More

    ಅಲೆಮಾರಿ ಜನಾಂಗದವರಿಗೆ ನೆರವು

    ನರಗುಂದ: ಲಾಕ್​ಡೌನ್ ಆದೇಶದಿಂದ ತುತ್ತು ಅನ್ನಕ್ಕೂ ಪರದಾಡುತ್ತಿದ್ದ ಅಲೆಮಾರಿ ಜನಾಂಗದವರ ನೆರವಿಗೆ ದಾನಿಗಳು ಮುಂದಾಗಿದ್ದಾರೆ.

    ಈ ಕುರಿತು ‘ವಿಜಯವಾಣಿ’ಯಲ್ಲಿ ಏ.23 ರಂದು ಅಲೆಮಾರಿ ಜನಾಂಗದವರ ಬದುಕು ಮೂರಾಬಟ್ಟೆ ಎಂಬ ಶೀರ್ಷಿಕೆಯಡಿ ವಿಸ್ಕೃತ ವರದಿ ಪ್ರಕಟಿಸಲಾಗಿತ್ತು. ವರದಿಗೆ ಸ್ಪಂದಿಸಿದ ಪುರಸಭೆ ಅಧಿಕಾರಿಗಳು ಭಾನುವಾರ ಅಲೆಮಾರಿ ಜನಾಂಗದ ಪ್ರತಿಯೊಂದು ಕುಟುಂಬಕ್ಕೂ ತಲಾ 5 ಕೆಜಿ ಅಕ್ಕಿ, 2 ಕೆಜಿ ತೊಗರಿ ಬೇಳೆ, 1 ಕೆಜಿ ಬೆಲ್ಲ, 1 ಲೀಟರ್ ಅಡುಗೆ ಎಣ್ಣೆ, ಸಾಬೂನು ಪೌಡರ್, ಹಾಲಿನ ಪ್ಯಾಕೆಟ್ ಸೇರಿ ವಿವಿಧ ಆಹಾರ ಸಾಮಗ್ರಿಗಳ ಕಿಟ್​ಗಳನ್ನು ವಿತರಿಸಿದರು. ಪುರಸಭೆ ಮುಖ್ಯಾಧಿಕಾರಿ ಸಂಗಮೇಶ ಬ್ಯಾಳಿ, ಕಿರಿಯ ಆರೋಗ್ಯ ಸಹಾಯಕಿ ಪ್ರೀತಿ ಗವಿಮಠ, ಮಹಾಂತೇಶ ಚಲವಾದಿ, ಶಿವಾಜಿ ಡುರೇನವರ, ವಿಠ್ಠಲ ಹಡಗಲಿ, ಬಸು ಚಲವಾದಿ, ರಾಚಪ್ಪ ಕೆರೂರ, ರಾಜು ಈಟಿ, ಮಾರುತಿ ದಂಡಾಪೂರ, ಬುದೇಶ ಬಾಣದ, ಇತರರು ಉಪಸ್ಥಿತರಿದ್ದರು.

    ಆರೋಗ್ಯ ಇಲಾಖೆ ಸೂಚನೆಗಳನ್ನು ಪಾಲಿಸಿ

    ಗಜೇಂದ್ರಗಡ: ಮಾಹಾಮಾರಿ ಕರೊನಾ ತಡೆಗಟ್ಟಲು ಈಗಾಗಲೇ ತಾಲೂಕಾಡಳಿತ ಹಾಗೂ ಗ್ರಾಪಂನಿಂದ ಎಲ್ಲ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಅಲ್ಲದೆ, ಗ್ರಾಮಸ್ಥರಿಗೆ ಉಚಿತವಾಗಿ ಮಾಸ್ಕ್ ಮತ್ತು ಸ್ಯಾನಿಟೈಸರ್ ವಿತರಿಸಲಾಗುತ್ತಿದೆ ಎಂದು ರಾಂಪೂರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅನಿತಾ ಅಂಗಡಿ ಹೇಳಿದರು.

    ಸಮೀಪದ ರಾಂಪೂರ ಗ್ರಾಮದಲ್ಲಿ ಸಾಂಕೇತಿಕವಾಗಿ ಸೋಮವಾರ ಗ್ರಾಮಸ್ಥರಿಗೆ ಮಾಸ್ಕ್ ಹಾಗೂ ಸಿಬ್ಬಂದಿಗೆ ಸ್ಯಾನಿಟೈಸರ್ ವಿತರಿಸಿ ಮಾತನಾಡಿದರು. ಕರೊನಾ ಮುಕ್ತ ದೇಶವನ್ನಾಗಿ ಮಾಡುವ ನಿಟ್ಟಿನಲ್ಲಿ ಶ್ರಮಿಸುತ್ತಿರುವ ಅಧಿಕಾರಿಗಳ ಕೈ ಬಲಪಡಿಸಲು ನಾವೆಲ್ಲರೂ ಆರೋಗ್ಯ ಇಲಾಖೆ ಸೂಚನೆಗಳನ್ನು ಪಾಲಿಸುವುದರ ಜತೆಗೆ ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಪಾಡಬೇಕು ಎಂದರು.

    ಪಿಡಿಒ ಶರಣಬಸವ ನರೇಗಲ್ ಮಾತನಾಡಿ, ಲಾಕ್​ಡೌನ್​ನಿಂದಾಗಿ ಉದ್ಯೋಗವಿಲ್ಲದೆ ಗ್ರಾಮಸ್ಥರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ಆರೋಗ್ಯ ರಕ್ಷಣೆ ಜತೆಗೆ ಉದ್ಯೋಗ ಸೃಷ್ಟಿ ಉದ್ಧೇಶದಿಂದ ಗ್ರಾಮ ಪಂಚಾಯಿತಿಯಿಂದ ಸ್ತ್ರೀ ಶಕ್ತಿ ಸಂಘಗಳಿಗೆ ಮಾಸ್ಕ್ ಸಿದ್ಧಪಡಿಸಲು ಅವಕಾಶ ಕಲ್ಪಿಸಿ 1 ಮಾಸ್ಕ್​ಗೆ ರೂ.3 ರಂತೆ ಖರೀದಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಅಗತ್ಯಕ್ಕೆ ತಕ್ಕಂತೆ ಮಾಸ್ಕ್ ಸಿದ್ಧಪಡಿಸಿ ಪಂಚಾಯಿತಿ ವ್ಯಾಪ್ತಿಯಲ್ಲಿ ವಿತರಿಸಲಾಗುವುದು ಎಂದರು. ಗ್ರಾಪಂ ಉಪಾಧ್ಯಕ್ಷೆ ಯಲ್ಲಮ್ಮ ಜಿಗೇರಿ, ಕಳಕಪ್ಪ ಮ್ಯಾಗೇರಿ, ದೊಡ್ಡನಗೌಡ ಗೌಡ್ರ, ಕನಕಪ್ಪ ಮಾದರ, ಅಶೋಕ ಕಂಡಿ, ಭಾಗ್ಯಜ್ಯೋತಿ ಹಡಪದ, ರೇಣುಕಯ್ಯ ಅಂಗಡಿ, ಮಲ್ಲಪ್ಪ ಗೌಡ್ರ, ಶರಣಪ್ಪ ಕಡಬಲಕಟ್ಟಿ ಸೇರಿ ಇತರರು ಇದ್ದರು.

    ಎಲೆ ಅಡಿಕೆ, ಗುಟ್ಖಾ ಮಾರಾಟ ನಿಷೇಧ

    ಮುಳಗುಂದ: ಜಿಲ್ಲಾಧಿಕಾರಿ ಆದೇಶದ ಮೇರೆಗೆ ತಂಬಾಕು ಉತ್ಪನ್ನ ಗಳಾದ ಪಾನ್ ಮಸಾಲ, ಜರ್ದಾ, ಖೈನಿ, ಸುಪಾರಿ, ಎಲೆ ಅಡಕೆ, ಇತ್ಯಾದಿ ಉತ್ಪನ್ನಗಳ ಮಾರಾಟ ಹಾಗೂ ಉಗುಳುವುದನ್ನು ನಿಷೇಧಿಸಲಾಗಿದೆ. ಆದೇಶ ಉಲ್ಲಂಘಿಸುವುದು ಅಪರಾಧವಾಗಿದೆ. ಇದನ್ನು ಉಲ್ಲಂಘನೆ ಮಾಡಿ ಮಾರಾಟ ಮಾಡುವದು, ಅಥವಾ ಜಗಿಯುವುದು ಕಂಡು ಬಂದಲ್ಲಿ ಸಂಬಂಧಿಸಿದವರ ಮೇಲೆ ಶಿಸ್ತು ಕ್ರಮ ಜರುಗಿಸಲಾಗುವದು ಎಂದು ಮುಖ್ಯಾಧಿಕಾರಿ ಎಂ.ಎಸ್. ಬೆಂತೂರ ತಿಳಿಸಿದ್ದಾರೆ.

    ಸರ್ಕಾರದ ನಿಯಮ ಪಾಲಿಸಿ

    ಮುಳಗುಂದ: ಕರೊನಾ ನಿಯಂತ್ರಣಕ್ಕಾಗಿ ಸರ್ಕಾರ ನೀಡುವ ಸಲಹೆಗಳನ್ನು ಎಲ್ಲರೂ ತಪ್ಪದೆ ಪಾಲಿಸಬೇಕು ಎಂದು ಗದಗ ಎಪಿಎಂಸಿ ಅಧ್ಯಕ್ಷ ಸಿ.ಬಿ. ಬಡ್ನಿ ಹೇಳಿದರು.

    ಸ್ಥಳೀಯ ಪಪಂ ಕಾರ್ಯಾಲಯದಲ್ಲಿ ಇತ್ತೀಚೆಗೆ ಪಪಂನ 19 ವಾರ್ಡ್​ಗಳಿಗೂ ಉಚಿತವಾಗಿ ಮಾಸ್ಕ್ ವಿತರಿಸಿ ಅವರು ಮಾತನಾಡಿದರು. ಎಲ್ಲ ವಾರ್ಡ್​ಗಳ ಸದಸ್ಯರು ರೋಗದ ಬಗ್ಗೆ ಜಾಗೃತಿ ಮೂಡಿಸಬೇಕು. ಸ್ವಚ್ಛತೆ ಕಾಯ್ದುಕೊಂಡು ಆರೋಗ್ಯದ ಬಗ್ಗೆ ಕಾಳಜಿ ತೋರಬೇಕು. ಮುಳಗುಂದ, ಸಿತಾಲಹರಿ, ಬಸಾಪೂರ ಗ್ರಾಮಗಳ ಮನೆ ಮನೆಗೆ ಸ್ವಂತ ಖರ್ಚಿನಲ್ಲಿ ಮಾಸ್ಕ್ ವಿತರಿಸಲಾಗಿದೆ ಎಂದರು. ಆರ್.ಎನ್. ದೇಶಪಾಂಡೆ, ಎಂ.ಡಿ. ಬಟ್ಟೂರ, ಪಿ.ಎ. ವಂಟಕರ, ಮಹಾಂತೇಶ ನೀಲಗುಂದ, ವಿ.ಎಸ್. ನೀಲಗುಂದ, ಕೆ.ಎಲ್. ಕರಿಗೌಡ್ರ, ಬಸವರಾಜ ಹಾರೋಗೇರಿ, ಲಕ್ಮವ್ವ ಕುಂದಗೋಳ, ಮಹಾದೇವಪ್ಪ ಗಡಾದ ಇತರರು ಉಪಸ್ಥಿತರಿದ್ದರು.

    ಸರ್ಕಾರದ ನಿಯಮ ಪಾಲಿಸಿ

    ಮುಳಗುಂದ: ಕರೊನಾ ನಿಯಂತ್ರಣಕ್ಕಾಗಿ ಸರ್ಕಾರ ನೀಡುವ ಸಲಹೆಗಳನ್ನು ಎಲ್ಲರೂ ತಪ್ಪದೆ ಪಾಲಿಸಬೇಕು ಎಂದು ಗದಗ ಎಪಿಎಂಸಿ ಅಧ್ಯಕ್ಷ ಸಿ.ಬಿ. ಬಡ್ನಿ ಹೇಳಿದರು.

    ಸ್ಥಳೀಯ ಪಪಂ ಕಾರ್ಯಾಲಯದಲ್ಲಿ ಇತ್ತೀಚೆಗೆ ಪಪಂನ 19 ವಾರ್ಡ್​ಗಳಿಗೂ ಉಚಿತವಾಗಿ ಮಾಸ್ಕ್ ವಿತರಿಸಿ ಅವರು ಮಾತನಾಡಿದರು. ಎಲ್ಲ ವಾರ್ಡ್​ಗಳ ಸದಸ್ಯರು ರೋಗದ ಬಗ್ಗೆ ಜಾಗೃತಿ ಮೂಡಿಸಬೇಕು. ಸ್ವಚ್ಛತೆ ಕಾಯ್ದುಕೊಂಡು ಆರೋಗ್ಯದ ಬಗ್ಗೆ ಕಾಳಜಿ ತೋರಬೇಕು. ಮುಳಗುಂದ, ಸಿತಾಲಹರಿ, ಬಸಾಪೂರ ಗ್ರಾಮಗಳ ಮನೆ ಮನೆಗೆ ಸ್ವಂತ ಖರ್ಚಿನಲ್ಲಿ ಮಾಸ್ಕ್ ವಿತರಿಸಲಾಗಿದೆ ಎಂದರು. ಆರ್.ಎನ್. ದೇಶಪಾಂಡೆ, ಎಂ.ಡಿ. ಬಟ್ಟೂರ, ಪಿ.ಎ. ವಂಟಕರ, ಮಹಾಂತೇಶ ನೀಲಗುಂದ, ವಿ.ಎಸ್. ನೀಲಗುಂದ, ಕೆ.ಎಲ್. ಕರಿಗೌಡ್ರ, ಬಸವರಾಜ ಹಾರೋಗೇರಿ, ಲಕ್ಮವ್ವ ಕುಂದಗೋಳ, ಮಹಾದೇವಪ್ಪ ಗಡಾದ ಇತರರು ಉಪಸ್ಥಿತರಿದ್ದರು.

    ತೋಟಗಾರಿಕೆ ಬೆಳೆಗೆ ಬೆಂಬಲ ನೀಡಿ

    ಲಕ್ಷ್ಮೇಶ್ವರ: ಲಾಕ್​ಡೌನ್ ಹಿನ್ನ್ನೆಲೆಯಲ್ಲಿ ತೋಟಗಾರಿಕೆ ಉತ್ಪನ್ನಗಳು ಹಾಳಾಗಿದ್ದರಿಂದ ರೈತರಿಗೆ ಸಹಾಯಧನ ಕಲ್ಪಿಸಬೇಕು. ತೋಟಗಾರಿಕೆ ಉತ್ಪನ್ನಗಳಾದ ತರಕಾರಿ, ಹೂವು, ಹಣ್ಣು ಇತರ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ಮತ್ತು ಬೆಲೆ ಒದಗಿಸುವ ವ್ಯವಸ್ಥೆ ಮಾಡಬೇಕು ಎಂದು ಶಿರಹಟ್ಟಿ/ಲಕ್ಷ್ಮೇಶ್ವರ ತಾಲೂಕು ಪಕ್ಷಾತೀತ ರೈತಪರ ಹೋರಾಟ ವೇದಿಕೆ ಅಧ್ಯಕ್ಷ ಮಹೇಶ ಹೊಗೆಸೊಪ್ಪಿನ ಸೋಮವಾರ ತಹಸೀಲ್ದಾರ್​ಗೆ ಮನವಿ ಸಲ್ಲಿಸಿದರು.

    ‘ತೋಟಗಾರಿಕೆ ಉತ್ಪನ್ನಗಳಿಗೆ ಬೆಂಬಲ ಬೆಲೆ ಘೊಷಿಸಬೇಕು. ತಾಲೂಕಿನಲ್ಲಿ ಕೋಲ್ಡ್ ಸ್ಟೋರೇಜ್ ನಿರ್ವಣವಾಗಬೇಕು. ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ವಾರದ ಎಲ್ಲ ದಿನಗಳು ಪಟ್ಟಣದಲ್ಲಿ ಕಾರ್ಯ ನಿರ್ವಹಿಸಬೇಕು. ಪಟ್ಟಣದ ಮಾರ್ಕೆಟ್​ನಲ್ಲಿ ಲಾಕ್​ಡೌನ್ ನಿಯಮಗಳು ಕಟ್ಟುನಿಟ್ಟಾಗಿ ಪಾಲನೆಯಾಗಬೇಕು’ ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. ರೈತರಾದ ಶಿವಾನಂದ ಲಿಂಗಶೆಟ್ಟಿ, ಟಿ.ವೈ. ಸಾತಪುತೆ, ಖಾನಸಾಬ ಸೂರಣಗಿ, ಸಂತೋಷ ಕೊಟೂರ, ಸೋಮಶೇಖರ ಪಾಟೀಲ ಇದ್ದರು. ಉಪತಹಸೀಲ್ದಾರ ಎಂ.ಜಿ. ದಾಸಪ್ಪನವರ ಮನವಿ ಸ್ವೀಕರಿಸಿದರು.

    ಸ್ವಚ್ಛತೆ, ಆರೋಗ್ಯ ಕಾಪಾಡಿಕೊಳ್ಳಿ

    ಲಕ್ಷ್ಮೇಶ್ವರ: ಮಾಡಳ್ಳಿ ಗ್ರಾಪಂ ವತಿಯಿಂದ ಕರೊನಾ ತಡೆಗೆ ಮಾಡಳ್ಳಿ, ಯತ್ತನಿಹಳ್ಳಿ ಗ್ರಾಮಸ್ಥರಿಗೆ ಉಚಿತವಾಗಿ ಮಾಸ್ಕ್ ವಿತರಿಸಲಾಯಿತು. ಗ್ರಾಪಂ ಅಧ್ಯಕ್ಷ ಮಂಜುನಾಥ ದೊಡ್ಡಮನಿ ಮಾತನಾಡಿ, ಕರೊನಾ ವೈರಸ್ ತಡೆಗೆ ಗ್ರಾಪಂ ವ್ಯಾಪ್ತಿಯ ಎಲ್ಲ ಗ್ರಾಮಗಳಲ್ಲೂ ಮಾಸ್ಕ್ ವಿತರಿಸಲಾಗಿದೆ. ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಇರುವ ಏಕೈಕ ಮಾರ್ಗ ಸಾಮಾಜಿಕ ಅಂತರ ಕಾಯುವುದು. ಅದಕ್ಕಾಗಿ ಯಾರೂ ವಿನಾಕಾರಣ ಮನೆಯಿಂದ ಹೊರಗೆ ತಿರುಗಾಡುವುದು, ಗುಂಪು ಗೂಡುವುದು ಮಾಡದೇ ಸ್ವಚ್ಛತೆ, ಆರೋಗ್ಯ ಕಾಪಾಡಬೇಕು ಎಂದರು. ಗ್ರಾಪಂ ಉಪಾಧ್ಯಕ್ಷೆ ಮೆಹಬೂಬಿ ನದಾಫ್, ಸದಸ್ಯರಾದ ವಿ.ವಿ. ಮತ್ತೂರ, ಆರ್.ಟಿ. ಹಿರೇಮಠ, ಪಿ.ಎಫ್. ಬಳೂಟಗಿ, ಎಸ್.ಎಸ್. ರಾಯನಗೌಡ್ರ, ಪಿ.ಐ. ಬಡಿಗೇರ, ನೋಡಲ್ ಅಧಿಕಾರಿ ಎಸ್.ಎಸ್. ಪತ್ತಾರ, ಪಿಡಿಒ ಎಂ.ಎನ್. ಮಲ್ಲೂರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts