More

    ಅಸಮಾನತೆ ತೊಲಗಿಸಲು ಶ್ರಮಿಸಿದ ಶರಣರು

    ತಿ.ನರಸೀಪುರ: ಹನ್ನೆರಡನೇ ಶತಮಾನದಲ್ಲಿದ್ದ ಅಸಮಾನತೆ, ಶೋಷಣೆ ತೊಲಗಿಸಲು ಶರಣರು ಶ್ರಮಿಸಿದ್ದರು. ಮಾಚಿದೇವರು ವಚನ ಸಾಹಿತ್ಯ ಉಳಿಸುವ ನಿಟ್ಟಿನಲ್ಲಿ ಅವರ ಸೇವೆ ಸ್ಮರಣೀಯ ಎಂದು ವರುಣ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದರು.

    ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ತಾಲೂಕು ಆಡಳಿತ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ತಾಲೂಕು ಶ್ರೀವೀರ ಮಡಿವಾಳ ಮಾಚಿದೇವರ ಸಂಘದ ಸಹಯೋಗದಲ್ಲಿ ನಡೆದ ಮಡಿವಾಳ ಮಾಚಿದೇವರ ಜಯಂತಿಯಲ್ಲಿ ಮಾತನಾಡಿದ ಅವರು, ಊಳಿಗಮಾನ್ಯ ಪದ್ಧತಿ, ಜಾತಿ ವ್ಯವಸ್ಥೆಯಲ್ಲಿ ದಲಿತರು, ಹಿಂದುಳಿದವರು ಶೋಷಣೆಗೆ ಒಳಗಾಗಿದ್ದರು. ತಳ ಸಮುದಾಯಗಳಿಗೆ ಸಮಾನತೆ ಕೊಟ್ಟವರು ಶರಣರು. ವಚನ ಸಾಹಿತ್ಯ ಉಳಿಸಿ ಬೆಳೆಸುವಲ್ಲಿ ಅವರ ಸೇವೆ ಇದೆ. ಅನುಭವ ಮಂಟಪದ ಮೂಲಕ ಎಲ್ಲರಿಗೂ ಸಮಾನ ಅವಕಾಶಗಳನ್ನು ಕಲ್ಪಿಸಿದ್ದಾರೆ ಎಂದರು.

    ಶಾಸಕ ಎಂ.ಅಶ್ವಿನ್‌ಕುಮಾರ್ ಮಾತನಾಡಿ, ಬಸವಣ್ಣನ ಅನುಭವದ ಮಂಟಪದಲ್ಲಿ ಮಾಚಿದೇವರು ಸಮರ್ಥವಾಗಿ ಕಾರ್ಯ ನಿರ್ವಹಿಸಿ ಕಾಯಕಕ್ಕೆ ಹೆಸರಾದವರು. ಬಸವಣ್ಣನ ಜತೆ ಸೇರಿ ಕಾರ್ಯ ನಿರ್ವಹಿಸಿದ ರೀತಿಯಿಂದಾಗಿ ಶರಣರ ಚಿಂತನೆಗಳು ಇಂದಿಗೂ ಮಹತ್ವ ಇದೆ. ಅಂಬೇಡ್ಕರ್ ಕೊಟ್ಟ ಸಂವಿಧಾನದ ಆಶಯದಂತೆ ನಾವು ನಡೆಯಬೇಕಿದೆ ಎಂದು ಹೇಳಿದರು.

    ಮಡಿವಾಳ ಸಂಸ್ಥಾನ ಮಠದ ಡಾ.ಬಸವ ಮಾಚಿದೇವರ ಸ್ವಾಮೀಜಿ, ವಾಟಾಳು ಡಾ.ಸಿದ್ದಲಿಂಗಶಿವಾಚಾರ್ಯ ಸ್ವಾಮೀಜಿ, ತಹಸೀಲ್ದಾರ್ ಸಿ.ಜಿ.ಗೀತಾ, ತಾಪಂ ಇಒ ಸಿ. ಕೃಷ್ಣ, ಆಡಳಿತಾಧಿಕಾರಿ ಬಿ.ಎಂ.ಸವಿತಾ, ಪುರಸಭಾಧ್ಯಕ್ಷ ಟಿ.ಎಂ. ನಂಜುಂಡಸ್ವಾಮಿ, ಮಡಿವಾಳರ ಸಂಘದ ಜಿಲ್ಲಾಧ್ಯಕ್ಷ ಎಂ.ರಾಜು, ತಾಲೂಕು ಅಧ್ಯಕ್ಷ ಕುರುಬೂರು ಮಹದೇವಸ್ವಾಮಿ, ಆಲಗೂಡು ಬಸವರಾಜು, ಗುಂಡಶೆಟ್ಟಿ, ಜಯಲಕ್ಷ್ಮೀ, ಮಹದೇವ್, ನಟರಾಜು, ಮೂಗೂರು ಕುಮಾರಸ್ವಾಮಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts