More

    ಅಶೋಕ ಬಾದರದಿನ್ನಿ ಅವರಿಂದ ನಾಟಕಗಳಿಗೆ ಹೊಸ ಆಯಾಮ

    ಚಿತ್ರದುರ್ಗ: ಸೃಜನಶೀಲ ರಂಗ ನಿರ್ದೇಶಕರಲ್ಲಿ ಅಶೋಕ ಬಾದರದಿನ್ನಿ ಕೂಡ ಒಬ್ಬರೆಂದು ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸೃತ ಹಿರಿಯ ಕಲಾವಿದ ಜಂಬೂನಾಥ್ ಹೇಳಿದರು.
    ಬಾದರದಿನ್ನಿ ಆರ್ಟ್ಸ್ ಅಕಾಡೆಮಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಶುಕ್ರವಾರ ನಗರದ ಲಿಲ್ ಬ್ರೂಕ್ಸ್ ಶಾಲೆಯಲ್ಲಿ
    ಆಯೋಜಿಸಿದ್ದ ದಿ.ಅಶೋಕ ಬಾದರದಿನ್ನಿ ರಂಗ ಸ್ಮರಣೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಬಾದರದಿನ್ನಿ ಅವರ ನಾಟಕದ ಪ್ರತಿ ಪ್ರ ಯೋಗದಲ್ಲೂ ಹೊಸತನವಿರುತ್ತಿತ್ತು. ನಾಟಕಗಳಿಗೆ ಅವರು ಹೊಸ ಆಯಾಮ ನೀಡುತ್ತಿದ್ದರು.
    ತಮ್ಮ ಕಲಾ ಸೇವೆಯಿಂದ ಅವರು ಚಿತ್ರದುರ್ಗ ಜಿಲ್ಲೆಯಲ್ಲಿ ಅನೇಕ ಕಲಾವಿದರನ್ನು ಹುಟ್ಟುಹಾಕಿದ್ದಾರೆ ಎಂದರು. ಕರ್ನಾಟಕ ಕಲಾ ಶ್ರೀ ಪ್ರಶಸ್ತಿ ಪುರಸ್ಕೃತ ತೋಟಪ್ಪ ಉತ್ತಂಗಿ ಮಾತನಾಡಿ, ಅಶೋಕ ಬಾದರದಿನ್ನಿ ಅವರಲ್ಲಿ ನಾಟಕ ಹಾಗೂ ರೂಪಕಗಳಿಗೆ ಬೇಕಾದ ಸಂಗೀತದ ಜ್ಞಾನವಿತ್ತು. ಸಂಗೀತ ನಿರ್ದೆಶಕ ಹಾಗೂ ಗಾಯಕನಾಗಿ ಅವರೊಂದಿಗೆ ಕಳೆದ ಸಮಯ ಸ್ಮರಣಿಯವೆಂದರು.
    ರಂಗ ನಿರ್ದೇಶಕ ಕೆ.ಪಿ.ಎಂ.ಗಣೇಶಯ್ಯ ಮಾತನಾಡಿ,ಅಶೋಕ ಬಾದರದಿನ್ನಿ ಅವರು ರಂಗಭೂಮಿಗೆ ಮಹತ್ವದ ಕೊಡುಗೆ ನೀಡಿದ್ದಾರೆ ಎಂದರು. ಬಾದರದಿನ್ನಿ ಆರ್ಟ್ಸ್ ಅಕಾಡೆಮಿ ಅಧ್ಯಕ್ಷೆ ಅನಸೂಯ ಬಾದರದಿನ್ನಿ, ಕಾರ್ಯದರ್ಶಿ ಪ್ರಕಾಶ್ ಬಾದರದಿನ್ನಿ, ಜ್ಯೋತಿ ಬಾದರದಿನ್ನಿ, ಕಲಾವಿದೆ ಪದ್ಮಾ, ಕಲಾವಿದರಾದ ರಂಗನಾಥ್, ಗುರುಕಿರಣ, ವಿಷ್ಣು ಮತ್ತಿತರರು ಇದ್ದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts