More

    ಆಟಿಕೆ ಆಸೆ ತೋರಿಸಿ ಮಕ್ಕಳ ಅಪಹರಣಕ್ಕೆ ಯತ್ನ? : ಮೂವರನ್ನು ಪೊಲೀಸರ ವಶಕ್ಕೆ ಒಪ್ಪಿಸಿದ ಪಾಲಕರು, ಇಬ್ಬರು ಪರಾರಿ

    ಕೋಲಾರ :  ಮಕ್ಕಳಿಗೆ ಆಟಿಕೆ ಆಸೆ ತೋರಿಸಿ ಅಪಹರಣಕ್ಕೆ ಯತ್ನಿಸಿರುವ ಟನೆ ನಗರದ ರಹಮತ್ ನಗರದಲ್ಲಿ ಬುಧವಾರ ನಡೆದಿದ್ದು ಪಾಲಕರ ದೂರಿನ ಮೇಲೆ ಪೊಲೀಸರು 6 ಮಕ್ಕಳನ್ನು ರಕ್ಷಣೆ ವಾಡಿ ಮೂವರು ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

    ಕಾರೊಂದರಲ್ಲಿ ಮಕ್ಕಳ ಆಟಿಕೆಗಳು, ಗಹೋಪಯೋಗಿ ವಸ್ತುಗಳನ್ನು ತುಂಬಿಕೊಂಡು ಲಕ್ಕಿ ಡಿಪ್ ಯೋಜನೆಯಡಿ ವಾರಲು ಬಂದಿದ್ದ 5 ಜನರ ತಂಡ ಆಟಿಕೆ ನೋಡಲು ಬರುವ ಮಕ್ಕಳನ್ನು ನಯ, ವಿನಯದಿಂದ ವಾತನಾಡಿಸಿ ಕಾರಿನಲ್ಲಿ ಕೂರಿಸಿಕೊಂಡು ಅಪಹರಣಕ್ಕೆ ಮುಂದಾಗಿದ್ದರು ಎನ್ನಲಾಗಿದೆ.

    ಅಪರಿಚಿತ ವಾಹನದಲ್ಲಿ ಮಕ್ಕಳು ಇರುವುದನ್ನು ಗಮನಿಸಿದ ಕೆಲವರು ಪಾಲಕರಿಗೆ ತಿಳಿಸಿದ್ದಾರೆ. ಇದರಿಂದ ಆಕ್ರೋಶಗೊಂಡ ಪಾಲಕರು ಮತ್ತು ರಹಮತ್ ನಗರದ ಸುತ್ತಮುತ್ತಲ ಪ್ರದೇಶದ ಜನ ಆರಹಳ್ಳಿ ರಸ್ತೆಯಲ್ಲಿ ವಾಹನ ತಡೆದು ಮಕ್ಕಳನ್ನು ಕರೆದೊಯ್ಯುತ್ತಿರುವ ಬಗ್ಗೆ ಕೇಳಿದಾಗ ತಡಬಡಿಸಿದ್ದರಿಂದ ಅನುವಾನಗೊಂಡು ಶಂಕಿತರನ್ನು ಹಿಡಿಯಲು ಮುಂದಾದಾಗ ಐವರಲ್ಲಿ ಇಬ್ಬರು ತಪ್ಪಿಸಿಕೊಂಡಿದ್ದು, ಮೂವರನ್ನು ಗಲ್‌ಪೇಟೆ ಪೊಲೀಸರಿಗೆ ಒಪ್ಪಿಸಿದ್ದಾರೆ.
    ಪಾಲಕರ ದೂರಿನ ಮೇರೆಗೆ ಗಲ್‌ಪೇಟೆ ಪೊಲೀಸರು ಮಹಿಳಾ ಠಾಣೆಗೆ ಪ್ರಕರಣ ವರ್ಗಾಯಿಸಿದ್ದಾರೆ. ರಕ್ಷಿಸಿರುವ ಹೆಣ್ಣು ಮಕ್ಕಳಿಂದ ವಾಹಿತಿ ಕಲೆ ಹಾಕಿರುವ ಪೊಲೀಸರು ನ್ಯಾಯಾಲಯದ ಆದೇಶದಂತೆ ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಿಸುವವರೆಗೂ ಹೆಸರು ಬಹಿರಂಗಪಡಿಸಲಾಗದು ಎಂದು ಪತ್ರಕರ್ತರಿಗೆ ತಿಳಿಸಿದ್ದಾರೆ

     

     

    ನಮ್ಮ ಏರಿಯಾಕ್ಕೆ ಅನೇಕರು ತರಕಾರಿ, ಹಣ್ಣು, ಬಟ್ಟೆ, ಗೃಹ ಬಳಕೆ ವಸ್ತುಗಳ ವಾರಾಟಕ್ಕೆ ಬರುತ್ತಾರೆ. ಇವರ‌್ಯಾರೂ ಮಕ್ಕಳನ್ನು ಕಾರಿನಲ್ಲಿ ಸುತ್ತಾಡಿಸಿಲ್ಲ, ಈ ಐವರು ಮಕ್ಕಳನ್ನು ಅಪಹರಿಸಲೆಂದೇ ಆಟಿಕೆ ಆಸೆ ತೋರಿಸಿ ಕಾರಿನಲ್ಲಿ ಸಾಗಿಸಲು ಯತ್ನಿಸಿದ್ದರಿಂದ ಪೊಲೀಸರಿಗೆ ದೂರು ನೀಡಲಾಗಿದೆ, ದೇವರ ದಯೆಯಿಂದ ಮಕ್ಕಳು ಪಾರಾಗಿದ್ದಾರೆ, ಪೊಲೀಸರು ವಿಚಾರಣೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು.
    ಜಹೀರ್, ಪಾಲಕರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts