾಲಯದ ಸುತ್ತವಿರುವ ಫೆನ್ಸಿಂಗ್ ಅನ್ನು 18 ಅಡಿಗೆ ಎತ್ತರಿಸುವುದು, ಸಿಸಿ ರೋಡ್ ನಿರ್ಮಾಣ, ಆಂಪಿಥಿಯೇಟರ್ ಮೊದಲಾದ ಅಭಿವೃದ್ಧಿ ಕೆಲಸಗಳನ್ನು ಕೈಗೆತ್ತಿಕೊಳ್ಳಲು ಉದ್ದೇಶಿಸಲಾಗಿದೆ.
    ಈಗಿರುವ ಹೊಸ 3 ಪಕ್ಷಿ ಮನೆಗಳೊಂದಿಗೆ, ಮೃಗಾಲಯದಲ್ಲಿ ಮತ್ತೆ 9 ಪಕ್ಷಿ ಮನೆಗಳ ನಿರ್ಮಾಣ ಕಾರ‌್ಯವೂ ಪ್ರಗತಿಯಲ್ಲಿದೆ. ಈ ಮನೆಗಳ ನಿರ್ಮಾಣ ಪೂರ್ಣವಾದರೆ ಇಲ್ಲಿ ವಿವಿಧ ಪಕ್ಷಿಗಳ ಕಲರವ ಇನ್ನಷ್ಟು ಜೋರಾಗಲಿದೆ. ಸಿಲ್ವರ್‌ಪೆಸೆಂಟ್, ಯಲ್ಲೋ ಗೋಲ್ಡ್, ಬಡ್ಜರಿಗರ್, ಮಿಲಿಟರಿ ಮಕಾವ್, ಗ್ರೀನ್‌ವಿಂಗ್ಸ್, ಎಮು ಸೇರಿ 250 ಕ್ಕೂ ಹೆಚ್ಚು ವಿವಿಧ ಪಕ್ಷಿಗಳಿಗೆ ಹಾಗೂ ಒಂದು ಜೋಡಿ ಜೀಬ್ರಾಕ್ಕೆ ಬೇಡಿಕೆ ಪತ್ರ ಸಲ್ಲಿಸಲಾಗಿದೆ.
    ಬೇಸಿಗೆ ತಾಪ ಎದುರಿಸಲು ಪ್ಲಾೃನ್
    ಕರಡಿ, ಹುಲಿ, ಚಿರತೆ ಹಾಗೂ ಪಕ್ಷಿಗಳಿಗೆ ಬೇಸಿಗೆ ಬಿಸಿ ತಟ್ಟದಂತೆ, ಅವುಗಳಿರುವ ಸ್ಥಳದಲ್ಲಿ ಸ್ಪ್ರಿಂಕ್ಲರ್ ಅಳವಡಿಸಲಾಗುತ್ತಿದೆ. ಕರಡಿ, ಹುಲಿ ಮನೆಗಳಿಗೆ ನೀರು ಸಿಂಪರಣೆ ವ್ಯವಸ್ಥೆ ಕಲ್ಪಿಸಲಾಗಿದೆ.
    ಹೆಚ್ಚಿದ ಆದಾಯ:
    ಮೃಗಾಲಯದ ಆದಾಯ ಇತ್ತೀಚಿನ ವರ್ಷಗಳಲ್ಲಿ ಏರಿಕೆಯಾಗುತ್ತಿದೆ. 2021-22 ನೇ ಸಾಲಿನಲ್ಲಿ ಅಂದಾಜು 25 ಲಕ್ಷ ರೂ., 2021-22ನೇ ಸಾಲಿನಲ್ಲಿ 40 ಲಕ್ಷ ರೂ.ಗಳಿದ್ದ ಆದಾಯ ಪ್ರಸ್ತುತ ಹಣಕಾಸು ಸಾಲಿನ ಅಕ್ಟೋಬರ್ ಅಂತ್ಯದವರೆಗೆ ಅಂದಾಜು 65 ಲಕ್ಷ ರೂ.(ದತ್ತು, ದೇಣಿಗೆ ಮೊತ್ತ ಸೇರಿ)ಗೆ ಏರಿಕೆಯಾಗಿದ್ದು, 2024 ಮಾರ್ಚ್ ಅಂತ್ಯಕ್ಕೆ 85 ಲಕ್ಷ ರೂ.ಆದಾಯ ನಿರೀಕ್ಷಿಸಲಾಗಿದೆ.
    ಮೃಗಾಲಯ ಮೇಲ್ದರ್ಜೆಗೆ?
    ಈಗಿರುವ ವಿಸ್ತೀರ್ಣದೊಂದಿಗೆ ಇನ್ನೂ 80 ಎಕರೆಗೆ ವಿಸ್ತರಿಸುವುದರ ಮೂಲಕ ಸಣ್ಣ ಮೃಗಾಲಯವನ್ನಾಗಿ ಮೇಲ್ದರ್ಜೆಗೆ ಏರಿಸುವ ಚಿಂತನೆ ಇಲಾಖೆಯಲ್ಲಿದೆ. ಇದು ಕೈಗೂಡಿದರೆ ಮೃಗಾಲಯಕ್ಕೆ ಸಿಂಹ, ಜಿರಾಫೆ, ನೀರಾನೆ ಮೊದಲಾದ ಪ್ರಾಣಿಗಳನ್ನು ತರಲು ಸಾಧ್ಯ ವಾಗಲಿದೆ.


    ಕೋಟ್
    ಕೆಎಂಇಆರ್‌ಸಿ ಅನುದಾನ 22 ಕೋಟಿ ರೂ.ವೆಚ್ಚದಲ್ಲಿ ಮೃಗಾಲಯದ ಅಭಿವೃದ್ಧಿಗೆ ಯೋಜಿಸಲಾಗಿದೆ. ಮಾಸ್ಟರ್‌ಪ್ಲಾೃನ್‌ಗೆ ಅನು ಮೋದನೆ ದೊರೆತರೆ ಅನುದಾನ ಬಿಡುಗಡೆಯಾಗಲಿದೆ. ಭವಿಷ್ಯದಲ್ಲಿ ವಿಸ್ತೀರ್ಣ ಹೆಚ್ಚಿಸುವ ಮೂಲಕ ಮೃಗಾಲಯವನ್ನು ಮೇಲ್ದರ್ಜೆಗೆ ಏರಿಸುವ ಉದ್ದೇಶವಿದೆ.
    ಟಿ.ರಾಜಣ್ಣ, ಡಿಸಿಎಫ್, ಚಿತ್ರದುರ್ಗ(ಸಿಟಿಡಿ 28 ಟಿ.ರಾಜಣ್ಣ)



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts