More

    ಆಗಸ್ಟ್​ನಲ್ಲಿ ಮೇಯರ್​, ಉಪ ಮೇಯರ್​ ಆಯ್ಕೆ – ಶಾಸಕ ಅಭಯ ಪಾಟೀಲ

    ಬೆಳಗಾವಿ: ಆಗಸ್ಟ್​ 12ಕ್ಕಿಂತ ಮೊದಲೇ ಬೆಳಗಾವಿ ಮಹಾನಗರ ಪಾಲಿಕೆ ಮೇಯರ್​, ಉಪಮೇಯರ್​ ಚುನಾವಣೆ ನಡೆಯಲಿದ್ದು, ಸ್ವಾತಂತ್ರ ದಿನಾಚರಣೆಯ ಅಮೃತ ಮಹೋತ್ಸವದ ಧ್ವಜಾರೋಹಣವನ್ನು ಪಾಲಿಕೆಯ ಬಿಜೆಪಿ ಮೇಯರ್​ ನೆರವೇರಿಸಲಿದ್ದಾರೆ ಎಂದು ಬೆಳಗಾವಿ ದಣ ಶಾಸಕ ಅಭಯ ಪಾಟೀಲ ತಿಳಿಸಿದರು.

    ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾಲಿಕೆಯ ಮೇಯರ್​, ಉಪಮೇಯರ್​ ಚುನಾವಣೆ ಬಗ್ಗೆ ಈಗಾಗಲೇ ಮುಖ್ಯಮಂತ್ರಿ ಹಾಗೂ ಅಡ್ವೋಕೇಟ್​ ಜನರಲ್​ ಬಳಿ ಚರ್ಚಿಸಲಾಗಿದೆ. ಆಗಸ್ಟ್​ ಆರಂಭದಲ್ಲಿ ಪ್ರಕ್ರಿಯೆಗಳು ಶುರುವಾಗಲಿದ್ದು, ಆ.12ರೊಳಗೆ ಚುನಾವಣೆ ಪ್ರಕ್ರಿಯೆ ನಡೆಯಲಿದೆ. ಆ.15ರ ಸ್ವಾತಂತ್ರ್ಯ ದಿನಾಚರಣೆಗೆ ಪಾಲಿಕೆ ಮೇಲೆ ಬಿಜೆಪಿ ಮೇಯರ್​ ಧ್ವಜಾರೋಹಣ ಮಾಡಲಿದ್ದಾರೆ ಎಂದು ಮಾಹಿತಿ ನೀಡಿದರು.

    ಮೊದಲ ಬಾರಿಗೆ ರಾಜಕೀಯ ಪದ ಅಭ್ಯರ್ಥಿಗಳು ಬೆಳಗಾವಿ ಮಹಾನಗ ಪಾಲಿಕೆ ಮೇಯರ್​ ಆಗ್ತಿದ್ದಾರೆ. ಕೋರ್ಟ್​ ಆದೇಶ, ಮೀಸಲಾತಿ ಹಿನ್ನೆಲೆಯಲ್ಲಿ ಬಹಳ ದಿನಗಳಿಂದ ಉಳಿದಿತ್ತು. ಒಂದು ವಾರದಲ್ಲಿ ಮೀಸಲಾತಿ ಪ್ರಕಟವಾಗಲಿದೆ. ಆ.15ರೊಳಗೆ ಮಹಾನಗ ಪಾಲಿಕೆ ಚುನಾವಣೆ ಆಗುತ್ತದೆ. ಆ.15ರಂದು ನಿಶ್ಚಿತವಾಗಿ ಮಹಾನಗರ ಪಾಲಿಕೆಗೆ ಮೇಯರ್​ ಆಯ್ಕೆ ಆಗುವ ಮೂಲಕ ರಾಷ್ಟ್ರ ಧ್ವಜ ಹಾರಿಸುತ್ತಾರೆ ಎಂದರು.

    ನಗರದಲ್ಲಿ ಬೀದಿ ನಾಯಿಗಳ ಹಾವಳಿ ತಡೆಯುವ ಕುರಿತು ನಾವು ಎಚ್ಚರಿಕೆ ಕೊಟ್ಟ ದಿನದಿಂದಲೇ ಅಧಿಕಾರಿಗಳು ಕೆಲಸ ಪ್ರಾರಂಭಿಸಿದ್ದಾರೆ. ನಾಯಿ ಹಿಡಿದು ಬೆಳಗಾವಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬಿಡ್ತಾರೆ. ಹೀಗಾಗಿ ಅವು ವಾಪಸ್​ ಬರುತ್ತಿದ್ದು, ತೊಂದರೆ ಮುಂದುವರಿದಿದೆ. ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದು ಹೇಳಿದರು.

    ಮಳೆ ಹಾನಿ ತಪ್ಪಿಸುವ ನಿಟ್ಟಿನಲ್ಲಿ 80 ಕೋಟಿ ರೂ.ಅನುದಾನದಲ್ಲಿ ನಗರದಲ್ಲಿರುವ ನಾಲಾಗಳ ಅಗಲೀಕರಣ ಮಾಡಲಾಗುತ್ತಿದೆ. ಇದರಿಂದ ಮುಂದಿನ ದಿನಗಳಲ್ಲಿ ನಗರದಲ್ಲಿ ನೀರು ಆವರಿಸಿದ ಸಮಸ್ಯೆ ಆಗುವುದಿಲ್ಲ. ಬಳ್ಳಾರಿ ನಾಲಾ ನೀರಿನ ಸಮಸ್ಯೆಗೆ ಮತ್ತೊಂದು ಕ್ರಿಯಾಯೋಜನೆ ಸಿದ್ಧಪಡಿಸಬೇಕಿದೆ. ಈ ಭಾಗದಲ್ಲಿ ತರಕಾರಿ ಬೆಳೆಯುವುದಿಲ್ಲ. ಭತ್ತವನ್ನು ಮಾತ್ರ ಹೆಚ್ಚಾಗಿ ಬೆಳೆಯುತ್ತಾರೆ. ಯಾರಿಗಾದರೂ ಸರ್ಕಾರದ ಪರಿಹಾರ ಸಿಕ್ಕಿಲ್ಲ ಎಂದರೆ ಮತ್ತೊಮ್ಮೆ ಸರ್ವೇ ಮಾಡಲು ತಿಳಿಸುತ್ತೇನೆ ಎಂದರು.

    ಸೋನಿಯಾ ಗಾಂಧಿ ಇಡಿ ವಿಚಾರಣೆ ಖಂಡಿಸಿ, ಕಾಂಗ್ರೆಸ್​ ನಡೆಸುತ್ತಿರುವ ಪ್ರತಿಭಟನೆ ವೇಳೆ ಮಾಜಿ ಸ್ಪೀಕರ್​ ರಮೇಶಕುಮಾರ್​ “ಋಣಸಂದಾಯ’ ಮಾತು ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಸೋನಿಯಾ ಗಾಂಧಿ ಯಾರೆಲ್ಲರ ಹೆಸರಿನ ಮೇಲೆ ಆಸ್ತಿ ಮಾಡಿದ್ದಾರೆ, ಎಂಬುವುದನ್ನು ಇನ್ನೊಮ್ಮೆ ಅವಲೋಕನ ಮಾಡಬೇಕು ಎಂದರು.

    ಕರ್ನಾಟಕ ರಾಜ್ಯದಲ್ಲಿ ಾನ ಇರುವ ಕೆಲವೇ ಕೆಲವು ಶಾಸಕರಲ್ಲಿ ರಮೇಶಕುಮಾರ್​ ಒಬ್ಬರು. ಅವರು ಇಂತಹ ಮಾರ್ಗದರ್ಶನ ಮಾಡಿದರೆ ಮುಂದೆ ಎಂತಹ ಶಾಸಕರಾಗಬಹುದು? ಸಮಾಜದ ಮೇಲೆ ಯಾವ ರೀತಿ ಪರಿಣಾಮ ಆಗಬಹುದು. ಹಿರಿಯರು ಹೇಳಿದ್ದಾರೆ ಅಂದ ಮೇಲೆ ಹಿರಿಯಕ್ಕನ ಚಾಳಿ ಮನೆ ಮಂದಿಗೆ ಇದ್ದಂಗೆ ಆಗುತ್ತದೆ. ಅವರೇ ಹೇಳಿದ್ದಾರೆಂದರೆ ಋಣ ತೀರಿಸಲು ಪ್ರತಿಭಟನೆ ಮಾಡ್ತಿದ್ದಾರೆ.

    ಇಡಿಯವರು ಇವರನ್ನು ವಿಚಾರಣೆಗೆ ಏಕೆ ಕರೆದಿದ್ದಾರೆ? ಮುಂದೆ ಅವರ ಮನೆ ಬಾಗಿಲಿಗೆ ಬರಬಾರದು ಎಂದು ಪ್ರತಿಭಟನೆ ಮಾಡ್ತಿದ್ದಾರೆ ಎಂದರು.

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts