More

    ರಂಗ ಮಂದಿರಗಳಲ್ಲಿ ಸಾಂಸ್ಕೃತಿಕ ಹಿರಿಮೆ ಮಾಯ

    ಬಾಗಲಕೋಟೆ: ಮುಳಗಡೆ ಜಿಲ್ಲೆ ಬಾಗಲಕೋಟೆ ಅಖಂಡ ವಿಜಯಪುರ ಜಿಲ್ಲೆಯಿಂದ ಪ್ರತ್ಯೇಕಗೊಂಡ ನಂತರ ಸಾಹಿತ್ಯ, ಸಂಸ್ಕೃತಿ, ಸಂಗೀತ ಪರಂಪರೆ ಕ್ಷಿಣಸದಿರಲಿ ಎನ್ನುವ ಕಾರಣಕ್ಕೆ ಸರ್ಕಾರವು ಕೋಟೆನಾಡಿನ ಅನೇಕ ಭಾಗದಲ್ಲಿ ರಂಗ ಮಂದಿರ, ಕಲಾ ಭವನ, ಸಾಂಸ್ಕೃತಿಕ ಭವನ ಹೆಸರಿನಲ್ಲಿ ವೇದಿಕೆ ಸೃಷ್ಟಿ ಮಾಡಿವೆ. ಆದರೇ ಈಚೆಗಿನ ದಿನಗಳಲ್ಲಿ ಉದ್ದೇಶಿತ ಅಂಶಕ್ಕಿಂತ ಖಾಸಗಿ ಕಾರ್ಯಕ್ರಮಗಳ ಸಿಮೀತವಾಗುತ್ತಿರುವುದು ಬೇಸರ ಮೂಡಿಸಿದೆ…!!

    ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೂಲಕ ಸರ್ಕಾರ ಕೋಟ್ಯಂತರ ರೂ. ಖರ್ಚು ಮಾಡಿ ಕಳೆದ ಎರಡು ದಶಕಗಳಲ್ಲಿ 10 ಕ್ಕೂ ಹೆಚ್ಚು ರಂಗ ಮಂದಿರ ನಿರ್ಮಿಸಲಾಗಿದೆ.

    ಇಳಕಲ್ಲ ಸುವರ್ಣ ರಂಗಮಂದಿರ, ಜಮಖಂಡಿ ರಾನಡೆ ರಂಗ ಮಂದಿರ, ಮಹಾಲಿಂಗಪೂರ ಕೌಜಲಗಿ ನಿಂಗಮ್ಮ ರಂಗ ಮಂದಿರ, ಮುಧೋಳದಲ್ಲಿ ರನ್ನ ಭವನ ಸೇರಿದಂತೆ ಅನೇಕ ಕಡೆ ಸುಸಜ್ಜಿತವಾಗಿ ಭವನ, ರಂಗ ಮಂದಿರ ನಿರ್ಮಿಸಲಾಗಿದೆ. ಬಹುತೇಕ ರಂಗ ಮಂದಿರಗಳನ್ನು ಆಯಾ ಸ್ಥಳೀಯ ಸಂಸ್ಥೆ ನಗರಸಭೆ, ಪುರಸಭೆ, ಕಂದಾಯ ಇಲಾಖೆ ತಹಸೀಲ್ದಾರ ಸೇರಿದಂತೆ ವಿವಿಧ ಇಲಾಖೆಗಳಿಗೆ ಹಸ್ತಾಂತರ ಮಾಡಲಾಗಿದೆ. ನಿರ್ವಹಣೆಗೆ ಆರ್ಥಿಕ ಶಕ್ತಿ ತುಂಬುವ ಉದ್ದೇಶದಿಂದ ಅನುಕೂಲವಾಗಲು ಶುಲ್ಕ ಭರಿಸುವ ವ್ಯಕ್ತಿ, ಸಂಘಟನೆಗಳಿಗೆ ಕಾರ್ಯಕ್ರಮಗಳು ನಡೆಸಲು ಅನುಮತಿ ನೀಡಲಾಗಿದೆ. ಆದರೇ ಸಾಹಿತ್ಯ, ಕಲೆ, ಸಂಗೀತ, ಸಾಂಸ್ಕೃತಿ ಚಟುವಟಿಕೆಗಳ ತಾಣವಾಗಬೇಕಿದ್ದ ಇವುಗಳು ಮದುವೆ, ಮುಂಜವಿ, ಸಿಮೀಂತ ಹಾಗೂ ಸಮಾವೇಶಗಳು ಅತೀ ಹೆಚ್ಚು ಮಾರ್ಧನಿಸುತ್ತೀವೆ.

    ಸಾಂಸ್ಕೃತಿ ಹಿರಿಮೆ, ಗರಿಮೆ ಸ್ಥಾಪಿಸಕಾದ ಸಾರ್ವಜನಿಕರು ಈ ಬಗ್ಗೆ ಅತ್ಯಂತ ಪ್ರಜಾವಂತಿಕೆ ಮೆರಯಬೇಕಿದೆ.

    ಸಾಂಸ್ಕೃತಿ, ಸಾಹಿತ್ಯ, ಕಲೆ, ಸಂಗೀತ ಸೇರಿದಂತೆ ಸಾಂಸ್ಕೃತಿಕ ಲೋಕಕ್ಕೆ ವೇದಿಕೆ ಸೃಷ್ಟಿಸಲು ಸರ್ಕಾರವು ಉತ್ತಮವಾದ ಭವನ, ರಂಗ ಮಂದಿರಗಳನ್ನು ನಿರ್ಮಿಸಲಾಗಿದೆ. ಆದರೇ ಈಚೆಗೆ ಮದುವೆ, ಸಮಾವೇಶದಂತಹ ಬೇರೆ ಉದ್ದೇಶಗಳಿಕೆಯಾಗುತ್ತೀವೆ. ಆರ್ಥಿಕ ಶಕ್ತಿ ಇವುಗಳಿಗೆ ನೀಡುವುದು ತಪ್ಪಲ್ಲ. ಆದರೇ ಸಾಂಸ್ಕೃತಿಕ ಶಕ್ತಿ ಕುಂದುವಂತಾಗಬಾರದು. ಸ್ಥಳೀಯ ಸಂಸ್ಥೆಗಳು, ಖಾಸಗಿ ಸಂಸ್ಥೆಗಳು ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ ಮುಂದಾಗಬೇಕು. ಕಲಾವಿದರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕ್ರಮ ವಹಿಸಬೇಕು.
    ಮಹಾಂತೇಶ ಗಜೇಂದ್ರಗಡ ಹಿರಿಯ ರಂಗಕರ್ಮಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts