More

    ಅಲೆಮಾರಿಗಳ ಕುಂದುಕೊರತೆ ಆಲಿಸಿದ ಜಿಲ್ಲಾಧಿಕಾರಿ

    ದಾವಣಗೆರೆ: ದೂರದೂರುಗಳಿಂದ ಉದ್ಯೋಗ ಅರಸಿ ಜಿಲ್ಲೆಗೆ ಆಗಮಿಸಿದ್ದ ಅಲೆಮಾರಿಗಳು ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಬನಶಂಕರಿ ಬಡಾವಣೆ ಬಳಿಯ ಸೇವಾ ರಸ್ತೆ ಪಕ್ಕದಲ್ಲಿ ಡೇರಿ ಹಾಕಿಕೊಂಡು ವಾಸಿಸುತ್ತಿದ್ದು, ಸ್ಥಳಕ್ಕೆ ಗುರುವಾರ ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಭೇಟಿ ಮಾಡಿ ಕುಂದುಕೊರತೆ ಆಲಿಸಿದರು.

    ಕಲಬುರಗಿ, ಸೊಲ್ಲಾಪುರ, ಚನ್ನಗಿರಿಯ ಅಸ್ತಾಪನಹಳ್ಳಿಯಿಂದ ಉದ್ಯೋಗ ಅರಸಿ ಬಂದಿದ್ದಾರೆ. ಕಳೆದೆರಡು ದಿನಗಳಿಂದ ವಿವಿಧೆಡೆ ಗಾಳಿ, ಸಿಡಿಲು, ಮಳೆಯಾಗುತ್ತಿದ್ದು ಬಯಲು ಪ್ರದೇಶದಲ್ಲಿ ಈ ಜನರು ವಾಸಿಸುತ್ತಿದ್ದಾರೆ. ರಾಜ್ಯದಲ್ಲಿ ಇತರೆಡೆ ಮಳೆ, ಸಿಡಿಲಿಗೆ ಜನ, ಜಾನುವಾರುಗಳು ಸಾವನ್ನಪ್ಪಿದ್ದು ಈ ಹಿನ್ನಲೆಯಲ್ಲಿ ಅವರ ಕಷ್ಟಗಳನ್ನು ಆಲಿಸಲಾಯಿತು.
    ಇಲ್ಲಿ ಒಟ್ಟು 21 ಕುಟುಂಬಗಳು ವಾಸಿಸುತ್ತಿದ್ದು ಇದರಲ್ಲಿ ಕಲಬುರಗಿಯ ಚಿಂಚೊಳ್ಳಿ ಗ್ರಾಮದ ಕೆಲ ಕುಟುಂಬದ ಸದಸ್ಯರು ಗ್ಯಾಸ್ ಸ್ಟೌ ರಿಪೇರಿ ಕೆಲಸ ಮಾಡಲು ಬಂದು ನೆಲೆಸಿದ್ದಾರೆ. ಸೊಲ್ಲಾಪುರದಿಂದ ಬಂದ ಕೆಲ ಕುಟುಂಬದವರು ಖಾಲಿ ಬಾಟಲಿ ಸಂಗ್ರಹಿಸುತ್ತಿದ್ದಾರೆ. ಚನ್ನಗಿರಿಯ ಅಸ್ತಾಪನಹಳ್ಳಿಯ ಹಕ್ಕಿಪಿಕ್ಕಿ ಜನಾಂಗದವರು ಇಲ್ಲಿ ತಾತ್ಕಾಲಿಕ ಟೆಂಟ್ ನಿರ್ಮಿಸಿಕೊಂಡು ವಿವಿಧ ಉದ್ಯೋಗ ಮಾಡುತ್ತಿದ್ದಾರೆ.
    ಸ್ವ ಉದ್ಯೋಗಕ್ಕೆ ಕ್ರಮ:
    ಈ ಕುಟುಂಬಗಳ ಚಿಣ್ಣರಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಪೌಷ್ಟಿಕ ಆಹಾರ ವಿತರಿಸಲು ತಿಳಿಸಲಾಗಿದೆ. ಹಕ್ಕಿಪಿಕ್ಕಿ ಜನರು ಜಿಲ್ಲೆಯವರಾಗಿದ್ದು ಇವರಿಗೆ ಅಭಿವೃದ್ಧಿ ನಿಗಮದ ಮೂಲಕ ಸ್ವಂತ ಉದ್ಯೋಗಕ್ಕೆ ಸಾಲ, ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಡಿಸಿ ಭರವಸೆ ನೀಡಿದರು.
    ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ರಮೇಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ವಾಸಂತಿ ಉಪ್ಪಾರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts